ತಾಲೂಕಿನ ನಕಲಿ ವೈದ್ಯರು ಒಳಗೊಂಡಂತೆ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿನ ಸಮಸ್ಯೆಗಳನ್ನು ಸೆಪ್ಟಂಬರ್ 17ರಂದು ಕೋಲಾರ ಅಥವಾ ರಾಮನಗರದಲ್ಲಿನಡೆಯಲಿರುವ ಬೆಂಗಳೂರು ವಿಭಾಗ ವ್ಯಾಪ್ತಿಯ ಸಭೆಯಲ್ಲಿಚರ್ಚಿಸಿ, ಬಗೆಹರಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಆರೋಗ್ಯ ಸೌಧ ಬೆಂಗಳೂರು ವಿಭಾಗದ ವಿಭಾಗೀಯ ಸಹಾಯಕ ನಿರ್ದೇಶಕ ಡಾ.ಆರ್ .ರವಿ ತಿಳಿಸಿದರು.
ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ್ದ ಅವರು, ಸ್ಥಳೀಯ ಆಸ್ಪತ್ರೆ ಸೇರಿದಂತೆ ಆರೋಗ್ಯ ಇಲಾಖೆಯ ಇನ್ನಿತರೆ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಆನಂತರ ಮಾತನಾಡಿದರು.
ಅಂದು ನಡೆಯುವ ಸಭೆಯಲ್ಲಿಆರೋಗ್ಯ ಸಚಿವರು ಹಾಗೂ ಎಂಟು ಜಿಲ್ಲೆಗಳ ಡಿಎಚ್ ಒಗಳು ಹಾಜರಿರುತ್ತಾರೆ. ನಕಲಿ ವೈದ್ಯರಿಂದ ಆಗುವ ದುಷ್ಪರಿಣಾಮ ಮತ್ತು ಅವರ ವಿರುದ್ಧ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಬಗ್ಗೆಯೂ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ನಾನು ಗಡಿಭಾಗದ ಆಸ್ಪತ್ರೆಗೆ ಭೇಟಿ ನೀಡಿದ ಉದ್ದೇಶವೇ ಇಲ್ಲಿನ ಸಮಸ್ಯೆಗಳನ್ನು ಪರಿಪೂರ್ಣವಾಗಿ ಅರಿತು ಬಗೆಹರಿಸುವುದು ಎಂದರು.
ತಾಲೂಕಿಗೆ ಮಂಜೂರಾಗಿರುವ 200 ಬೆಡ್ ಆಸ್ಪತ್ರೆಯು ಬೇರೆಡೆಗೆ ಸ್ಥಳಾಂತರದ ಬಗ್ಗೆ ಮಾಹಿತಿ ಪಡೆದ ಅವರು, ಈ ವಿಷಯವನ್ನು ಆರೋಗ್ಯ ಸಚಿವರ ಉಪಸ್ಥಿತಿಯ ಸಭೆಯಲ್ಲಿಚರ್ಚಿಸಲಾಗುವುದು. ಇದು ಸರಕಾರಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ಶಾಸಕರ ಬಳಿ ಮೊದಲು ಮಾತುಕತೆ ನಡೆಸಿ ವಸ್ತುಸ್ಥಿತಿ ಅರಿತು ಆಸ್ಪತ್ರೆಯನ್ನು ತಾಲೂಕಿನಲ್ಲಿನಿರ್ಮಿಸಲು ಸಹಕರಿಸುವುದಾಗಿ ತಿಳಿಸಿದರು.
ಸ್ಥಳೀಯ ಆಸ್ಪತ್ರೆಯಲ್ಲಿನ ವೈದ್ಯರೊಬ್ಬರು ಔಷಧ ಚೀಟಿ ಬರೆದು, ಇಂತಹದ್ದೇ ಮೆಡಿಕಲ್ ಶಾಪ್ ನಲ್ಲಿ ತರುವಂತೆ ತಿಳಿಸುತ್ತಾರೆ. ಅನ್ಯ ಮೆಡಿಕಲ್ಸ್ ಸ್ಟೋರ್ ನಿಂದ ತಂದರೆ ವಾಪಸ್ ಕಳುಹಿಸುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಈ ಆಸ್ಪತ್ರೆಯಲ್ಲಿಶುಶ್ರೂಷಕಿಯರ ಕೊರತೆಯಿದ್ದರೂ ನಾಲ್ಕು ಜನ ಸಿಸ್ಟರ್ ಗಳನ್ನು ಬೇರೆಡೆಗೆ ನಿಯೋಜಿಸಲಾಗಿದೆ. ಕೆಲವು ತಜ್ಞ ವೈದ್ಯರ ಕೊರತೆ ಹೆಚ್ಚು ಕಾಡುತ್ತಿದೆ ಎಂದೆಲ್ಲಾಸಾರ್ವಜನಿಕರು ಆರೋಪಿಸಿದರು.
ವೈದ್ಯರ ಕೊರತೆ ಹೆಚ್ಚಿದೆ, ಖಾಲಿ ಹುದ್ದೆಗೆ ಯಾವುದೇ ತಜ್ಞ ವೈದ್ಯರು ಆಗಮಿಸಿದರೂ ಅವರನ್ನು ವಾರದೊಳಗಾಗಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯಕ್ಕೆ ತೆಗೆದುಕೊಳ್ಳುವಂತೆ ಈಗಾಗಲೇ ಡಿಎಚ್ ಒಗೆ ಸೂಚಿಸಲಾಗಿದೆ. ತಜ್ಞ ವೈದ್ಯರ ಮಾಹಿತಿ ತಿಳಿದವರು ಆಸ್ಪತ್ರೆ ಆಡಳಿತಾಧಿಕಾರಿ ಗಮನಕ್ಕೆ ತಂದು ಸಹಕರಿಸಬಹುದು ಎಂದರು.
ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವೆಂಕಟೇಶ್ , ಪ್ರಭಾರ ಟಿಎಚ್ ಒ ಡಾ.ಗಿರೀಶ್ , ಬೆಂಗಳೂರು ವಿಭಾಗದ ಜಿಲ್ಲಾಆರೋಗ್ಯ ಶಿಕ್ಷಣಾಧಿಕಾರಿ ಜಯಲಕ್ಷಿತ್ರ್ಮ, ಪ್ರಥಮ ದರ್ಜೆ ಗುಮಾಸ್ತ ಎಚ್ .ಗಿರೀಶ್ ಇದ್ದರು.
---
2 ಎಂಎಲ್ ಕೆ ಪಿ 1
ಮೊಳಕಾಲ್ಮುರು ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಬುಧವಾರ ಆರೋಗ್ಯ ಸೌಧ ಬೆಂಗಳೂರು ವಿಭಾಗದ ವಿಭಾಗೀಯ ಸಹಾಯಕ ನಿರ್ದೇಶಕ ಡಾ.ಆರ್ .ರವಿ ಭೇಟಿ ನೀಡಿ, ಪರಿಶೀಲಿಸಿದರು.