‘ ಸೌದಿ ಅರೇಬಿಯಾ , ಇರಾನ್ ನಲ್ಲೂಪ್ರಚಾರ’ವಿಕ ಸುದ್ದಿಲೋಕ ಕೊಪ್ಪಳ
ಇಸ್ಲಾಂ ಧರ್ಮ ಕುರಿತು ನಾನು ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ, ಇರಾನ್ ನಲ್ಲೂನನಗೆ ಪ್ರಚಾರ ಸಿಕ್ಕಿದೆ. ಇದನ್ನು ಸಿಎಂ ಸಹ ಹೇಳಿದ್ದಾರೆ. ಎರಡು ದಿನ ಪ್ರಚಾರ ಕೊಟ್ಟಿದ್ದಕ್ಕೆ ಧನ್ಯವಾದ. ಇಲ್ಲದಿದ್ದರೆ ನಾನು ಎಂದರೆ ಯಾರಿಗೂ ಗೊತ್ತಿರಲಿಲ್ಲ,’’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.
ತಾಲೂಕಿನ ಕಲ್ಲೂರು ಗ್ರಾಮದಲ್ಲಿಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘‘ನನ್ನನ್ನು ಎರಡು ದಿನ ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿತೋರಿಸಿದರು. ಬಿಹಾರದ ಸಂಸದ ಡ್ಯಾನಿಶ್ ಅಲಿ ಫೋನ್ ಮಾಡಿದ್ದರು. ಮಂಗಳವಾರ ಸಿಎಂ ಡಿ.ಕೆ. ಶಿವಕುಮಾರ್ ಕೂಡ ಕೇಳಿದರು. ಅಲ್ ಝಜೀರಾದಲ್ಲೂತೋರಿಸಿದ್ದಾರೆ. ಹಾಗಾಗಿ ನಿಮಗೆ ಥ್ಯಾಂಕ್ಸ್ . ಜನಾನೇ ದೇವರು ಎಂದರು.
‘‘ನಾನು ಮಾನಸ ಸರೋವರಕ್ಕೂ ಹೋಗಿದ್ದೇನೆ. ಶಕ್ತಿ ಪೀಠ ಕಾಮಾಕ್ಯಕ್ಕೆ ಹೋಗಿದ್ದೇನೆ. ನಾಲ್ಕೈದು ಶಕ್ತಿಪೀಠಕ್ಕೆ ಹೋಗಿ ಸ್ಟಡಿ ಮಾಡಿದ್ದೇನೆ. ವೈಷ್ಣವಿ ದೇವಿಗೆ ಸವದಿ, ನಾನು, ಆರ್ .ಅಶೋಕ ಎಲ್ಲರೂ ಹೋಗಿದ್ದೆವು ಎಂದು ವೈಷ್ಣವಿ ದೇವಿಯ ಫೊಟೊ ತೋರಿಸಿದರು. ಜುಡಾಯಿಸಂ ಬಗ್ಗೆ ನಾನು ಸ್ಟಡಿ ಮಾಡಿದ್ದೇನೆ. ಜೈನಿಸಂ ಬಗ್ಗೆ ಸ್ಟಡಿ ಮಾಡಿದ್ದೇನೆ. ಸಾರಾನಾಥಗೂ ಹೋಗಿದ್ದೇನೆ. ಬುದ್ಧ ತಪಸ್ಸು ಮಾಡಿದ ಮರದ ಕೆಳಗೆ ನಾನು ಕುಳಿತು ಬಂದಿದ್ದೇನೆ. ಉಪನಿಷತ್ತು ಓದಿದ್ದೇನೆ. ವೇದಗಳ ಬಗ್ಗೆ ಓದಿದ್ದೇನೆ. ಏಸು ಕ್ರಿಸ್ತನ ಸಮಾಧಿಗೆ ಹೋಗಿದ್ದೇನೆ. ನಾನು ಮುಸ್ಲಿಂ ಧರ್ಮದ ಸಾಮೂಹಿಕ ಕಾರ್ಯಕ್ರಮದಲ್ಲಿಎಲ್ಲಧರ್ಮ ಶ್ರೇಷ್ಠ ಎಂದು ಹೇಳಿದ್ದು, ಮುಸ್ಲಿಂ ಸಮುದಾಯದ ಸಭೆಯಲ್ಲಿಅವರನ್ನು ಬಯ್ಯುವುದಕ್ಕೆ ಆಗುತ್ತದೆಯಾ?,’’ ಎಂದು ಪ್ರಶ್ನಿಸಿದರು.