Shanghai Cooperation Organization The Largest Regional Organization In Asia
ವಿಜ್ಞಾನ ಲೋಕ
Contributed by: Shrividya Rao|Vijaya Karnataka•
ಶಾಂಘೈ ಸಹಕಾರ ಸಂಸ್ಥೆ
ಇದು ಯುರೇಷಿಯಾ ಪ್ರದೇಶದ ರಾಜಕೀಯ, ಆರ್ಥಿಕ ಮತ್ತು ಭದ್ರತಾ ವಿಷಯಗಳಿಗೆ ಸಂಬಂಧಿಧಿಧಿಸಿದ ಒಂದು ಅಂತಾರಾಷ್ಟ್ರೀಯ ಪ್ರಾದೇಶಿಕ ಸಂಸ್ಥೆಯಾಗಿದೆ. 2001 ಜೂನ್ 15ರಂದು ಚೀನಾದ ಶಾಂಘೈನಲ್ಲಿಸ್ಥಾಪಿಸಲಾಯಿತು. 1996ರಲ್ಲಿಚೀನಾ, ರಷ್ಯಾ, ಕಝಾಕಿಸ್ತಾನ್ , ಕಿರ್ಗಿಸ್ತಾನ್ ಮತ್ತು ತಜಿಕಿಸ್ತಾನ್ ಸೇರಿ ಶಾಂಘೈ ಐದು ಒಕ್ಕೂಟವನ್ನು ರಚಿಸಿಕೊಂಡಿದ್ದವು. 2001ರಲ್ಲಿಉಜ್ಬೆಕಿಸ್ತಾನ್ ಸೇರ್ಪಡೆಯಾದ ನಂತರ ಇದನ್ನು ಘ್ಕಿ ಎಸ್ ಸಿಒ ಎಂದು ಮರುನಾಮಕರಣ ಮಾಡಲಾಯಿತು. ಭಯೋತ್ಪಾದನೆ, ಪ್ರತ್ಯೇಕತಾವಾದ ಮತ್ತು ಉಗ್ರವಾದವನ್ನು ಮೆಟ್ಟಿಲಿಸುವುದು. ಸದಸ್ಯ ರಾಷ್ಟ್ರಗಳ ನಡುವೆ ವ್ಯಾಪಾರ, ಆರ್ಥಿಕತೆ, ತಂತ್ರಜ್ಞಾನ, ವಿಜ್ಞಾನ, ಇಂಧನ ಮತ್ತು ಸಂಸ್ಕೃತಿಯಲ್ಲಿನಿಕಟ ಬಾಂಧವ್ಯ ಬೆಳೆಸುವುದು. ಮಧ್ಯ ಏಷ್ಯಾ ಹಾಗೂ ಯುರೇಷಿಯಾ ಪ್ರದೇಶದಲ್ಲಿಪ್ರಾದೇಶಿಕ ಶಾಂತಿಯನ್ನು ಕಾಯ್ದುಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ. ಭಾರತ ಮತ್ತು ಪಾಕಿಸ್ತಾನ 2017ರಲ್ಲಿಪೂರ್ಣ ಪ್ರಮಾಣದ ಸದಸ್ಯರಾಗಿ ಸೇರ್ಪಡೆಯಾದವು. ಇದು ಪ್ರಸ್ತುತ ವಿಶ್ವದ ಅತಿ ದೊಡ್ಡ ಪ್ರಾದೇಶಿಕ ಸಂಸ್ಥೆಗಳಲ್ಲಿಒಂದಾಗಿದ್ದು, ಜಾಗತಿಕ ಜನಸಂಖ್ಯೆ ಮತ್ತು ಭೂಪ್ರದೇಶದ ದೊಡ್ಡ ಭಾಗವನ್ನು ಪ್ರತಿನಿಧಿಧಿಧಿಸುತ್ತದೆ.ಫೈಲ್ ನೇಮ್ - ಶಾಂಘೈ
----
ಖಾರ್ಗ್ ದ್ವೀಪ (ಘ್ಕಿಓha್ಟಜ ಐs್ಝa್ಞd)
ಪರ್ಷಿಯನ್ ಗಲ್ ್ಫನಲ್ಲಿರುವ ಇರಾನ್ ದೇಶಕ್ಕೆ ಸೇರಿದ ಅತ್ಯಂತ ಪ್ರಮುಖ ಖಂಡಾಂತರ ದ್ವೀಪವಾಗಿದೆ. ಇರಾನ್ ನ ಕರಾವಳಿಯಿಂದ ಸುಮಾರು 25 ಕಿ.ಮೀ ದೂರದಲ್ಲಿರುವ ಈ ಸಣ್ಣ ದ್ವೀಪವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿತೀವ್ರ ಮಹತ್ವ ಪಡೆದುಕೊಂಡಿದೆ. ಈ ದ್ವೀಪವು ಸುಮಾರು 20 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದೆ. ಇರಾನ್ ದೇಶದ ಕಚ್ಚಾ ತೈಲ ರಫ್ತಿನ ಬಹುಪಾಲು (ಸುಮಾರು 80%ರಿಂದ 90%) ಭಾಗವು ಈ ಒಂದೇ ದ್ವೀಪದ ಮೂಲಕ ಹಾದುಹೋಗುತ್ತದೆ. ಇಲ್ಲಿವಿಶಾಲವಾದ ತೈಲ ಶೇಖರಣಾ ಟ್ಯಾಂಕ್ ಗಳು ಹಾಗೂ ಬೃಹತ್ ತೈಲ ನೌಕೆಗಳು ನಿಲ್ಲಲು ಅನುಕೂಲಕರವಾದ ಆಧುನಿಕ ಬಂದರು ಮೂಲಸೌಕರ್ಯಗಳಿವೆ. ಇರಾನ್ ನ ಮುಖ್ಯ ಭೂಭಾಗದ ತೈಲ ಬಾವಿಗಳಿಂದ ಸಮುದ್ರದಾಳದ ಪೈಪ್ ಲೈನ್ ಗಳ ಮೂಲಕ ತೈಲವನ್ನು ಖಾರ್ಗ್ ದ್ವೀಪಕ್ಕೆ ತರಲಾಗುತ್ತದೆ. ಇರಾನ್ -ಇರಾಕ್ ಯುದ್ಧದ ಸಮಯದಲ್ಲಿಇರಾನ್ ನ ಆರ್ಥಿಕ ಬೆನ್ನೆಲುಬನ್ನು ಮುರಿಯಲು ಇರಾಕ್ ಸೇನೆಯು ಈ ದ್ವೀಪದ ತೈಲ ಕೇಂದ್ರಗಳ ಮೇಲೆ ನಿರಂತರವಾಗಿ ಬಾಂಬ್ ದಾಳಿಗಳನ್ನು ನಡೆಸಿತ್ತು.
ದಕ್ಷಿಣ ಏಷ್ಯಾ ಮತ್ತು ಭಾರತದ ಪಶ್ಚಿಮ ಘಟ್ಟಗಳ ಪ್ರಾಂತ್ಯದಲ್ಲಿಕಂಡುಬರುವ ಪ್ರಮುಖ ಜಿಗುಟು ಹುಳು ಅಥವಾ ಚಿಟ್ಟೆ ಜಾತಿಗೆ ಸೇರಿದ ಡ್ರಾಗನ್ ಫ್ಲೈ ಆಗಿದೆ. ಇದರ ವೈಜ್ಞಾನಿಕ ಹೆಸರು ಎy್ಞa್ಚa್ಞಠಿha d್ಟavಜಿda. ಗಂಡು ನೊಣಗಳ ಬಾಲದ ತುದಿಯಲ್ಲಿರುವ ಭಾಗವು ಚಮಚದ ಆಕಾರದಲ್ಲಿರುವುದರಿಂದ ಇದಕ್ಕೆ ಸ್ಪೂನ್ -ಟೇಲ್ಡ… ಎಂಬ ಹೆಸರು ಬಂದಿದೆ. ಇದು ದೊಡ್ಡ ಗಾತ್ರದ ಡ್ರ್ಯಾಗನ್ ಫ್ಲೈ ಆಗಿದ್ದು, ಪಾರದರ್ಶಕ ರೆಕ್ಕೆಗಳನ್ನು ಹೊಂದಿರುತ್ತದೆ. ಇವುಗಳ ತಲೆಯ ಭಾಗದಲ್ಲಿ ಕಣ್ಣುಗಳು ಪರಸ್ಪರ ಬೆಸೆದುಕೊಂಡ ಕಾರಣ ಅತ್ಯಂತ ಚುರುಕಾದ ದೃಷ್ಟಿ ಸಾಮರ್ಥ್ಯವನ್ನು ಹೊಂದಿದೆ. ಡÓ್ಕ… ಎಂದರೆ ಸಂಧ್ಯಾಕಾಲ. ಇವು ಹಗಲಿಡೀ ದಟ್ಟವಾದ ಕಾಡು ಅಥವಾ ಪೊದೆಗಳಲ್ಲಿವಿಶ್ರಮಿಸಿ, ಮುಸ್ಸಂಜೆ ಹಾಗೂ ಪ್ರಾತಃಕಾಲದಲ್ಲಿ ಮಾತ್ರ ಆಹಾರಕ್ಕಾಗಿ ಸಕ್ರಿಯವಾಗಿ ಹಾರಾಡುತ್ತವೆ. ಪ್ರಧಾನವಾಗಿ ದಟ್ಟವಾದ ಅರಣ್ಯ ಪ್ರದೇಶಗಳು, ಹೊಳೆ-ತೊರೆಗಳ ಪಕ್ಕದ ತೇವಾಂಶವುಳ್ಳ ವಾತಾವರಣ ಮತ್ತು ಪಶ್ಚಿಮ ಘಟ್ಟಗಳ ಕಾಡುಗಳಲ್ಲಿಇವು ವ್ಯಾಪಕವಾಗಿ ಕಂಡುಬರುತ್ತವೆ.