* ರೈತ ಸಂಘಟನೆಗಳ ಒಕ್ಕೂಟದ ಆಗ್ರಹ* ತಿ.ನರಸೀಪುರದಲ್ಲಿರೈತರ ಪ್ರತಿಭಟನೆ
ವಿಕ ಸುದ್ದಿಲೋಕ ತಿ.ನರಸೀಪುರ
ಕಬಿನಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ತಕ್ಷಣವೇ ನಿಲ್ಲಿಸಿ, ನಾಲೆಗಳ ಮೂಲಕ ಕಟ್ಟು ನೀರು ಪದ್ಧತಿಯಲ್ಲಿಕನಿಷ್ಠ ಐದು ಬಾರಿ ನೀರು ಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿರೈತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಕಬಿನಿ ಅತಿಥಿ ಗೃಹದಲ್ಲಿಕುರುಬೂರು ಶಾಂತಕುಮಾರ್ ಅವರ ನೇತೃತ್ವದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘ ಹಾಗೂ ಕಬಿನಿ ರೈತ ಹಿತರಕ್ಷಣಾ ಸಮಿತಿ ರೈತ ಮುಖಂಡರು ಸಭೆ ನಡೆಸಿದ ಬಳಿಕ ರೈತರು ಪಾದಯಾತ್ರೆ ಮೂಲಕ ಕಬಿನಿ ಕಚೇರಿಗೆ ತೆರಳಿ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿಮಾತನಾಡಿದ ರೈತ ಮುಖಂಡರು, ‘‘ಕಳೆದ ಒಂದು ತಿಂಗಳಿನಿಂದ ಕಬಿನಿ ಜಲಾಶಯದಿಂದ ಸುಮಾರು 20 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸುವ ಮೂಲಕ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸರಕಾರ ದ್ರೋಹ ಮಾಡಿದೆ,’’ ಎಂದು ದೂರಿದರು.
ರೈತ ಮುಖಂಡ ಕಿರಗಸೂರು ಶಂಕರ ಮಾತನಾಡಿ, ‘‘ಪ್ರಸ್ತುತ ಕಬಿನಿ ಜಲಾಶಯದಲ್ಲಿ71 ಅಡಿ ನೀರಿನ ಸಂಗ್ರಹವಿದ್ದು, ಪ್ರತಿದಿನ ನದಿಯ ಮೂಲಕ ತಮಿಳುನಾಡಿಗೆ ಸುಮಾರು 4,000 ಕ್ಯುಸೆಕ್ ನೀರನ್ನು ಹರಿಸಲಾಗುತ್ತಿದೆ. ಇದರಿಂದ ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರ ಕೃಷಿಗೆ ತೀವ್ರ ತೊಂದರೆಯಾಗುತ್ತಿದೆ. ಕೂಡಲೇ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಿ, ರೈತರ ಜಮೀನುಗಳಿಗೆ ನಾಲೆಗಳ ಮೂಲಕ ಈಗಾಗಲೇ ಹರಿಸುತ್ತಿರುವ 2,300 ಕ್ಯುಸೆಕ್ ನೀರನ್ನು ಕಟ್ಟು ನೀರು ಪದ್ಧತಿಯಲ್ಲಿಸಮರ್ಪಕವಾಗಿ ವಿತರಿಸಬೇಕು,’’ ಎಂದು ಒತ್ತಾಯಿಸಿದರು.
ಪ್ರತಿಭಟನೆ ವೇಳೆ ಕಾರ್ಯಪಾಲಕ ಎಂಜಿನಿಯರ್ ಅವರೊಂದಿಗೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ದೂರವಾಣಿ ಮೂಲಕ ಪ್ರತಿಭಟನೆ ಕುರಿತು ವಿಷಯ ತಿಳಿಸಿದರು. ಈ ವೇಳೆ ಕಬಿನಿ ಜಲಾಶಯಕ್ಕೆ ಈಗಾಗಲೇ ಎಂಡಿ ಅವರು ಆಗಮಿಸಿದ್ದು, ರೈತರ ಮನವಿಯನ್ನು ಅವರ ಗಮನಕ್ಕೆ ತರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಈಗಾಗಲೇ ನಾಲೆಗಳ ಮೂಲಕ ಬಿಡಲಾಗುತ್ತಿರುವ ನೀರನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲಎಂದು ದೂರವಾಣಿ ಮೂಲಕ ತಿಳಿಸಿದ್ದರಿಂದ, ರೈತ ಮುಖಂಡರು ಅಧಿ ಕಾರಿಗಳೊಂದಿಗೆ ಚರ್ಚಿಸಿ ಇಂದಿನ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದರು.
ಪ್ರತಿಭಟನೆಯಲ್ಲಿರಾಜ್ಯ ಕಬ್ಬು ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಕುರುಬೂರು ಕೆ.ಜಿ. ಗುರುಸ್ವಾಮಿ, ಕಬಿನಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕುರುಬೂರು ಗೌರಿಶಂಕರ್ , ಉಪಾಧ್ಯಕ್ಷ ಕರುವಟ್ಟಿ ಉಮೇಶ್ , ಎಗ್ಗೂರು ರಂಗರಾಜು, ಪ್ರಧಾನ ಕಾರ್ಯದರ್ಶಿ ವಾಚ್ ಕುಮಾರ್ , ಟೌನ್ ಅಧ್ಯಕ್ಷ ಅಪ್ಪಣ್ಣ, ಸಂಘಟನಾ ಕಾರ್ಯದರ್ಶಿಗಳಾದ ಯಾಕನೂರು ರಾಜೇಶ್ ಹಾಗೂ ಆದಿ ಬೆಟ್ಟಳ್ಳಿ ನಂಜುಂಡಸ್ವಾಮಿ ಇತರರಿದ್ದರು.
ಚಿತ್ರ
ಕಬಿನಿ ಜಲಾಶಯದಿಂದ ನಾಲೆಗಳ ಮೂಲಕ ಕಟ್ಟು ನೀರು ಪದ್ಧತಿಯಲ್ಲಿನೀರು ಹರಿಸಬೇಕು ಎಂದು ಆಗ್ರಹಿಸಿ ರೈತ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿತಿ.ನರಸೀಪುರದಲ್ಲಿರೈತರ ಪ್ರತಿಭಟನೆ ನಡೆಸಿದರು.