*ಪಪಂ ಆಡಳಿತ ಜಾಣ ಕುರುಡು ಪ್ರದರ್ಶನ*ಸಾರ್ವಜನಿಕರ ಸಮಸ್ಯೆ ಕೇಳೋರಾರ ಯರು?
ವಿಕ ಸುದ್ದಿಲೋಕ ಕನಕಗಿರಿ
ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿಬೀದಿ ನಾಯಿಗಳ ಕಾಟದಿಂದ ಸಾರ್ವಜನಿಕರು ಬೇಸತ್ತಿದ್ದಾರೆ. ಆದರೆ ಕ್ರಮಕ್ಕೆ ಮುಂದಾಗಬೇಕಾದ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಜಾಣ ಕುರುಡು ಪ್ರದರ್ಶನ ಮಾಡುತ್ತಿದೆ.
ಹಗಲು-ರಾತ್ರಿ ಎನ್ನದೇ ರಸ್ತೆಯಲ್ಲೇ ಓಡಾಡುತ್ತವೆ. ದಿನದಿಂದ ದಿನಕ್ಕೆ ವಿಪರೀತವಾಗುತ್ತಿದ್ದು, ಲಿಂಗಸುಗೂರು-ಗಂಗಾವತಿ ರಾಜ್ಯ ಹೆದ್ದಾರಿ, ಗಲ್ಲಿಗಳಲ್ಲಿಹಿಂಡು, ಹಿಂಡಾಗಿ ಓಡಾಡುತ್ತ ನಾಯಿಗಳು ಸಾರ್ವಜನಿಕರ ನಿದ್ದೆಗೆಡಿಸುತ್ತಿವೆ. ಬೀದಿ ನಾಯಿಗಳು ಮಕ್ಕಳಿಗೆ ಕಚ್ಚಿವೆ. ಮಕ್ಕಳ ಪಾಲಕರು ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಮಕ್ಕಳು, ಮಹಿಳೆಯರು, ವಯೋವೃದ್ಧರು, ಬೈಕ್ ಸವಾರರಿಗೆ ನೆಮ್ಮದಿ ಇಲ್ಲದಂತಾಗಿದೆ. ಇದೆಲ್ಲವೂ ಗಮನಕ್ಕಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.
ತಲೆನೋವು: ಪಟ್ಟಣದ ಬಸ್ ನಿಲ್ದಾಣ, ಸರಕಾರಿ ಆಸ್ಪತ್ರೆ, ಹಳೆ ಬಸ್ ನಿಲ್ದಾಣ, ನವಲಿ ರಸ್ತೆ, ಸಂತೆ ಬಜಾರ್ , ತೇರು ಬಜಾರ್ ನಲ್ಲಿನಾಯಿಗಳ ದರ್ಬಾರ್ ನಡೆಯುತ್ತಿದೆ. ಸಂಜೆ ವೇಳೆಯಲ್ಲಿರಸ್ತೆಯಲ್ಲಿಓಡಾಡುವುದು ದುಸ್ತರವಾಗಿದೆ. ನಿವಾಸಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಪ್ರಯೋಜನ ಇಲ್ಲ:
ಶಾಲಾ-ಕಾಲೇಜುಗಳಿಗೆ ತೆರಳುವ ಮಕ್ಕಳಂತೂ ಜೀವ ಕೈಯಲ್ಲಿಹಿಡಿದು ಹೋಗುವ ಪರಿಸ್ಥಿತಿ ಇದೆ. ಪಟ್ಟಣ ಪಂಚಾಯಿತಿ ಟೆಂಡರ್ ಕರೆದು ನಾಯಿಗಳನ್ನು ಹಿಡಿದು ಲಸಿಕೆ ಮತ್ತು ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಿ ಬಿಡಲಾಗಿತ್ತು. ಆದರೆ, ಪ್ರಯೋಜನವಾಗುತ್ತಿಲ್ಲ. ನಾಯಿಗಳ ಕಾಟಕ್ಕೆ ಮಾತ್ರ ಜನರು ಬೇಸತ್ತಿದ್ದಾರೆ. ಈ ಸಮಸ್ಯೆಯನ್ನು ಆಡಳಿತ ಗಂಭೀರವಾಗಿ ಪರಿಗಣಿಸಿ ಕ್ರಮಕ್ಕೆ ಮುಂದಾಗಬೇಕಿದೆ.
---
ಕೋಟ್ -
ಪಟ್ಟಣದಲ್ಲಿರುವ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಶಕ್ತಿ ಹರಣ ಚಿಕಿತ್ಸೆ ನೀಡಲಾಗಿದೆ. ಸಾರ್ವಜನಿಕರು ಕಸ, ತ್ಯಾಜ್ಯ ಎಸೆಯಬಾರದು. ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು.
-ಕೆ.ರಾಜಶೇಖರ, ಪಪಂ ಮುಖ್ಯಾಧಿಕಾರಿ, ಕನಕಗಿರಿ
ಕೋಟ್ -
ಪಟ್ಟಣದಲ್ಲಿನಾಯಿಗಳ ಕಾಟ ಹೆಚ್ಚಾಗಿದೆ. ಸಾರ್ವಜನಿಕರಲ್ಲಿಭಯದ ವಾತಾವರಣವಿದೆ.