ಪದವೀಧರರಿಗೆ ಆರ್ಥಿಕವಾಗಿ ನೆರವು ನೀಡುವ ಹಾಗೂ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಸದುದ್ದೇಶದಿಂದ ಸ್ಥಾಪನೆಯಾದ ತಾಲೂಕು ಪದವೀಧರರ ಸಹಕಾರ ಸಂಘ ಕಳೆದ ಒಂಬತ್ತು ವರ್ಷಗಳಲ್ಲಿಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂದು ಸಂಘದ ಅಧ್ಯಕ್ಷ ಜಿ.ಎಸ್ . ಶೇಖರಪ್ಪ ಹೇಳಿದರು.
ನಗರದ ಭಾರತ್ ವಿಕಾಸ್ ಶಾಲೆ ಸಭಾಂಗಣದಲ್ಲಿನಡೆದ ಸಂಘದ 9ನೇ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ‘‘ಕೇವಲ 10 ಸದಸ್ಯರಿಂದ ಪ್ರಾರಂಭವಾದ ಸಂಘ ಇಂದು 450ಕ್ಕೂ ಹೆಚ್ಚು ಪದವೀಧರರನ್ನು ಸದಸ್ಯರನ್ನಾಗಿ ಹೊಂದಿದ್ದು, ಉತ್ತಮ ವ್ಯವಹಾರ ನಡೆಸುವ ಮೂಲಕ ಆರ್ಥಿಕವಾಗಿ ಸದೃಢವಾಗಿ ಮುನ್ನಡೆಯುತ್ತಿದೆ. ಸಹಕಾರ ಸಂಘದ ಮುಖ್ಯ ಉದ್ದೇಶ ಸದಸ್ಯರಿಗೆ ಅಗತ್ಯ ಸಂದರ್ಭದಲ್ಲಿಹಣಕಾಸಿನ ನೆರವು ಒದಗಿಸುವುದು. ಪದವೀಧರರು ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಆಗತ್ಯಗಳಿಗೆ ಅನುಗುಣವಾಗಿ ಸಂಘದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು,’’ ಎಂದು ಸಲಹೆ ನೀಡಿದರು.
ಜೆಎಸ್ ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೊತ್ತಲವಾಡಿ ಶಿವಕುಮಾರ್ ಮಾತನಾಡಿ, ‘‘ಒಗ್ಗಟ್ಟಿನಲ್ಲಿಬಲವಿದೆ ಎಂಬುದಕ್ಕೆ ಸಹಕಾರ ಸಂಘಗಳು ಉತ್ತಮ ಉದಾಹರಣೆಯಾಗಿವೆ. ಸಹಕಾರ ತತ್ತ್ವದ ಮೂಲಮಂತ್ರವಾದ ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎಂಬ ಮನೋಭಾವವನ್ನು ಅಳವಡಿಸಿಕೊಂಡು ಮುನ್ನಡೆದಾಗ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ಪರಸ್ಪರ ಸಹಕಾರ, ಸ್ನೇಹ ಹಾಗೂ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುವ ಮೂಲಕ ಸಮಾಜದಲ್ಲಿಉತ್ತಮ ವಾತಾವರಣ ನಿರ್ಮಿಸಬಹುದು,’’ ಎಂದರು.
ಇದೇ ಸಂದರ್ಭ ಸಂಘದ ಕಾರ್ಯದರ್ಶಿ ರಂಜಿನಿ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ನಡವಳಿಯನ್ನು ಮಂಡಿಸಿದರು. ಕಾರ್ಯಕ್ರಮದಲ್ಲಿಭಾರತ್ ವಿಕಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಬಿ. ಯೋಗೇಶ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಸಮಾರಂಭದಲ್ಲಿಸಂಘದ ಉಪಾಧ್ಯಕ್ಷ ಕೆ.ಟಿ. ಸತ್ಯನಾರಾಯಣಸ್ವಾಮಿ, ನಿರ್ದೇಶಕರಾದ ಆರ್ . ಶಿವಪ್ರಕಾಶ್ , ಎಚ್ .ಕೆ. ಸವಿತಾ, ಎಸ್ .ಬಿ. ಪರಶಿವಮೂರ್ತಿ, ಕವಿತಾ ಎನ್ .ಎಸ್ ., ದಯಾನಂದ್ , ಎಸ್ . ವಿಜಯ್ ಕುಮಾರ್ , ಟಿ.ಎನ್ . ಶ್ರೀಕಂಠಮೂರ್ತಿ, ಎಸ್ . ಶಿವಸ್ವಾಮಿ, ಎಸ್ . ಲಕ್ಷ್ಮೇಕಾಂತ್ , ಸುಂದ್ರ, ಎನ್ .ಸಿ. ನಂಜಪ್ಪ ಇತರರಿದ್ದರು.
ಎಂವೈಎಸ್ 1 ಏನ್ ಜಿಡಿ 1
ನಂಜನಗೂಡು ತಾಲೂಕು ಪದವೀಧರರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಶೇಖರಪ್ಪ ಉದ್ಘಾಟಿಸಿದರು.
ಚಿತ್ರ (ಎಂವೈಎಸ್ 1 ಏನ್ ಜಿಡಿ 2)
ನಂಜನಗೂಡು ತಾಲೂಕು ಪದವೀಧರರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿಹಿರಿಯ ವಕೀಲ ಯೋಗೀಶ್ ಅವರನ್ನು ಸನ್ಮಾನಿಸಲಾಯಿತು.