ಕನ್ನಾಳೆ ಬಿಜೆಪಿ ಕಾರ್ಯಕರ್ತ

Contributed byVijaykumar.belde@timesofindia.com|Vijaya Karnataka
bjp workers sweet encounter linked to recruitment scam
ವಿಕ ಸುದ್ದಿಲೋಕ ಬೀದರ್ ಕೆಪಿಎಸ್ ಸಿ ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣದಲ್ಲಿಬಂಧಿತ ಬಸವರಾಜ ಕನ್ನಾಳೆ ಭಾಲ್ಕಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತ. ವಿಧಾನಸಭಾ ಚುನಾವಣೆಯಲ್ಲಿನನ್ನ ವಿರುದ್ಧವೇ ಸ್ಪರ್ಧಿಸುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ ಎಂದು ಆರ್ ಡಿಪಿಆರ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಕನ್ನಾಳೆಗೆ ಸಿಹಿ ತಿನ್ನಿಸಿದ ಫೋಟೋ ವೈರಲ್ ಆಗಿರುವ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, ‘‘ಕೆಲ ತಿಂಗಳ ಹಿಂದೆ ಬೆಂಗಳೂರಿನ ನನ್ನ ಕಚೇರಿಯಲ್ಲಿಭೇಟಿಯಾಗಲು ಬಂದಿದ್ದ. ತನಗೆ ಬಿಜೆಪಿ ರಾಜ್ಯ ನಾಯಕರ ಶಿಫಾರಸಿನಿಂದ ರಾಜ್ಯಪಾಲರು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನನ್ನಾಗಿ ಮಾಡಿದ್ದು, ಆಶೀರ್ವಾದ ಮಾಡಿ ಎಂದು ಹೇಳಿ ನನಗೆ ಶಾಲು ಹೊದಿಸಿ ಸಿಹಿ ನೀಡಿದ. ನಾನು ಸಿಹಿ ತಿನ್ನೋದಿಲ್ಲಎಂದು ಹೇಳಿ ಅವನಿಗೇ ತಿನ್ನಿಸಿದೆ,’’ ಎಂದು ಹೇಳಿದ್ದಾರೆ. ‘‘ನನ್ನ ಕಚೇರಿಯಿಂದ ಹೊರಡುವಾಗ ನಿಮ್ಮ ವಿರುದ್ಧವೇ ಭಾಲ್ಕಿಯಿಂದ ಸ್ಪರ್ಧಿಸುತ್ತೇನೆ ಎಂದಿದ್ದ. ಪ್ರಜಾಪ್ರಭುತ್ವದಲ್ಲಿಎಲ್ಲರಿಗೂ ಅವಕಾಶವಿದೆ. ಪ್ರಯತ್ನ ಮಾಡು ಎಂದು ಆತನಿಗೆ ಹೇಳಿದ್ದೆ. ನಮ್ಮ ಕ್ಷೇತ್ರದ ಒಬ್ಬ ವ್ಯಕ್ತಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿದ್ದೇನೆ ಎಂದು ತಿಳಿಸಲು ಬಂದಾಗ ಅವರ ಜತೆಯಲ್ಲಿಸೌಜನ್ಯದಿಂದ ಮಾತನಾಡುವುದು ಒಬ್ಬ ಜನಪ್ರತಿನಿಧಿಯ ಕರ್ತವ್ಯ. ಈ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಕೇಂದ್ರದ ಮಾಜಿ ಸಂಸದರು ರಾಜಕೀಯ ದುರುದ್ದೇಶದಿಂದ ಇಂತಹ ಇಲ್ಲಸಲ್ಲದ ಆರೋಪ ಮಾಡಿ, ಫೋಟೋ ಬಿಡುಗಡೆ ಮಾಡಿದ್ದಾರೆ,’’ ಎಂದು ತಿಳಿಸಿದ್ದಾರೆ. ‘‘ಇಂದು ಜೆಡಿಎಸ್ ನವರು ಈ ಫೋಟೋ ಹಾಕಿ ಅಪಪ್ರಚಾರ ಮಾಡಿದ್ದಾರೆ. ಜನರಿಗೆ ಸುಳ್ಳನ್ನೇ ನಿಜ ಎಂದು ನಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಯ ಚಿಹ್ನೆ ಇರುವ ಶಲ್ಯ ಹೊದ್ದು, ಬಿಜೆಪಿ ನಾಯಕರ ಜತೆ ಮುಂದಿನ ಸಾಲಿನಲ್ಲಿಕುಳಿತು ಫೋಟೋಗೆ ಫೋಸ್ ನೀಡಿರುವ ಹಾಗೂ ಹಲವು ಬಿಜೆಪಿ ನಾಯಕರೇ ಸಿಹಿ ತಿನಿಸಿರುವ ಫೋಟೋಗಳೂ ಸಾಮಾಜಿಕ ತಾಣದಲ್ಲಿವೆ. ಈ ಬಗ್ಗೆ ಬಿಜೆಪಿ ಹಾಗೂ ಜೆಡಿಎಸ್ ನವರು ಮಾತನಾಡಲಿ,’’ ಎಂದು ಹೇಳಿದ್ದಾರೆ. ‘‘ನೇಮಕಾತಿ ಹಗರಣದಲ್ಲಿಭಾಗಿಯಾಗಿರುವವರ ನಿಕಟವರ್ತಿಗಳ ಬಗ್ಗೆ ಸಮಗ್ರ ತನಿಖೆ ಆದರೆ ಮಾಜಿ ಸಂಸದರ ನಿಜ ಬಣ್ಣವೂ ಬಯಲಾಗುತ್ತದೆ ಇದೆ,’’ ಎಂದು ಹೇಳಿದ್ದಾರೆ.