‘ಬೃಂದಾ ವಿಹಾರಿ’ ಗಾನ ಲಹರಿ - ಪೇಜ್ 2 ಲೀಡ್

Contributed byKiran Mr. Kumar|Vijaya Karnataka
brindavihari films success and melody of songs
ಇಂಟ್ರೊ: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸ ರಾಜು ಜೋಡಿ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಭರ್ಜರಿ ಯಶಸ್ಸಿನ ನಂತರ ಮತ್ತೊಮ್ಮೆ ‘ಬೃಂದಾವಿಹಾರಿ’ ಚಿತ್ರದಲ್ಲಿಜೊತೆಯಾಗಿದ್ದಾರೆ. ಈ ಸಿನಿಮಾದ ಹಾಡುಗಳು ಈಗಾಗಲೇ ಜನಪ್ರಿಯತೆ ಗಳಿಸಿರುವ ಹಿನ್ನಲೆಯಲ್ಲಿಮೊದಲ ಬಾರಿಗೆ ಸಿನಿಮಾದ ಕುರಿತು ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ.

ಪ್ರೇಕ್ಷಕರು ನನ್ನಿಂದ ಏನು ಬಯಸುತ್ತಾರೋ ಹಾಗೆ ‘ಬೃಂದಾ ವಿಹಾರಿ’ ಚಿತ್ರದಲ್ಲಿಕಾಣಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ ನಟ ಗೋಲ್ಡನ್ ಸ್ಟಾರ್ ಗಣೇಶ್ .
‘ಜನರ ಮುಗ್ಧತೆ, ಭಾವನೆಗೆ ಬೆಲೆ ಕೊಡುವ ವ್ಯಕ್ತಿತ್ವವುಳ್ಳ ಮಾಧವ ಎನ್ನುವ ಪಾತ್ರದಲ್ಲಿಕಾಣಿಸಿಕೊಂಡಿದ್ದೇನೆ. ಈ ಚಿತ್ರದ ಚಿತ್ರೀಕರಣ ಸಮಯದಲ್ಲಿಅವರಿಂದ ಸಾಕಷ್ಟು ಕಲಿತಿದ್ದೇನೆ. ಹಿರಿಯ ನಟಿ ಲಕ್ಷ್ಮಿ ಜೊತೆ ಕೆಲಸ ಮಾಡಿರುವುದು ಸಂತಸ. ಹಿರಿಯ ಕಲಾವಿದರಾದ ಅಶೋಕ್ , ರಾಮ್ ಕುಮಾರ್ , ರಂಗಾಯಣ ರಘು ಮುಂತಾದವರ ಜೊತೆಗೆ ಅಭಿನಯಿಸಿರುವುದು ವಿಶೇಷ ಅನುಭವ ನೀಡಿದೆ’ ಎಂದು ಹೇಳಿದ್ದಾರೆ.

ಅಪ್ಪಟ್ಟ ಕನ್ನಡ ಸಿನಿಮಾ

‘ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾದ ನಂತರ ನಿರ್ದೇಶಕರು ಎರಡನೇ ಹಂತದ ಚಿತ್ರೀಕರಣ ಸಮಯದಲ್ಲಿಸ್ಕಿ್ರ±್ಟ… ನೀಡಿದರು. ಅದು ನೋಡಿದ ಮೇಲೆ ಸಿನಿಮಾದ ರೈಟರ್ಸ್ ಜೊತೆಗೆ ಕುಳಿತು ಚರ್ಚೆ ಮಾಡಿದೆ. ಎಮೋಷನ್ , ಹಾಸ್ಯ ಮತ್ತು ಸಂಬಂಧಗಳನ್ನು ಹೇಗೆ ಒಟ್ಟಿಗೆ ಕಟ್ಟಿಕೊಡುವುದು ಎನ್ನುವುದು ಸವಾಲಿನಿಂದ ಕೂಡಿತ್ತು. ಆದರೆ ನಿರ್ದೇಶಕರ ಸಲಹೆ, ಚಿತ್ರತಂಡದ ಪ್ರಯತ್ನದ ಫಲವಾಗಿ ಚಿತ್ರ ಅತ್ಯುತ್ತಮವಾಗಿ ಮೂಡಿಬಂದಿದೆ. ಇದು ನಿಮ್ಮ ಗಣೇಶನ ಅಪ್ಪಟ್ಟ ಕನ್ನಡ ಸಿನಿಮಾ’ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ಶ್ರೀನಿವಾಸ ರಾಜು ಮಾತನಾಡಿ, ‘ಈ ಸಿನಿಮಾ ನನಗೆ ಅಷ್ಟು ತೃಪ್ತಿ ನೀಡಿದೆ’ ಎಂದಿದ್ದಾರೆ

ಹಿರಿಯ ಕಲಾವಿದ ರಂಗಾಯಣ ರಘು, ‘ಚಿತ್ರದಲ್ಲಿನೂರಾರು ಕಲಾವಿದರು ಅಭಿನಯಿಸಿದ್ದಾರೆ. 80-90ರ ದಶಕದಲ್ಲಿನಾವು ಇಷ್ಟು ಜನ ಕಲಾವಿದರನ್ನು ಒಂದೇ ಚಿತ್ರದಲ್ಲಿನೋಡುತ್ತಿದ್ದೆವು. ಇದು ಕುಟುಂಬ ಸಮೇತ ನೋಡಬಹುದಾದ ಉತ್ತಮ ಚಿತ್ರ’ ಎಂದು ಹೇಳಿದ್ದಾರೆ.

ಚಿತ್ರದ ಹಿರೋಯಿನ್ ಶರ್ಮಾ, ‘ಇದು ಕನ್ನಡದಲ್ಲಿನನ್ನ ಮೊದಲ ಸಿನಿಮಾ. ತೆಲುಗು, ತಮಿಳು ಈಗಷ್ಟೇ ಮಲೆಯಾಳಂನಲ್ಲಿನಟಿಸಿದ್ದೇನೆ. ಈವರೆಗೆ ಮಾಡದ ಪಾತ್ರ ನೀಡಿದ್ದಾರೆ. ಅಭಿನಯಕ್ಕೆ ಮಹತ್ವವಿರುವ ಪಾತ್ರ. ಚಿತ್ರದಲ್ಲಿಮೀರಾ ಪಾತ್ರ ಮಾಡಿದ್ದೇನೆ, ಕೃಷ್ಣನ ಪರಮಭಕ್ತೆ. ಒಳ್ಳೆಯ ಪಾತ್ರ ಸಿಕ್ಕಿದೆ’ ಎಂದು ಹೇಳಿದ್ದಾರೆ.

ನಟಿ ದೇವಿಕಾ ಭಟ್ ಮಾತನಾಡಿ, ‘ಇದು ನನ್ನ ಸಿನಿ ಪಯಣದ ಮೊದಲ ಚಿತ್ರ. ಇಡೀ ಚಿತ್ರತಂಡ ನನಗೆ ಬೆಂಬಲ ನೀಡಿತು. ಹೀಗಾಗಿ ಚಿತ್ರದಲ್ಲಿನಾನು ಸರಾಗವಾಗಿ ಅಭಿನಯಿಸಲು ಸಾಧ್ಯವಾಯಿತು’ ಎಂದಿದ್ದಾರೆ.

ಸಂಗೀತ ನಿರ್ದೇಶಕ ಹೇಶಮ್ ಅಬ್ದುಲ್ ವಹಾಬ್ , ಗೀತರಚನೆಕಾರ ಡಾ ವಿ.ನಾಗೇಂದ್ರ ಪ್ರಸಾದ್ , ಕಲಾ ನಿರ್ದೇಶಕ ರವಿ ಸಂತೆಹಕ್ಲು, ನೃತ್ಯ ನಿರ್ದೇಶಕ ಭಾನು, ಸಂಭಾಷಣಕಾರ ವಿಜಯ್ ಈಶ್ವರ್ , ಕೋ ರೈಟರ್ ಕ್ರಾಂತಿ ಕುಮಾರ್ ಹಾಗೂ ಕಲಾವಿದರಾದ ಕುರಿ ಪ್ರತಾಪ್ , ಮಂಜು ಪಾವಗಡ, ಗಿರೀಶ್ ಶಿವಣ್ಣ, ಜಗ್ಗಪ್ಪ, ನೀನಾಸಂ ಅಶ್ವಥ್ ಸಿನಿಮಾ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.