ಜಿಲ್ಲಾಮಟ್ಟಕ್ಕೆ ವಸತಿಶಾಲೆ ಮಕ್ಕಳು ಆಯ್ಕೆ

Contributed byvkhnataraj@gmail.com|Vijaya Karnataka
children from dharampura morarji residential school selected for district level sports
ಜಿಲ್ಲಾಮಟ್ಟಕ್ಕೆ ವಸತಿಶಾಲೆ ಮಕ್ಕಳು ಆಯ್ಕೆ

ವಿಕ ಸುದ್ದಿಲೋಕ ಹುಣಸೂರು
ಹುಣಸೂರಿನಲ್ಲಿನಡೆದ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿತಾಲೂಕಿನ ಧರ್ಮಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲಾ ಬಾಲಕ-ಬಾಲಕಿಯರ ವಿಭಾಗದ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ವಿಭಾಗದ 17ವರ್ಷದೊಳಗಿನ ಷಟಲ್ ಬ್ಯಾಡ್ಮಿಂಟನ್ ನ ಸಿಂಗಲ್ಸ್ ವಿಭಾಗದಲ್ಲಿಎನ್ .ಪ್ರೀತಮ್ , ಡಬ್ಬಲ್ಸ್ ವಿಭಾಗದಲ್ಲಿಅಕ್ಷಯ್ , ಗಿರೀಶ್ , ಎನ್ .ಪ್ರೀತಮ್ , ಸ್ವಾಮಿನಾಯಕ ಹಾಗೂ ಬಾಲಕಿಯರ ವಿಭಾಗದ ಷಟಲ್ ಬ್ಯಾಡ್ಮಿಂಟನ್ ನ ಡಬ್ಬಲ್ಸ್ ನಲ್ಲಿದ್ವಿತೀಯ ಸ್ಥಾನ ಪಡೆದ ರುಷಿತಾ ಮತ್ತು ತನುಶ್ರೀ ಮತ್ತು ಯೋಗ ಸ್ಪರ್ಧೆಯಲ್ಲಿಎ.ಪಿ.ಕಲ್ಪವಲ್ಲಿಪ್ರಥಮ ಸ್ಥಾನದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಪ್ರಾಚಾರ್ಯ ಎಸ್ .ಜಯಕುಮಾರ್ ತಿಳಿಸಿದ್ದಾರೆ. ಸಾಧಕ ಕ್ರೀಡಾಪಟುಗಳನ್ನು ಪ್ರಾಂಶುಪಾಲ, ದೈಹಿಕ ಶಿಕ್ಷಕರಾದ ಸಿ.ಪ್ರಕಾಶ್ , ಮಹೇಶ ಕೊರಗಾಂವಕರ ಹಾಗೂ ಶಿಕ್ಷಕ ವೃಂದ, ಸಿಬ್ಬಂದಿ ಅಭಿನಂದಿಸಿದ್ದಾರೆ.

ಪೊಟೋ

ಪೊಟೋ

2ಎಚ್ ಯುಎನ್ -2ಹುಣಸೂರು ತಾಲೂಕು ಧರ್ಮಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕ್ರೀಡಾಪಟುಗಳು ಷಟಲ್ ಬ್ಯಾಡ್ಮಿಂಟನ್ , ಯೋಗ ಸ್ಫರ್ಧೆಯ ವಿಜೇತ ಕ್ರೀಡಾಪಟುಗಳೊಂದಿಗೆ ಪ್ರಾಚಾರ್ಯ ಜಯಕುಮಾರ್ ದೈಹಿಕ ಶಿಕ್ಷಕರಾದ ಮಹೇಶಕೊರಗಾಂವಕರ ಹಾಗೂ ಶಿಕ್ಷಕ ವೃಂದ ಇದ್ದಾರೆ.