ಉಡುಪಿ: ಕಾಪು ಶ್ರೀ ನಾರಾಯಣ ಗುರು ಸ್ಕೂಲ್ ಆಫ್ ಚೆಸ್ ವತಿಯಿಂದ ಮಂಗಳೂರಿನ ಅಫಿಲಿಯೆನ್ಸ್ ಟೆಕ್ನಾಲಜಿ ಹಾಗೂ ಉಡುಪಿ ಜಿಲ್ಲಾಚೆಸ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ಶ್ರೀ ನಾರಾಯಣ ಗುರು ಟ್ರೋಫಿ ಚದುರಂಗ 30ನೇ ಸ್ಪರ್ಧೆ ಸೆ.6ರಂದು ಮಣಿಪಾಲದ ಡಾ. ಟಿಎಂಎ ಪೈ ಹಾಲ್ ನಲ್ಲಿನಡೆಯಲಿದೆ.
ಸ್ಪರ್ಧೆಯಲ್ಲಿ7, 9, 11, 13, 17ರ ವಯೋಮಿತಿಯ ವಿಭಾಗಗಳೊಂದಿಗೆ ಮುಕ್ತ ವಿಭಾಗದಲ್ಲಿಯೂ ಪಂದ್ಯಗಳು ನಡೆಯಲಿವೆ. ಪ್ರತಿ ವಿಭಾಗದಲ್ಲಿ20 ಬಹುಮಾನಗಳಿದ್ದು ಒಟ್ಟು 25,500 ರೂ. ನಗದು ಬಹುಮಾನ ವಿತರಿಸಲಾಗುವುದು.ಸ್ಪರ್ಧೆಯನ್ನು ಮಂಗಳೂರಿನ ಅಫಿಲಿಯೆನ್ಸ್ ಸಂಸ್ಥೆಯ ಸ್ಥಾಪಕ ಅವಿನಾಶ್ ಶೆಟ್ಟಿ ಉದ್ಘಾಟಿಸಲಿದ್ದು, ವಕೀಲ ರಾಘವೇಂದ್ರ ವೈ.ಟಿ. ಚೆಸ್ ಪಂದ್ಯಾಟಕ್ಕೆ ಚಾಲನೆ ನೀಡುವರು. ಶ್ರೀನಾರಾಯಣ ಗುರು ಸ್ಪೋಟ್ಸ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಉಮಾನಾಥ ಕಾಪು ಅಧ್ಯಕ್ಷತೆ ವಹಿಸಲಿದ್ದಾರೆ. ಮಣಿಪಾಲ ಕೆಎಂಸಿ ಪ್ರೊಫೆಸರ್ ಆಫ್ ಸರ್ಜರಿ ಡಾ. ರಾಜಗೋಪಾಲ್ ಶೆಣೈ ಮುಖ್ಯ ಅತಿಥಿಯಾಗಿದ್ದಾರೆ.