ಅಮೃತಕೀರ್ತಿ ಪ್ರಶಸ್ತಿಗೆ ಪಿ. ಎಸ್ . ಶ್ರೀಧರನ್ ಪಿಳ್ಳೈ ಆಯ್ಕೆ

Contributed bymary.joseph@timesgroup.com|Vijaya Karnataka
p s shreedharan pillai achieves amritakeerti award
ಅಮೃತಪುರಿ (ಕೊಲ್ಲಂ): ಮಾತಾ ಅಮೃತಾನಂದಮಯಿ ಮಠ ನೀಡುವ ಪ್ರತಿಷ್ಠಿತ ಅಮೃತಕೀರ್ತಿ ಪ್ರಶಸ್ತಿಗೆ ಮಾಜಿ ರಾಜ್ಯಪಾಲ, ವಕೀಲ ಹಾಗೂ ಲೇಖಕ ಅಡ್ವೊಕೇಟ್ ಪಿ. ಎಸ್ . ಶ್ರೀಧರನ್ ಪಿಳ್ಳೈಆಯ್ಕೆಯಾಗಿದ್ದಾರೆ. ವಿಶ್ವಸೇವಾ ದಿನಾಚರಣೆಯ ಅಂಗವಾಗಿ ಸೆ.26ರಂದು ಅಮೃತಪುರಿಯ ಅಮೃತ ವಿಶ್ವವಿದ್ಯಾಪೀಠದ ಆವರಣದಲ್ಲಿನಡೆಯುವ ಸಮಾರಂಭದಲ್ಲಿಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು 1,23,456 ರೂ. ನಗದು ಬಹುಮಾನ, ಸರಸ್ವತಿ ಶಿಲ್ಪ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಆಧ್ಯಾತ್ಮಿಕ, ಪಾಂಡಿತ್ಯ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿಗಣನೀಯ ಸಾಧನೆ ಮಾಡಿದ ಗಣ್ಯರನ್ನು ಗೌರವಿಸುವ ಉದ್ದೇಶದಿಂದ 2001ರಿಂದ ಅಮೃತಕೀರ್ತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಸ್ವಾಮಿ ಅಮೃತಸ್ವರೂಪಾನಂದ ಪುರಿ ಅಧ್ಯಕ್ಷತೆಯ ಆಯ್ಕೆ ಸಮಿತಿಯು ಶ್ರೀಧರನ್ ಪಿಳ್ಳೈ ಅವರನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಶ್ರೀಧರನ್ ಪಿಳ್ಳೈ ಅವರು ಕಾನೂನು, ರಾಜಕೀಯ ಹಾಗೂ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿಗಳನ್ನು ನಿರ್ವಹಿಸುವುದರ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೂ ಮಹತ್ವದ ಕೊಡುಗೆ ನೀಡಿದ್ದಾರೆ. ಕವನ, ಪ್ರಬಂಧ, ಕಾನೂನು, ಪ್ರವಾಸ ಕಥನ, ರಾಜಕೀಯ ವಿಶ್ಲೇಷಣೆ, ಆಧ್ಯಾತ್ಮಿಕ ಮತ್ತು ತತ್ವಶಾಸ್ತ್ರ ವಿಷಯಗಳಲ್ಲಿಅವರು 270ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.