ಮಾನ್ವಿ- ಸದಸ್ಯರ ಸಭೆ ಇಂದು

Contributed byrajashekarswamymhm@gmail.com|Vijaya Karnataka
state chaluvada mahasabha to hold meeting with 5000 members
ಸದಸ್ಯರ ಸಭೆ ಇಂದು

ಮಾನ್ವಿ : ‘‘ ರಾಜ್ಯ ಛಲವಾದಿ ಮಹಾಸಭಾ 5 ಸಾವಿರ ಆಜೀವ ಸದಸ್ಯರನ್ನು ಹೊಂದಿದ್ದು, ಸೆ.20 ರಂದು ಬೆಂಗಳೂರಿನ ದೊಡ್ಡಬಸ್ತಿಯಲ್ಲಿನೂತನ ರಾಜ್ಯ ಕಚೇರಿ ಉದ್ಘಾಟನೆ ಹಾಗೂ 2026-27ನೇ ಸಾಲಿನ ಸರ್ವ ಸದಸ್ಯರ ಸಭೆ ರಾಜ್ಯ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷರಾದ ವಾಣಿ ಶಿವರಾಮ ನೇತೃತ್ವದಲ್ಲಿನಡೆಯಲಿದೆ,’’ ಎಂದು ತಾಲೂಕು ಘಟಕದ ಅಧ್ಯಕ್ಷರಾದ ಶಿವರಾಜ ಉಮಳಿಹೊಸೂರು ತಿಳಿಸಿದರು.
ಪಟ್ಟಣದಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, ‘‘ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿಸಭೆಗೆ ಆಗಮಿಸಬೇಕು. ಮುಂದಿನ ದಿನಗಳಲ್ಲಿತಾಲೂಕು ಘಟಕದಿಂದ ತಾಲೂಕಿನಲ್ಲಿನ ಛಲವಾದಿ ಸಮುದಾಯದವರನ್ನು ಸಂಘಟಿಸಿ ಮಾನ್ವಿ ಪಟ್ಟಣದಲ್ಲಿಡಾ.ಬಿ.ಆರ್ .ಅಂಬೇಡ್ಕರ್ ಭವನ, ಡಾ.ಬಿ.ಆರ್ .ಅಂಬೇಡ್ಕರ್ ವೃತ್ತ, ಡಾ.ಬಿ.ಆರ್ .ಅಂಬೇಡ್ಕರ್ ಪುತ್ಥಳಿ ಪ್ರತಿಷ್ಠಾಪನೆಗೆ ಅಗತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು,’’ ಎಂದರು.

ಮುಖಂಡರಾದ ಹನುಮಂತ ಜಾನೇಕಲ್ , ಮುಕ್ಕಣ್ಣ ಬೈಲ್ ಮರ್ಚಡ್ , ತಿಪ್ಪಣ್ಣ ಜಾನೇಕಲ್ , ಬಸಪ್ಪ ನಂದಿಹಾಳ, ಮಲ್ಲಿಕಾರ್ಜುನ, ಹನುಮಂತ ನಂದಿಹಾಳ, ಕಾಶಿನಾಥ ಕುರ್ಡಿ, ಅನ್ನಮಯ್ಯ ಜಾನೇಕಲ್ , ತಾಯಣ್ಣ, ಬಸವರಾಜ್ , ಪರಶುರಾಮ್ , ಬಸವಲಿಂಗ, ಆಂಜಣೇಯ, ರೇಣುಕಾರಾಜ್ , ಬಂಡೆಗುರು, ಗುರು ಬೊಮ್ಮನಾಳ ಇದ್ದರು.