ಪೇಜ್ 1 ಸುದ್ದಿಗಳು

Contributed byDHEERAJ K|Vijaya Karnataka
1
ಐಚಿ-ನಗೋಯಾದಲ್ಲಿನಡೆಯುತ್ತಿರುವ 2026ರ ಏಷ್ಯನ್

ಗೇಮ್ಸ್ ನ ಎರಡನೇ ದಿನವಾದ ಸೋಮವಾರ ಭಾರತೀಯ ಕ್ರೀಡಾಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಶೂಟಿಂಗ್ ಸ್ಪರ್ಧೆಯಲ್ಲಿಭಾರತಕ್ಕೆ ಮೂರು ಪದಕಗಳು ಲಭಿಸಿದ್ದರೆ, ಮಿಶ್ರ ಮಾರ್ಷಲ್ ಆರ್ಟ್ಸ್ ಮಹಿಳಾ 60 ಕೆಜಿ ವಿಭಾಗದಲ್ಲಿ ಸುಚಿಕಾ ತರಿಯಾಲ್ ಐತಿಹಾಸಿಕ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿಈ ವಿಭಾಗದಲ್ಲಿಭಾರತಕ್ಕೆ ದೊರೆತ ಮೊದಲ ಪದಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ ಆರಕ್ಕೆ ಏರಿದೆ. ಪುರುಷರ 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿಯುವ ಶೂಟರ್ ಹಿಮಾನ್ಶು ಧಿಧಿಲ್ಲೋನ್ ಬೆಳ್ಳಿ ಪದಕ ಹಾಗೂ ಅನುಭವಿ ಶೂಟರ್ ರುದ್ರಾಂಶ ಪಾಟೀಲ್ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.