* ತ್ರೀಫೇಸ್ ವಿದ್ಯುತ್ ಕಡಿತಕ್ಕೆ ಖಂಡನೆ* ಬಿಜೆಪಿ ನೇತೃತ್ವದಲ್ಲಿಧರಣಿ
* ಕೆಇಬಿಗೆ ರೈತರ ಮುತ್ತಿಗೆ
ವಿಕ ಸುದ್ದಿಲೋಕ ಕೊಪ್ಪಳ
ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿ ಕೊಪ್ಪಳ ಬಿಜೆಪಿ ಗ್ರಾಮೀಣ ಮಂಡಲ ತಾಲೂಕಿನ ಅಳವಂಡಿಯಲ್ಲಿಸೋಮವಾರ ಪ್ರತಿಭಟನೆ ನಡೆಸಿತು.
ಸಾವಿರಾರು ರೈತರು ಕೆಇಬಿ ಕಚೇರಿಗೆ ಮುತ್ತಿಗೆ ಹಾಕಿ, ಕಚೇರಿಯೊಳಗೆ ನುಗ್ಗಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಳವಂಡಿ ಮತ್ತು ಹಿರೇಶಿಂಧೋಗಿ ಭಾಗದ ರೈತರು ಕೈಯಲ್ಲಿ
ಪೋಸ್ಟರ್ ಹಿಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿಪಾದಯಾತ್ರೆ ನಡೆಸಿದರು. ಅಳವಂಡಿಯ ಸಿದ್ದೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಚಾಲನೆ ನೀಡಿದರು.
ಬಿಜೆಪಿ ಮುಖಂಡ ಡಾ.ಬಸವರಾಜ್ ಕ್ಯಾವಟರ್ ಮಾತನಾಡಿ, ರಾಜ್ಯದಲ್ಲಿಭೀಕರ ಬರ ಇದೆ. ದಿನದ 24 ಗಂಟೆಯಲ್ಲಿಕೇವಲ 7 ಗಂಟೆ ವಿದ್ಯುತ್ ನೀಡಲಾಗುತ್ತಿತ್ತು. ಇದೀಗ ಕಡಿತಗೊಳಿಸಿದರೆ ರೈತರು ಎಲ್ಲಿಗೆ ಹೋಗಬೇಕೆಂದು ಪ್ರಶ್ನಿಸಿದರು.
ಕೊಪ್ಪಳಕ್ಕೆ 7 ಸಬ್ ಸ್ಟೇಷನ್ ಮಂಜೂರಾಗಿದೆ ಎಂದು ಶಾಸಕರು ಹೇಳುತ್ತಾರೆ, ಆದರೆ ಒಂದೂ ಕೆಲಸ ಮಾಡುತ್ತಿಲ್ಲ. ಬರದ ನಡುವೆಯೂ ಕೊಪ್ಪಳವನ್ನು ಕೇವಲ ಮಧ್ಯಮ ಬರ ಪ್ರದೇಶ ಎಂದು ಘೋಷಿಸಿ ಸರಕಾರ
ರೈತರಿಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು.ಕೂಡಲೇ ಕೊಪ್ಪಳವನ್ನು ಬರಪೀಡಿತ ಎಂದು ಘೋಷಿಸಬೇಕು ಹಾಗೂ ಕಡ್ಡಾಯವಾಗಿ 7 ಗಂಟೆ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಶಾಸಕರು ಹಣ ಪಡೆದುಕೊಂಡು ವಿದ್ಯುತ್ ಅನ್ನು ಕಾರ್ಖಾನೆಗಳಿಗೆ ಮಾರಿಕೊಳ್ಳುತ್ತಿದ್ದಾರೆ ಎಂಬ ಬರಹದ ಪೋಸ್ಟರ್ ಹಿಡಿದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಬಿಜೆಪಿ ಸರಕಾರ ಇದ್ದಾಗ ಕೇವಲ 25 ಸಾವಿರ ರೂ. ಕಟ್ಟಿದರೆ ಒಂದು ಟಿಸಿ ಸಿಗುತ್ತಿತ್ತು. ಆದರೆ ರಾಜ್ಯ ಸರಕಾರ 3 ಲಕ್ಷ ರೂ.ಟಿಸಿ ದರ ಗಳಿಗೆ ಏರಿಸಿದೆ. ಒಂದೆಡೆ ಟಿಸಿ ದರ ಏರಿಕೆ, ಮತ್ತೊಂದೆಡೆ ವಿದ್ಯುತ್ ಕಡಿತ ಮಾಡಿ ರೈತರ ಬದುಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ರೈತರು ದೂರಿದರು.
==
21-ಕೆಪಿಎಲ್ ಫೊಟೊ-01
ಕೊಪ್ಪಳ ತಾಲೂಕಿನ ಅಳವಂಡಿಯಲ್ಲಿಬಿಜೆಪಿ ಗ್ರಾಮೀಣ ಮಂಡಲದಿಂದ ಪ್ರತಿಭಟನೆ ನಡೆಸಿತು.
21-ಕೆಪಿಎಲ್ ಫೊಟೊ-02
ಕೊಪ್ಪಳ ತಾಲೂಕಿನ ಅಳವಂಡಿಯಲ್ಲಿಬಿಜೆಪಿ ಮುಖಂಡರು ಕೆಇಬಿಗೆ ಮುತ್ತಿಗೆ ಹಾಕಿದರು.
21-ಕೆಪಿಎಲ್ ಫೊಟೊ-03
ಕೊಪ್ಪಳ ತಾಲೂಕಿನ ಅಳವಂಡಿಯಲ್ಲಿಬಿಜೆಪಿ ಗ್ರಾಮೀಣ ಮಂಡಲ ಪ್ರತಿಭಟನೆ ನಡೆಸಿತು.