ಕೊಣ್ಣೂರು ಅಭಿವೃದ್ಧಿ ಕುರಿತು ಚರ್ಚೆ

Contributed byravideshpande77@gmail.com|Vijaya Karnataka
Vijay Karnataka
ಕೊಣ್ಣೂರು ಅಭಿವೃದ್ಧಿ ಕುರಿತು ಚರ್ಚೆ

ವಿಕ ಸುದ್ದಿಲೋಕ ಬಾಗಲಕೋಟೆ
ಜಮಖಂಡಿ ತಾಲೂಕು ಕೊಣ್ಣೂರು ಗ್ರಾಮಕ್ಕೆ ಮೂಲ ಸೌಕರ್ಯ, ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿ ವಿಷಯಗಳ ಕುರಿತು ಜಿಲ್ಲಾಪಂಚಾಯಿತಿ ಸ್ಥಾಯಿ ಸಮಿತಿ ಸಭಾಂಗಣದಲ್ಲಿಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಸಭೆ ನಡೆಸಿದರು.

ಕೊಣ್ಣೂರು ಗ್ರಾಮದ ಮಡ್ಡಿ ಪ್ಲಾಟ್ ನಲ್ಲಿವಾಸಿಸುತ್ತಿರುವ ನಿವಾಸಿಗಳಿಗೆ ಶಾಶ್ವತ ಹಕ್ಕುಪತ್ರ ನೀಡುವ ಸಂಬಂಧ ಈಗಾಗಲೇ ಗ್ರಾಮಸಭೆ ನಡೆಸಲಾಗಿದೆ. ಮುಂಬರುವ ಗ್ರಾಮಸಭೆಗಳಲ್ಲಿಅರ್ಹ ಫಲಾನುಭವಿಗಳ ಅಂತಿಮ ಪಟ್ಟಿ ಸಿದ್ಧಪಡಿಸಿ, ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.

ಗ್ರಾಮದ ಪ್ರಮುಖ ಸಮಸ್ಯೆ, ನಾನಾ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಿ, ಪರಿಹರಿಸಲು ಅಗತ್ಯ ನಿರ್ದೇಶನ ನೀಡಲಾಯಿತು.

‘‘ಗ್ರಾಮದ ಪ್ರಮುಖ ಆರು ರಸ್ತೆಗಳನ್ನು ಡಾಂಬರೀಕರಣಗೊಳಿಸಲು ಅಗತ್ಯ ಅನುದಾನ ಕೋರಿ ಅಂದಾಜು ಪತ್ರಿಕೆಯೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದ ಮಟ್ಟದಲ್ಲಿಅನುಮೋದನೆ ಹಾಗೂ ಅನುದಾನ ಬಿಡುಗಡೆಗಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು,’’ಎಂದು ಜಿಪಂ ಸಿಇಒ ಗಜಾನನ ಬಾಲೆ ತಿಳಿಸಿದರು.

ಗ್ರಾಮಕ್ಕೆ ಮಂಜೂರಾಗಿದ್ದ ಪದವಿ ಪೂರ್ವ ಕಾಲೇಜು ಬೇರೆಡೆ ವರ್ಗಾಯಿಸಿರುವ ವಿಷಯವನ್ನು ಚರ್ಚಿಸಲಾಯಿತು. ‘‘ಈ ಪ್ರಸ್ತಾವನೆ ಪ್ರಸ್ತುತ ಸರಕಾರದ ಹಂತದಲ್ಲಿದ್ದು, ಅಗತ್ಯ ಕ್ರಮಕ್ಕಾಗಿ ಪರಿಶೀಲಿಸಲಾಗುತ್ತಿದೆ,’’ ಎಂದು ಸಿಇಒ ತಿಳಿಸಿದರು.

ಜಿಪಂ ಉಪ ಕಾರ್ಯದರ್ಶಿ ಎನ್ .ವೈ.ಬಸರಿಗಿಡದ, ತಹಸೀಲ್ದಾರ್ ವಾಸುದೇವ ಸ್ವಾಮಿ, ಮುಖ್ಯ ಎಂಜಿನಿಯರ್ ಆಕಾಶ ವಂದೆ, ತಾಪಂ ಇಒ ಬಡಿಗೇರ ಇದ್ದರು.

ಕೊಣ್ಣೂರು-ಬಿಜಿಕೆ-21

ಕೊಣ್ಣೂರು ಗ್ರಾಮದ ಅಭಿವೃದ್ಧಿ ಕುರಿತು ಬಾಗಲಕೋಟೆಯಲ್ಲಿಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ ನೇತೃತ್ವದಲ್ಲಿಸಭೆ ನಡೆಯಿತು.