ವಿಕ ಸುದ್ದಿಲೋಕ ಬಳ್ಳಾರಿ‘‘ಕಟ್ಟಡ ನಿರ್ಮಾಣದಲ್ಲಿಹೊಸ ತಂತ್ರಜ್ಞಾನ ಹಾಗೂ ನಿರ್ಮಾಣ ಸಾಮಗ್ರಿಗಳ ಮಾಹಿತಿ ಒದಗಿಸಲು ಎಂಜಿನಿಯರ್ ಗಳು, ಕಟ್ಟಡ ನಿರ್ಮಾಣ ಕ್ಷೇತ್ರದ ತಜ್ಞರು ಹಾಗೂ ನಾನಾ ಕಂಪನಿಗಳ ಸಹಯೋಗದಲ್ಲಿಸೆ.25ರಿಂದ 27ರವರೆಗೆ ‘ನಿರ್ಮಾಣ-2026’ ಪ್ರದರ್ಶನ ಆಯೋಜಿಸಲಾಗಿದೆ,’’ ಎಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ ಆ್ಯಂಡ್ ಅರ್ಕಿಟೆಕ್ಟ್ನ ಅಧ್ಯಕ್ಷ ಎ.ಎಸ್ ಸತ್ಯನಾರಾಯಣ ತಿಳಿಸಿದರು.
ನಗರದ ದುರ್ಗಮ್ಮ ದೇವಸ್ಥಾನದ ಬಳಿಕ ಎಂಜಿನಿಯರ್ ಅಸೋಸಿಯೇಶನ್ ಕಚೇರಿಯಲ್ಲಿಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿಮಾತನಾಡಿದರು.
‘‘ನಗರದ ಐಟಿಐ ಮೈದಾನದಲ್ಲಿಮೂರು ದಿನಗಳ ಕಾಲ ನಿರ್ಮಾಣ -2026 ಪ್ರದರ್ಶನ ನಡೆಯಲಿದ್ದು, ನಾನಾ ಕಂಪನಿಗಳ ತಜ್ಞರಿಂದ ಹೊಸ ತಂತ್ರಜ್ಞಾನ ಮತ್ತು ನಿರ್ಮಾಣ ಸಾಮಗ್ರಿಗಳ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ನಿರ್ಮಾಣ ಕ್ಷೇತ್ರಕ್ಕೆ ಅಗತ್ಯವಾದ ಸಿಮೆಂಟ್ , ಸ್ಟೀಲ್ , ಎಲೆಕ್ಟ್ರಿಕಲ್ , ಪ್ಲಂಬಿಂಗ್ , ಇಂಟೀರಿಯರ್ , ಎಕ್ಸಿಟೀರಿಯರ್ , ಗ್ರಾನೈಟ್ , ಮಾರ್ಬಲ್ , ಕಿಟಕಿ, ಲಿಫ್ಟ್ , ಸೋಲಾರ್ ಸೇರಿದಂತೆ ನಾನಾ ಉತ್ಪನ್ನಗಳು ಪ್ರದರ್ಶನದಲ್ಲಿಲಭ್ಯವಿರಲಿವೆ. ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸೆ.25 ಮತ್ತು 26ರಂದು ನಾನಾ ತಾಂತ್ರಿಕ ವಿಚಾರಗಳ ಕುರಿತು ವಿಶೇಷ ಸೆಮಿನಾರ್ ಗಳನ್ನು ಆಯೋಜಿಸಲಾಗಿದೆ. ನಾನಾ ಕಂಪನಿಗಳ 77 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿಬೆಂಗಳೂರು, ಗೋವಾ ಹಾಗೂ ಚೆನ್ನೈನಿಂದ ತಜ್ಞರು ಆಗಮಿಸಿ ವಿಷಯ ಮಂಡಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ವೃತ್ತಿ ಕ್ಷೇತ್ರದಲ್ಲಿಹೊಸ ಅವಕಾಶಗಳ ಕುರಿತು ಮಾಹಿತಿ ನೀಡುವ ಉದ್ದೇಶವೂ ಹೊಂದಲಾಗಿದೆ,’’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿಉಪಾಧ್ಯಕ್ಷ ಶಶಿಧರ ಗಜೇಂದ್ರಗಡ, ಬಿ.ಟಿ.ರಾಕೇಶ್ , ಸುಭಾಷ್ ಚಂದ್ರ, ಆರ್ .ಸುನಿಲ್ , ಪಿ.ಎಂ.ನಿರಂಜನ್ , ಮೂರ್ತಿ ಇದ್ದರು.