ಸುಮಾರು 2,000 ವರ್ಷಗಳ ಹಳೆಯದಾದ ಡೆಡ್ ಸೀ ಸ್ಕೊ್ರೕಲ್ಸ್ ಗೆ ಸಂಬಂಧಿಧಿಸಿದ ದೀರ್ಘಕಾಲದ ರಹಸ್ಯವೊಂದನ್ನು ಟೆಲ್ ಅವೀವ್ ವಿಶ್ವವಿದ್ಯಾಲಯದ ಸಂಶೋಧಕರು ಬಗೆಹರಿಸಿದ್ದಾರೆ. ಹೊಸ ಅಧ್ಯಯನದ ಪ್ರಕಾರ, ಕ್ಯೂಮ್ರಾನ್ (ಕ್ಠಿಞ್ಟa್ಞ) ಸಮುದಾಯದವರು ಬಳಸುತ್ತಿದ್ದ ವಿಶಿಷ್ಟ 364 ದಿನಗಳ ಕ್ಯಾಲೆಂಡರ್ ಕೇವಲ ಧಾರ್ಮಿಕ ಆದರ್ಶವಾಗಿರದೆ, ನಿಜ ಜೀವನದಲ್ಲೂಬಳಕೆಯಲ್ಲಿತ್ತು ಎಂಬುದು ಸ್ಪಷ್ಟಗೊಂಡಿದೆ. ಕುಮ್ರಾನ್ ಪಂಥದವರ ವರ್ಷವು ಸರಿಯಾಗಿ 364 ದಿನಗಳನ್ನು ಹೊಂದಿತ್ತು. ಇದನ್ನು 7ರಿಂದ ಭಾಗಿಸಬಹುದಾಗಿದ್ದು, ಪ್ರತಿ ವರ್ಷವೂ ನಿಖರವಾಗಿ 52 ವಾರಗಳನ್ನು ಒಳಗೊಂಡಿತ್ತು. ಇದರಿಂದ ಹಬ್ಬಗಳು ಪ್ರತಿ ವರ್ಷವೂ ವಾರದ ಅದೇ ದಿನದಂದು ಬರುತ್ತಿದ್ದವು. ಮಾನವ ನಿರ್ಧಾರಗಳ ಬದಲಿಗೆ ದೇವರು ಸೃಷ್ಟಿಯಲ್ಲೇ ದಿನಗಳನ್ನು ನಿಗದಿಪಡಿಸಿದ್ದಾನೆ ಎಂದು ಈ ಪಂಥದವರು ನಂಬಿದ್ದರು. ಆದರೆ 364 ದಿನಗಳ ವ್ಯವಸ್ಥೆಯನ್ನು ದೀರ್ಘಕಾಲ ಬಳಸಿದಾಗ ಋುತುಮಾನಗಳ ವ್ಯತ್ಯಾಸ ಮತ್ತು ರಾಜಕೀಯ ಬದಲಾವಣೆಗಳ ಸವಾಲುಗಳು ಎದುರಾದ ಕಾರಣ ನಂತರದ ದಿನಗಳಲ್ಲಿಇದನ್ನು ಕೈಬಿಡಲಾಗಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.ಫೈಲ್ ನೇಮ್ - ಕ್ಯಾಲೆಂಡರ್