ಜಿಲ್ಲೆಯಲ್ಲಿಮೇವಿನ ಕೊರತೆ ಉಂಟಾಗುವ ಸಂದರ್ಭಗಳಲ್ಲಿಮೇವು ಪೂರೈಕೆಗೆ ಕ್ರಿಯಾ ಯೋಜನೆ ರೂಪಿಸಲು ಹಾಗೂ ಹೆಚ್ಚುವರಿ ಮೇವು ಉತ್ಪಾದನೆ, ಸಂರಕ್ಷಣೆ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿಮೇವು ಉಸ್ತುವಾರಿ ಸಮಿತಿ ರಚಿಸಿ ಜಿಲ್ಲಾಧಿಧಿಕಾರಿ ಡಾ.ಕೆ.ಎನ್ .ಅನುರಾಧ ಆದೇಶ ಹೊರಡಿಸಿದ್ದಾರೆ.
ಗ್ರಾಮ ಪಂಚಾಯಿತಿ ಮಟ್ಟದ ಸಮಿತಿಗೆ ಹಿರಿಯ, ಮುಖ್ಯಪಶುವೈದ್ಯಾಧಿಕಾರಿಗಳು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಧಿಕಾರಿ, ಗ್ರಾಮ ಆಡಳಿತಾಧಿಧಿಕಾರಿ, ಕೃಷಿ ಸಹಾಯಕರು, ಪಶು ಸಖಿಯರು, ಕೃಷಿ ಅನುಗಾರರು, ತೋಟಗಾರಿಕೆ ಸಹಾಯಕರು, ಅರಣ್ಯ ಇಲಾಖೆ ಸಹಾಯಕರು ಸದಸ್ಯರಾಗಿದ್ದು, ಪಂಚಾಯಿತಿ ವ್ಯಾಪ್ತಿಯ ಪಶುವೈದ್ಯಕೀಯ ಪರೀಕ್ಷಕರು ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಸಮಿತಿ ಪ್ರಮುಖ ಕರ್ತವ್ಯಗಳು:
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಜಾನುವಾರುಗಳ ಸಂಖ್ಯೆಯನ್ನು ಆಧರಿಸಿ ಮೇವು ಅವಶ್ಯಕತೆಯನ್ನು ಅಂದಾಜಿಸುವುದು, ಹಸಿರು ಮೇವು, ಒಣ ಮೇವು, ಬೆಳೆ ಅವಶೇಷಗಳು ಹಾಗೂ ಇತರೆ ಮೇವು ಮೂಲಗಳ ಲಭ್ಯತೆಯನ್ನು ನಿಯಮಿತವಾಗಿ ಪರಿಶೀಲಿಸುವುದು, ಮೇವು ಕೊರತೆಯಿರುವ ಗ್ರಾಮಗಳನ್ನು ಗುರುತಿಸಿ, ತಾಲೂಕು ಮಟ್ಟದ ಅಧಿಧಿಕಾರಿಗಳಿಗೆ ವರದಿ ಸಲ್ಲಿಸುವುದು, ಮೇವು ಕೊರತೆ ಸಾಧ್ಯತೆ ಕಂಡುಬಂದಲ್ಲಿಮುಂಚಿತವಾಗಿ ಮೇವು ಸಂಗ್ರಹಣೆ, ಉತ್ಪಾದನೆ ಮತ್ತು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವುದು, ಸರಕಾರಿ, ಸಾರ್ವಜನಿಕ ಭೂಮಿ, ಗೋಮಾಳ ಹಾಗೂ ಇತರೆ ಸೂಕ್ತ ಸ್ಥಳಗಳಲ್ಲಿಮೇವು ಬೆಳೆಗಳ ಅಭಿವೃದ್ಧಿಗೆ ಕ್ರಮ ವಹಿಸುವುದು, ರೈತರು ಮತ್ತು ಜಾನುವಾರು ಸಾಕಣೆದಾರರಿಗೆ ಮೇವು ಬೆಳೆಗಳ ಉತ್ಪಾದನೆ, ಸಂರಕ್ಷಣೆ ಮತ್ತು ವೈಜ್ಞಾನಿಕ ಬಳಕೆಯ ಕುರಿತು ಅರಿವು ಮೂಡಿಸುವುದು.
ಬರ ಅಥವಾ ಇತರೆ ಪ್ರಕೃತಿ ವಿಕೋಪ ಸಂದರ್ಭದಲ್ಲಿಉಂಟಾಗಬಹುದಾದ ಮೇವು ಕೊರತೆಯನ್ನು ಎದುರಿಸಲು ಮುನ್ನೆಚ್ಚರಿಕಾ ಕ್ರಿಯಾ ಯೋಜನೆ ರೂಪಿಸುವುದು, ಸಮೀಪದ ಗ್ರಾಮ ಪಂಚಾಯಿತಿ, ತಾಲೂಕುಗಳಿಂದ ಹೆಚ್ಚುವರಿ ಮೇವು ಲಭ್ಯತೆಯನ್ನು ಗುರುತಿಸಿ ಮರುಹಂಚಿಕೆ ಮತ್ತು ಪೂರೈಕೆಗೆ ಸಮನ್ವಯ ಸಾಧಿಧಿಸುವುದು, ಮೇವು ಲಭ್ಯತೆ ಮತ್ತು ಕೊರತೆಯ ಕುರಿತು ನಿಯಮಿತವಾಗಿ ಮಾಹಿತಿ ಸಂಗ್ರಹಿಸಿ ದಾಖಲಿಸುವುದು, ಮೇವು ಕೊರತೆ ತೀವ್ರವಾಗಿರುವ ಸಂದರ್ಭದಲ್ಲಿಮೇಲಾಧಿಧಿಕಾರಿಗಳ ಅನುಮೋದನೆಯೊಂದಿಗೆ ಜಾನುವಾರು ಶಿಬಿರ, ಮೇವು ಬ್ಯಾಂಕ್ ಹಾಗೂ ಸಾಕಣಿಕೆ ಕ್ರಮ ಕೈಗೊಳ್ಳುವಂತಹ ಜವಾಬ್ದಾರಿ ವಹಿಸಿ ಆದೇಶ ಹೊರಡಿಸಿದ್ದಾರೆ.