ರಾಜ್ಯ ರೈತ ಸಂಘದಿಂದ ಧರಣಿ (ಹೆಡ್ )

Contributed byshashikiresur92@gmail.com|Vijaya Karnataka
Vijay Karnataka
ಬರ ಘೋಷಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ (ಬಾಕ್ಸ್ )

ರಾಜ್ಯ ರೈತ ಸಂಘದಿಂದ ಧರಣಿ (ಹೆಡ್ )
ವಿಕ ಸುದ್ದಿಲೋಕ ರೋಣ

ತಾಲೂಕನ್ನು ಬರಪೀಡಿತ ಎಂದು ಘೋಷಿಸುವುದು, ಬೆಳೆ ವಿಮೆ ಜಮಾವನೆಯಲ್ಲಿವಿಳಂಬ, ಪ್ರಧಾನಮಂತ್ರಿ ಧನ ಧಾನ್ಯ ಯೋಜನೆಯ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ರೋಣ ಹಾಗೂ ಗಜೇಂದ್ರಗಡ ತಾಲೂಕು ಘಟಕಗಳು ಮತ್ತು ನರೇಗಲ್ ಹೋಬಳಿ ಘಟಕದಿಂದ ರೋಣ ತಹಸೀಲ್ದಾರ್ ಕಚೇರಿ ಆವರಣದಲ್ಲಿಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭವಾಗಿದೆ.

ಧರಣಿ ಸತ್ಯಾಗ್ರಹದಲ್ಲಿರೈತರಿಗೆ ಬೆಂಬಲ ಸೂಚಿಸಿ ಮಾತನಾಡಿದ ಕೇಂದ್ರ ಆಹಾರ ನಿಗಮದ ನಿರ್ದೇಶಕ ರವಿ ದಂಡಿನ, ರೋಣ ತಾಲೂಕು ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದರೂ ರಾಜ್ಯ ಸರಕಾರ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿರೋಣವನ್ನು ಪರಿಗಣಿಸದೆ ಈ ಭಾಗದ ರೈತರಿಗೆ ಘೋರ ಅನ್ಯಾಯವೆಸಗಿದೆ. ಈಗಾಗಲೇ ಗದಗ ತಾಲೂಕನ್ನು ಬರಪೀಡಿತ ಪಟ್ಟೆಯಿಂದ ಹೊರಗಿಟ್ಟಿದ್ದು, ಇದನ್ನು ಪ್ರತಿಭಟಿಸಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಗದಗ ಮತಕ್ಷೇತ್ರದ ಶಾಸಕ ಎಚ್ .ಕೆ.ಪಾಟೀಲ ರಾಜೀನಾಮೆ ನೀಡುವುದಾಗಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದು ರೋಣ ಮತಕ್ಷೇತ್ರದ ಶಾಸಕರು ಆಗಿರುವ ಸಭಾಪತಿ ಜಿ.ಎಸ್ .ಪಾಟೀಲರು ಸರಕಾರದ ಮಟ್ಟದಲ್ಲಿಪ್ರಭಾವಿಯಾಗಿದ್ದು ತಕ್ಷಣವೇ ರೋಣ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ಸೂಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ಗದಗ ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಡರಡ್ಡಿ ಮಾತನಾಡಿ, ಸಭಾಧ್ಯಕ್ಷರ ತವರು ಕ್ಷೇತ್ರದಲ್ಲಿರೈತರಿಗೆ ಅನ್ಯಾಯವಾಗುತ್ತಿದ್ದು, ಸರಕಾರ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರದಲ್ಲಿನಿರತವಾಗಿದೆ. ರೈತರು ಆರ್ಥಿಕವಾಗಿ ಸಬಲರಾಗುವುದು ಸರಕಾರಕ್ಕೆ ಬೇಕಾಗಿಲ್ಲ. ರಾಜ್ಯ ಸರಕಾರಕ್ಕೆ ಕಿಂಚಿತ್ತಾದರು ರೈತರ ಬಗ್ಗೆ ಒಲವಿದ್ದರೆ ತಕ್ಷಣವೇ ನಮ್ಮ ಎಲ್ಲಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಗಂಗಪ್ಪ, ರೋಣ ತಹಸೀಲ್ದಾರ್ ನಾಗರಾಜ ಕೆ. ಸೇರಿದಂತೆ ಅಧಿಕಾರಿಗಳ ತಂಡ, ರೈತರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಆದಷ್ಟು ಶೀಘ್ರ ಬಗೆಹರಿಸುವುದಾಗಿ ಭರವಸೆ ನೀಡಿದರು. ಜತೆಗೆ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿರೋಣ ತಾಲೂಕು ಸೇರ್ಪಡೆಗೊಳಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬೆಳೆ ವಿಮೆಗೆ ಸಂಬಂಧಿಸಿದ ರೈತರ ಪ್ರಶ್ನೆಗಳಿಗೆ ಉತ್ತರ ನೀಡುವವರೆಗೂ ಧರಣಿ ಮುಂದುವರಿಸುವುದಾಗಿ ಇದೇ ವೇಳೆ ರೈತರು ಅಧಿಕಾರಿಗಳಿಗೆ ತಿಳಿಸಿದರು.

ಈ ವೇಳೆ ಮಹದೇವಗೌಡ ಪಾಟೀಲ, ಸಂಗಣ್ಣ ದಂಡಿನ, ಸಂಗಣ್ಣ ಪವಾಡಶೆಟ್ಟಿ, ವೀರನಗೌಡ ಪಾಟೀಲ, ಲಕ್ಕಪ್ಪ ಹರಪನಹಳ್ಳಿ, ಶರಣಪ್ಪ ಚನ್ನಪ್ಪಗೌಡ್ರ, ಬಸನಗೌಡ ಚನ್ನಪ್ಪಗೌಡ್ರ, ಬಸವರಾಜ ಹೊಸಮನಿ, ವಸಂತಕುಮಾರ ಮಾರಣಬಸರಿ, ಶಾಂತವೀರಯ್ಯ ಬೆನಹಾಳಮಠ, ಪರಸಪ್ಪ ಶಂಕ್ರಿ, ಬಸವರಾಜ ತೊಂಡಿಹಾಳ, ಶರಣಪ್ಪ ಧರ್ಮಾಯತ, ಯಮನೂರ ಬಿಚ್ಚುಮನಿ ಸೇರಿದಂತೆ ಇತರರು ಇದ್ದರು.

ಫೋಟೊ: 21 ್ಕON PಏOTO 01:

ರೋಣ ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿನಡೆಯುತ್ತಿರುವ ರೈತರ ಧರಣಿ ಸತ್ಯಾಗ್ರಹ ಬೆಂಬಲಿಸಿ, ಕೇಂದ್ರ ಆಹಾರ ನಿಗಮದ ನಿರ್ದೇಶಕ ರವಿ ದಂಡಿನ ಮಾತನಾಡಿದರು.