ಪೌಷ್ಟಿಕ ಆಹಾರ ಬಗ್ಗೆ ಗಮನಹರಿಸಿ

Contributed byblokesh71@yahoo.com|Vijaya Karnataka
Vijay Karnataka
ಪೌಷ್ಟಿಕ ಆಹಾರ ಬಗ್ಗೆ ಗಮನಹರಿಸಿ

---
ವಿಕ ಸುದ್ದಿಲೋಕ ಚಳ್ಳಕೆರೆ

ಹೊಟ್ಟೆ ತುಂಬ ಊಟ ಮಾಡಿದ ಕೂಡಲೇ ಪೌಷ್ಟಿಕತೆ ಸಿಕ್ಕಂತೆ ಅಲ್ಲ, ಸೊಪ್ಪು ಮತ್ತು ತರಕಾರಿ ಸೇವಿಸುವುದು ಮುಖ್ಯ ಎಂದು ಅಪರ ಸಿವಿಲ್ ನ್ಯಾಯಾಧೀಶರಾದ ಕೆ.ಎಸ್ .ಸಂಗಮಿತ್ರ ಹೇಳಿದರು.

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಕಾನೂನು ಸೇವಾ ಸಮಿತಿ, ವಕೀಲರ ಸಂಘದ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಟಿಕಾಂಶ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

ಪೌಷ್ಟಿಕತೆ ಆಹಾರ ಪದ್ಧತಿ ಬಗ್ಗೆ ಮನೆಯಲ್ಲಿಮಹಿಳೆಯರು ಹೆಚ್ಚಿನ ಗಮನಹರಿಸಬೇಕು. ಮಹಿಳೆ ಆರೋಗ್ಯವಾಗಿದ್ದಲ್ಲಿಇಡೀ ಕುಟುಂಬ ಆರೋಗ್ಯವಾಗಿರುವುದು. ರಕ್ತ ಹೀನತೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪೌಷ್ಟಿಕತೆ ಕಾಪಾಡುವಲ್ಲಿಅಂಗನವಾಡಿ ಕಾರ್ಯಕರ್ತೆಯರ ಪಾತ್ರ ಮುಖ್ಯವಾಗಿದ್ದು, ಮನೆ ಮನೆಗೆ ತಲುಪಿಸಬೇಕಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಜಿ.ಆರ್ .ಅಶ್ವತ್ಥನಾಯಕ ಮಾತನಾಡಿ, ಪೂರ್ವಿಕರ ಕಾಲದ ಪೌಷ್ಟಿಕ ಆಹಾರ ಪದ್ಧತಿಗಳನ್ನು ಬಿಟ್ಟು ಬೇರೆ ದಿಕ್ಕಿನಲ್ಲಿಹೋದ ಪರಿಣಾಮ ಪ್ರಸ್ತುತ ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಹಣ್ಣು, ತರಕಾರಿ, ಕಾಳುಗಳಲ್ಲಿಔಷಧ ಗುಣಗಳಿರುವುದರಿಂದ, ಮನೆಯಲ್ಲಿಇವು ಊಟದ ಆಹಾರವಾಗಬೇಕು ಎಂದರು.

ಸಿಡಿಪಿಒ ರಾಜನಾಯ್ ್ಕ ಮಾತನಾಡಿದರು. ವಕೀಲರ ಸಂಘದ ಉಪಾಧ್ಯಕ್ಷೆ ಶ್ಯಾಮಲ, ಸರಕಾರಿ ಅಭಿಯೋಜಕಿ ಗೀತಾಂಜಲಿ, ತಾಪಂ ಎಡಿ ಸಂಪತ್ ಕುಮಾರ್ , ಆರೋಗ್ಯ ಇಲಾಖೆಯ ತಿಪ್ಪೇಸ್ವಾಮಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿದ್ದರು.

---

21ಸಿಎಲ್ ಕೆ 1

ಚಳ್ಳಕೆರೆಯಲ್ಲಿಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಟಿಕಾಂಶ ದಿನಾಚರಣೆಯ ಕಾರ್ಯಕ್ರಮವನ್ನು ಅಪರ ಸಿವಿಲ್ ನ್ಯಾಯಾಧೀಶರಾದ ಕೆ.ಎಸ್ .ಸಂಗಮಿತ್ರ ಉದ್ಘಾಟಿಸಿದರು.

21ಸಿಎಲ್ ಕೆ 2

ಚಳ್ಳಕೆರೆಯಲ್ಲಿಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ಪೌಷ್ಟಿಕಾಂಶ ದಿನಾಚರಣೆಯ ಕಾರ್ಯಕ್ರಮದಲ್ಲಿಮಹಿಳೆಯರು ಸಂಗ್ರಹಿಸಿದ್ದ ಸೊಪ್ಪು, ತರಕಾರಿ ಮತ್ತು ಕಾಳು ವೀಕ್ಷಿಸುತ್ತಿರುವ ಅಪರ ಸಿವಿಲ್ ನ್ಯಾಯಾಧೀಶರಾದ ಕೆ.ಎಸ್ .ಸಂಗಮಿತ್ರ ಮತ್ತು ವಕೀಲರು.