Biology Harvestman Hammerhead Shark And Sharkazlura
ವಿಜ್ಙಾನ ಲೋಕ
Contributed by: Shrividya Rao|Vijaya Karnataka•
ಹಾರ್ವೆಸ್ಟ್ ಮೆನ್ (ಏa್ಟvಛಿsಠಿಞಛ್ಞಿ)
ಸಾಮಾನ್ಯವಾಗಿ ಡ್ಯಾಡಿ ಲಾಂಗ್ ಲೆW್ಸ… (ಈaddy ಔಟ್ಞಜ-ಔಛಿಜs) ಎಂದೂ ಕರೆಯಲ್ಪಡುವ ಈ ಜೀವಿಗಳು ಜೇಡರ ಹುಳುಗಳನ್ನು ಹೋಲುವ ಒಪಿಲಿಯೊನೀಸ್ ವರ್ಗಕ್ಕೆ ಸೇರಿವೆ. ಮೇಲ್ನೋಟಕ್ಕೆ ಇವುಗಳನ್ನು ನೋಡಿದರೆ ಜೇಡಗಳಂತೆ ಕಾಣುತ್ತವೆ ಮತ್ತು ಎಂಟು ಕಾಲುಗಳನ್ನು ಹೊಂದಿರುತ್ತವೆ. ಆದರೆ ಇವು ನಿಜವಾದ ಜೇಡಗಳಲ್ಲ. ಜೇಡಗಳಿಗೆ ಎರಡು ಪ್ರತ್ಯೇಕ ದೇಹದ ಭಾಗಗಳಿದ್ದರೆ, ಹಾರ್ವೆಸ್ಟ್ ಮೆನ್ ಜೀವಿಗಳ ದೇಹದ ಭಾಗಗಳು ಒಂದಕ್ಕೊಂದು ಸೇರಿಕೊಂಡು ಒಂದೇ ದೊಡ್ಡ ದೇಹದಂತೆ ಕಾಣುತ್ತವೆ. ಇವು ಜೇಡಗಳಂತೆ ರೇಷ್ಮೆ ಬಲೆಗಳನ್ನು ನೇಯುವುದಿಲ್ಲ. ಇವುಗಳ ಬಳಿ ಯಾವುದೇ ವಿಷ ಗ್ರಂಥಿಗಳಾಗಲಿ, ಕೋರೆಹಲ್ಲುಗಳಾಗಲಿ ಇರುವುದಿಲ್ಲ. ಆದ್ದರಿಂದ ಇವು ಮನುಷ್ಯರಿಗೆ ಸಂಪೂರ್ಣವಾಗಿ ನಿರುಪದ್ರವಿಗಳು. ಈ ಜೀವಿಗಳಿಗೆ ಅಪಾಯ ಎದುರಾದಾಗ ತಮ್ಮ ಕಾಲುಗಳನ್ನು ತಾವೇ ಕಳಚಿಕೊಂಡು ತಮ್ಮನ್ನು ರಕ್ಷಿಸಿಕೊಳ್ಳುತ್ತವೆ. ಇತರ ಜೇಡಗಳಂತೆ ಇವು ದ್ರವ ಆಹಾರ ಮಾತ್ರ ಸೇವಿಸದೆ ಸತ್ತ ಕೀಟಗಳು, ಸಸ್ಯಗಳು, ಮತ್ತು ಶಿಲೀಂಧ್ರಗಳನ್ನು ತಿಂದು ಬದುಕುತ್ತವೆ.ಫೈಲ್ ನೇಮ್ - ಹಾರ್ವೆಸ್ಟ್ ಮೆನ್
----------------------
ಹ್ಯಾಮರ್ ಹೆಡ್ ಶಾರ್ಕ್
ಸಾಗರ ಜೀವಿಗಳಲ್ಲಿ ಹ್ಯಾಮರ್ ಹೆಡ್ ಶಾರ್ಕ್ಗಳ ತಲೆಯ ಆಕಾರವು ಅತ್ಯಂತ ವಿಸ್ಮಯಕಾರಿಯಾಗಿದ್ದು. ಇವುಗಳ ತಲೆಯು ಚಪ್ಪಟೆಯಾಗಿ ಮತ್ತು ಸುತ್ತಿಗೆಯ ಆಕಾರದಲ್ಲಿವಿಸ್ತಾರವಾಗಿರಲು ಹಲವು ವೈಜ್ಞಾನಿಕ ಕಾರಣಗಳಿವೆ. ವೈಜ್ಞಾನಿಕವಾಗಿ ಇದನ್ನು ಸೆಫಾಲೊಫಾಯಿಲ್ ಎಂದು ಕರೆಯಲಾಗುತ್ತದೆ. ಈ ಶಾರ್ಕ್ಗಳ ತಲೆಯ ಎರಡೂ ತುದಿಗಳಲ್ಲಿಕಣ್ಣುಗಳಿದ್ದು, ಸಾಗರದಲ್ಲಿವಿಶಾಲವಾದ ಕೋನದಲ್ಲಿ ನೋಡಲು ಸಾಧ್ಯವಾಗುತ್ತದೆ. ಇವುಗಳ ತಲೆಯು ಅಗಲವಾಗಿರುವುದರಿಂದ ವಿದ್ಯುತ್ ಸಂವೇದನಾ ಅಂಗಗಳು ವಿಶಾಲವಾಗಿ ಹರಡಿಕೊಂಡಿರುತ್ತವೆ. ಇದು ಸಮುದ್ರದ ಆಳದಲ್ಲಿಅಥವಾ ಮರಳಿನಲ್ಲಿಅಡಗಿರುವ ಮೀನುಗಳು ಹೊರಸೂಸುವ ಅತ್ಯಂತ ಸೂಕ್ಷ್ಮ ವಿದ್ಯುತ್ ಸಂಕೇತಗಳನ್ನು ಸುಲಭವಾಗಿ ಗ್ರಹಿಸಲು ನೆರವಾಗುತ್ತದೆ. ಅಪಾಯಕಾರಿ ಬೇಟೆಗಳನ್ನು ಹಿಡಿಯಲು ಇದರ ತಲೆಯು ಆಯುಧದಂತೆ ಬಳಕೆಯಾಗುತ್ತದೆ. ಈ ವಿಶಿಷ್ಟ ಆಕಾರವು ಸಮುದ್ರದಲ್ಲಿಅತ್ಯಂತ ವೇಗವಾಗಿ ದಿಕ್ಕು ಬದಲಿಸಲು, ಮೇಲಕ್ಕೆ ಮತ್ತು ಕೆಳಕ್ಕೆ ಚಲಿಸಲು ಮತ್ತು ಸಮತೋಲನ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.
ಶಾಕಾಜ್ಲುರಾ ರಿಯೊಜಾನೆನ್ಸಿಸ್ ಎಂಬುದು ಅತ್ಯಂತ ಪ್ರಾಚೀನ ಮತ್ತು ದೈತ್ಯ ಗಾತ್ರದ ಪರಭಕ್ಷಕ ಜೀವಿಯಾಗಿದೆ. ಅರ್ಜೆಂಟೀನಾದ ಟಲಂಪಾಯ ರಾಷ್ಟ್ರೀಯ ಉದ್ಯಾನವನದಲ್ಲಿ ಇದರ ಪಳೆಯುಳಿಕೆಗಳು ತಲೆಬುರುಡೆ ಮತ್ತು ಅಸ್ಥಿಪಂಜರದ ಭಾಗಗಳು ಪತ್ತೆಯಾಗಿವೆ. ಇದು ಸುಮಾರು 237 ಮಿಲಿಯನ್ ವರ್ಷಗಳ ಹಿಂದೆ ಟ್ರಯಾಸಿಕ್ ಅವಧಿಧಿಯಲ್ಲಿಅಂದರೆ ಡೈನೋಸಾರ್ ಗಳ ಕಾಲಘಟ್ಟಕ್ಕೂ ಮುಂಚೆ ಭೂಮಿಯ ಮೇಲೆ ವಾಸಿಸುತ್ತಿತ್ತು. ಈ ಜೀವಿ ಸುಮಾರು 6 ಮೀಟರ್ ಗಳಷ್ಟು ಉದ್ದವಿತ್ತು. ಸ್ಥಳೀಯ ಕಕಾನ್ ಭಾಷೆಯಲ್ಲಿಶಾಕಾಜ್ ಎಂದರೆ ಪವಿತ್ರ ಮತ್ತು ಲುರಾ ಎಂದರೆ ಹಲ್ಲಿಎಂದರ್ಥ. ರಿಯೊಜಾನೆನ್ಸಿಸ್ ಎನ್ನುವುದು ಈ ಜೀವಿ ಪತ್ತೆಯಾದ ಅರ್ಜೆಂಟೀನಾದ ಲಾ ರಿಯೊಜಾ ಪ್ರಾಂತ್ಯವನ್ನು ಸೂಚಿಸುತ್ತದೆ. ಇದು ಪ್ಯಾರಾಕ್ರೊಕೊಡಿಲೋಮಾರ್ಫಾ ಗುಂಪಿಗೆ ಸೇರಿದ್ದು, ಆಧುನಿಕ ಮೊಸಳೆಗಳ ವಿಕಾಸದ ಹಾದಿಯನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳಿಗೆ ಈ ಆವಿಷ್ಕಾರವು ಅತ್ಯಂತ ಮುಖ್ಯವಾಗಿದೆ.