814 ಉಪನ್ಯಾಸಕ ಹುದ್ದೆ ಭರ್ತಿ

Contributed byshiva.rama@timesgroup.com|Vijaya Karnataka
direct recruitment for 814 lecturer positions in karnataka
ಬೆಂಗಳೂರು: ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿಖಾಲಿಯಿರುವ ವಿವಿಧ ವಿಷಯಗಳ 814 ಉಪನ್ಯಾಸಕರ ನೇರ ನೇಮಕಾತಿಗೂ ಸರಕಾರ ಅನುಮತಿ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆಯ್ಕೆ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸಲಿದ್ದು, ನೇಮಕಾತಿ ಪ್ರಕಟಣೆ ಹೊರಡಿಸುವಂತೆ ಸರಕಾರ ಕೆಇಎಗೆ ಸೂಚಿಸಿದೆ.

ಕಲ್ಯಾಣ ಕರ್ನಾಟಕಕ್ಕೆ 36 ಹುದ್ದೆ, ಕಲ್ಯಾಣ ಕರ್ನಾಟಕಕೇತರರಿಗೆ 778 ಹುದ್ದೆಗಳನ್ನು ಮೀಸಲಿಡಲಾಗಿದ್ದು, ಒಟ್ಟು 814 ಉಪನ್ಯಾಸಕರ ಹುದ್ದೆಗಳ ಭರ್ತಿಗೆ ಸರಕಾರ ಸಮ್ಮತಿ ಸೂಚಿಸಿದೆ.
ವಿಷಯವಾರು ಹುದ್ದೆ:

ಕನ್ನಡ 89, ಇಂಗ್ಲಿಷ್ 145, ಇತಿಹಾಸ 50, ಅರ್ಥಶಾಸ್ತ್ರ 90, ರಾಜ್ಯಶಾಸ್ತ್ರ 25, ಸಮಾಜಶಾಸ್ತ್ರ 25, ಭೂಗೋಳಶಾಸ್ತ್ರ 10, ವಾಣಿಜ್ಯಶಾಸ್ತ್ರ 150, ಭೌತಶಾಸ್ತ್ರ 30, ರಸಾಯನಶಾಸ್ತ್ರ 30, ಗಣಿತ 30, ಜೀವಶಾಸ್ತ್ರ 30, ಕಂಪ್ಯೂಂಟರ್ ಸೈನ್ಸ್ 110.