ವೆಂಕಟ ಎನ್ ., ಬೆಂಗಳೂರುಬಾಣಂತಿಯ ದೇಹ ಮೊದಲಿನಂತಾಗಲು ಪಥ್ಯಾಹಾರ ಸೇವಿಸಬೇಕಾಗುತ್ತದೆ. ಮಗುವಿಗೆ ಹಾಲುಣಿಸುವ ಅವರಿಗೆ ಪೋಷಕಾಂಶಗಳ ಕೊರತೆಯೂ ಉಂಟಾಗುತ್ತದೆ. ಈ ಸಮಯದಲ್ಲಿದೇಹವನ್ನು ಸಮತೋಲಿತವಾಗಿಡಲು ಬಾಣಂತಿ ಲೇಹ್ಯ ಮಾಡಲಾಗುತ್ತದೆ. ತಾಯಿಯ ದೇಹಕ್ಕೆ ನಂಜು ಆಗಬಾರದು, ಕೆಮ್ಮು, ಶೀತ, ಜ್ವರ ಕಾಡಬಾರದೆಂದು ಮತ್ತು ನೋವು ನಿವಾರಕವಾಗಿಯೂ ಇದನ್ನು ಕೊಡಲಾಗುತ್ತಿತ್ತು.
ಮಲೆನಾಡಿನ ಕಡೆ ಬಾಣಂತಿ ಲೇಹ್ಯವನ್ನು ಕಬ್ಬಿನ ರಸ, ಹೇರಳೆಕಾಯಿ ರಸ, ಶುಂಠಿ ರಸ, ತುಪ್ಪ ಹಾಗೂ ಹಲವು ಆಯುರ್ವೇದದ 40ಕ್ಕೂ ಹೆಚ್ಚು ಗಿಡಮೂಲಿಕೆಗಳನ್ನು ಮಾಡಲಾಗುತ್ತದೆ. ಇದನ್ನು ತಯಾರಿಸುವುದು ಸುಲಭದ ಮಾತಲ್ಲ. ಒಮ್ಮೆ ಎಲ್ಲಮಿಶ್ರಣಗಳ ಜೊತೆ ಒಲೆಯ ಮುಂದೆ ಕುಳಿತು ಕದಡಲು ಶುರು ಮಾಡಿದರೆ ಸುಮಾರು ಎರಡರಿಂದ ಮೂರು ಗಂಟೆಗಳ ಕಾಲ ನೀರನ್ನು ಸೋಕಿಸದೆ ಆ ಮಿಶ್ರಣ ಗಟ್ಟಿಯಾಗುವುದನ್ನು ಕಾಯುವುದು ಕಷ್ಟದ ಕೆಲಸವೇ. ಈ ಲೇಹ್ಯವನ್ನು ಎಷ್ಟು ವರ್ಷಗಳ ಕಾಲವಿಟ್ಟರೂ ಹಾಳಾಗುವುದಿಲ್ಲ.