ಇಂಟ್ರೊಉಪೇಂದ್ರ ಅನೇಕ ಸಿನಿಮಾಗಳಲ್ಲಿನಟಿಸುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಅವರ ಬತ್ ರ್ ಡೇಗೆ ಬಂದಿದ್ದು ಎರಡೇ ಸಿನಿಮಾಗಳ ಪೋಸ್ಟರ್ . ಹಾಗಾದರೆ ಅವರ ಉಳಿದ ಸಿನಿಮಾ ಕಥೆ ಏನು?
ಕಿರಣ್ ಚಂದ್ರ
ಕಳೆದ ಡಿಸೆಂಬರ್ ನಲ್ಲಿನಟ, ನಿರ್ದೇಶಕ ಉಪೇಂದ್ರ ಅಭಿನಯದ ‘45’ ಸಿನಿಮಾ ತೆರೆಕಂಡಿತ್ತು. ಅದಾಗಿ ಒಂದೇ ತಿಂಗಳಲ್ಲಿಅವರ 20 ವರ್ಷಗಳಷ್ಟು ಹಳೆಯ ಚಿತ್ರ ‘ರಕ್ತ ಕಾಶ್ಮೀರ’ ಬಿಡುಗಡೆಯಾಗಿತ್ತು್ತ. ಆದರೆ ಈ ವರ್ಷ ಉಪ್ಪಿಯ ಯಾವುದೇ ಸಿನಿಮಾ ರಿಲೀಸ್ ಆಗುವ ಮಾಹಿತಿ ಬಂದಿಲ್ಲ. ಖುದ್ದು ಅವರೇ ಯಾವ ಚಿತ್ರ ಬಿಡುಗಡೆಯಾಗಲಿದೆ ಎಂದು ನಾನು ಹುಡುಕುತ್ತಿರುವೆ ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಕಳೆದ ಒಂದು ವರ್ಷದಲ್ಲಿಅವರ ಅರ್ಧ ಡಜನ್ ಗೂ ಹೆಚ್ಚು ಸಿನಿಮಾಗಳು ಸದ್ದು ಮಾಡಿವೆ. ಆದರೆ ಈ ಬಾರಿ ಅರವಿಂದ್ ಕೌಶಿಕ್ ನಿರ್ದೇಶನದ ‘ನೆಕ್ಸ್ಟ್ ಲೆವೆಲ್ ’ ಹಾಗೂ ತೆಲುಗಿನ ‘ಜೋಂಬಿ ರೆಡ್ಡಿ 2.0’ ಬಿಟ್ಟು ಮತ್ಯಾವುದೇ ಸಿನಿಮಾಗಳ ಪೋಸ್ಟರ್ , ಟೀಸರ್ ಗಳು ರಿಲೀಸ್ ಆಗಿಲ್ಲ.
‘ಭಾರ್ಗವ’ ಎಲ್ಲಿದ್ದಾನೆ?
ಉಪೇಂದ್ರ ನಟನೆಯ ‘ನೆಕ್ಸ್ಟ್ ಲೆವೆಲ್ ’ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಇದರಲ್ಲಿಹೊಸ ಲುಕ್ ಮೂಲಕ ಅವರು ಭರವಸೆ ಮೂಡಿಸಿದ್ದಾರೆ. ಆದರೆ ಇದಕ್ಕೂ ಮೊದಲೇ ಅನೌನ್ಸ್ ಆಗಿ ಶೂಟಿಂಗ್ ಆರಂಭಿಸಿರುವ ‘ಭಾರ್ಗವ’ ಚಿತ್ರದ ಯಾವುದೇ ಅಪ್ಡೇಟ್ ಬಂದಿಲ್ಲ. ಕಳೆದ ವರ್ಷ ಉಪ್ಪಿ ಬತ್ ರ್ ಡೇಯಂದು ಇದರ ಟೀಸರ್ ರಿಲೀಸ್ ಆಗಿತ್ತು. ನಾಗಣ್ಣ ನಿರ್ದೇಶನದ ಈ ಸಿನಿಮಾ 53 ದಿನಗಳ ಶೂಟಿಂಗ್ ಮುಗಿಸಿದ್ದು, ಇನ್ನು ಕೆಲವೇ ದಿನಗಳ ಚಿತ್ರೀಕರಣ ಬಾಕಿ ಇದೆ ಎಂಬ ಮಾಹಿತಿ ಸಿನಿಮಾ ತಂಡದಿಂದ ಸಿಕ್ಕಿದೆ. 2026ರಲ್ಲಿಈ ಸಿನಿಮಾ ರಿಲೀಸ್ ಆಗಲಿದೆ ಎಂದು ಆರಂಭದಿಂದಲೇ ಹೇಳಲಾಗುತ್ತಿದೆಯಾದರೂ ಇದು ಈ ವರ್ಷ ಬರುವ ಯಾವುದೇ ಸೂಚನೆ ಸಿಕ್ಕಿಲ್ಲ.
ಹಳೆ ಚಿತ್ರಕ್ಕೆ ರಿಲೀಸ್ ಭಾಗ್ಯ
ಹಿರಿಯ ನಿರ್ದೇಶಕ ಓಂಪ್ರಕಾಶ್ ರಾವ್ ಅವರು ಉಪೇಂದ್ರ ಹಾಗೂ ರವಿಚಂದ್ರನ್ ಕಾಂಬಿನೇಶನ್ ನಲ್ಲಿ2018ರಲ್ಲೇ ‘ರವಿಚಂದ್ರ’ ಎಂಬ ಮಲ್ಟಿಸ್ಟಾರರ್ ಸಿನಿಮಾ ಆರಂಭಿಸಿದ್ದರು. 2020ರಲ್ಲಿಇದಕ್ಕೆ ‘ತ್ರಿಶೂಲಂ’ ಎಂದು ಮರುನಾಮಕರಣ ಮಾಡಿದ್ದರು. ಈ ಮೆಗಾ ಕಾಂಬಿನೇಶನ್ ಸಿನಿಮಾ ಬಹುತೇಕ ಪೂರ್ಣಗೊಂಡಿದೆ ಎನ್ನಲಾಗಿದ್ದರೂ ಯಾವಾಗ ರಿಲೀಸ್ ಎನ್ನುವ ಮಾಹಿತಿ ಸಿಕ್ಕಿಲ್ಲ. ಇನ್ನು 2019ರಲ್ಲೇ ಸೆಟ್ಟೇರಿ ಬಹುತೇಕ ಶೂಟಿಂಗ್ ಮುಗಿಸಿರುವ ಅವರ ಮತ್ತೊಂದು ಸೂಪರ್ ಹಿಟ್ ಸಿನಿಮಾ ‘ಬುದ್ಧಿವಂತ’ದ ಸೀಕ್ವೆಲ್ ‘ಬುದ್ಧಿವಂತ-2’ ಶೂಟಿಂಗ್ ಮುಗಿಸಿ ತೆರೆಗೆ ಬರಲು ಸಿದ್ಧವಿದ್ದರೂ ಅದು ಇನ್ನೂ ರಿಲೀಸ್ ಭಾಗ್ಯ ಕಂಡಿಲ್ಲ.
ಎರಡು ಚಿತ್ರಗಳ ಸುಳಿವೇ ಇಲ್ಲ
ಉಪ್ಪಿ ನಟನೆಯ ‘ತ್ರಿಶೂಲಂ’ ಚಿತ್ರ ಬಿಡುಗಡೆಯಾಗದಿದ್ದರೂ ಕಳೆದ ವರ್ಷ ಅವರ ಹುಟ್ಟುಹಬ್ಬದ ಸಮಯದಲ್ಲಿ‘ಗೆರಿಲ್ಲಾವಾರ್ ’ ಎಂಬ ಸಿನಿಮಾವನ್ನು ನಿರ್ದೇಶಕ ಓಂಪ್ರಕಾಶ್ ರಾವ್ ಅನೌನ್ಸ್ ಮಾಡಿದ್ದರು. ಅವರ ನಿರ್ದೇಶನದ ಈ 50ನೇ ಸಿನಿಮಾ ಕೂಡ ಶೂಟಿಂಗ್ ಆರಂಭಿಸಿಲ್ಲ. ತಮ್ಮ 49ನೇ ಸಿನಿಮಾ ಮುಗಿಸುವ ಮುನ್ನವೇ 50ನೇ ಚಿತ್ರ ಅನೌನ್ಸ್ ಮಾಡಿಕೊಂಡಿದ್ದ ನಿರ್ದೇಶಕರು, ಇದೇ ಸಮಯದಲ್ಲಿರಿಯಾಲಿಟಿ ಶೋನಲ್ಲಿಸಕ್ರಿಯರಾಗಿದ್ದು, ಅಭಿಮಾನಿಗಳಿಗೆ ಬೇಸರ ತರಿಸಿದೆ. ಇದೇ ರೀತಿ ‘ಕರ್ವ’ ಚಿತ್ರದ ನಿರ್ದೇಶಕ ನವನೀತ್ ಕೂಡ ಉಪೇಂದ್ರರಿಗೆ ಆ್ಯಕ್ಷನ್ ಕಟ್ ಹೇಳುವುದಾಗಿ ಅನೌನ್ಸ್ ಮಾಡಿದ್ದರು. ಈ ಸ್ಪೋರ್ಟ್ಸ್ ಡ್ರಾಮಾದಲ್ಲಿಉಪೇಂದ್ರ ಶ್ರೀಮಂತ ಉದ್ಯಮಿ ಪಾತ್ರದಲ್ಲಿನಟಿಸುತ್ತಾರೆ ಎಂಬ ಸುದ್ದಿ ಅವರ ಅಭಿಮಾನಿಗಳಲ್ಲಿಕುತೂಹಲ ಮೂಡಿಸಿತ್ತು. ಆದರೆ ಈ ಸಿನಿಮಾ ಕುರಿತು ಯಾವುದೇ ಹೊಸ ಮಾಹಿತಿ ಬಂದಿಲ್ಲ.
ಬಾಕ್ಸ್
ಉಪ್ಪಿ ಸಿನಿಮಾ ಬರಬೇಕಿದೆ
ಸದ್ಯಕ್ಕೆ ಕನ್ನಡದ ‘ನೆಕ್ಸ್ಟ್ ಲೆವೆಲ್ ’ ಮತ್ತು ‘ಭಾರ್ಗವ’ ಬಿಟ್ಟರೆ ತೆಲುಗಿನಲ್ಲಿ‘ಜೋಂಬಿ ರೆಡ್ಡಿ-2’, ತಮಿಳಿನಲ್ಲಿ‘ಬ್ರೋ ಕೋಡ್ ’ ಸಿನಿಮಾಗಳ ಶೂಟಿಂಗ್ ನಲ್ಲಿನಿರತವಾಗಿರುವುದಾಗಿ ಉಪೇಂದ್ರ ಅವರೇ ಬಹಿರಂಗಪಡಿಸಿದ್ದಾರೆ. ಆದರೆ ಆರ್ . ಚಂದ್ರು ನಿರ್ದೇಶನದ ‘ಕಬ್ಜ-2’, ಕೆ. ಮಾದೇಶ್ ಅನೌನ್ಸ್ ಮಾಡಿರುವ ‘ಲಗಾಮು’, ಶಶಾಂಕ್ ನಿರ್ದೇಶನದ ಯಾವುದೇ ಸಿನಿಮಾಗಳ ಬಗ್ಗೆ ಮಾಹಿತಿಯನ್ನು ಅವರು ಹಂಚಿಕೊಂಡಿಲ್ಲ. ಉಪೇಂದ್ರ ನಿರ್ದೇಶನದ ಸಿನಿಮಾ ಯಾಕಿಲ್ಲಎಂಬ ಪ್ರಶ್ನೆಗಳನ್ನೂ ಅಭಿಮಾನಿಗಳು ಕೇಳುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಸದ್ಯದ ಪರಿಸ್ಥಿತಿಯಲ್ಲಿಉಪೇಂದ್ರ ನಟನೆ ಹಾಗೂ ನಿರ್ದೇಶನದ ಸಿನಿಮಾಗಳ ಅಗತ್ಯತೆ ಹೆಚ್ಚಿರುವುದಂತೂ ಸತ್ಯ.