**ಹಗಲಿನಲ್ಲೇ ಮನೆಯ ಬಾಗಿಲು ಮುರಿದು 7.5 ಪವನ್ ಚಿನ್ನಾಭರಣ ಕಳ್ಳತನ

Contributed byprakashamailankote@gmail.com|Vijaya Karnataka
7 5
ಮುಳ್ಳೇರಿಯ: ಮನೆಯಲ್ಲಿಯಾರೂ ಇಲ್ಲದ ಸಮಯದಲ್ಲಿಮನೆಯ ಬಾಗಿಲು ಮುರಿದು ಕಪಾಟಿನಲ್ಲಿದ್ದ 7.5 ಪವನ್ ಚಿನ್ನಾಭರಣವನ್ನು ಕಳ್ಳತನ ಮಾಡಿದ ಘಟನೆ ಕುಂಟಾರು ಬಳಿಯ ಬಳ್ಳಕ್ಕಾಡು ಎಂಬಲ್ಲಿನಡೆದಿದೆ.

ಆಟೋ ಚಾಲಕ ಬಳ್ಳಕ್ಕಾಡು ಸದಾನಂದ ಅವರ ಮನೆಯಲ್ಲಿಭಾನುವಾರ ಈ ಘಟನೆ ನಡೆದಿದೆ. ಸದಾನಂದ ಆಟೋ ಓಡಿಸಲು, ಪತ್ನಿ ಆಸ್ಪತ್ರೆಗೆ ನರ್ಸ್ ಕೆಲಸಕ್ಕೆ, ಮಗ ತರಗತಿಗೆ ತೆರಳಿದ್ದ ಸಮಯದಲ್ಲಿಕಳವು ನಡೆದಿದೆ. ಸದಾನಂದ ಮನೆಗೆ ಮರಳಿದಾಗ ಘಟನೆ ಅರಿವಿಗೆ ಬಂದಿದೆ. ಸದಾನಂದ ಅವರು ನೀಡಿದ ದೂರಿನಂತೆ ಆದೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.