ಅಂತಾರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನಾಚರಣೆ

Contributed bygmbasayya459@gmail.com|Vijaya Karnataka
Vijay Karnataka
ಅಂತಾರಾಷ್ಟ್ರೀಯ ಹಾವು ಕಡಿತ ಜಾಗೃತಿ ದಿನಾಚರಣೆ

ಎಮ್ಮಿಗನೂರು: ಗ್ರಾಮದ ವೇಣಿ ಕ್ಯಾಂಪಿನ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಂತಾರಾಷ್ಟ್ರೀಯ ಹಾವು ಕಡಿತ ಜಾಗೃತಿ ಕಾರ್ಯಕ್ರಮ ನಡೆಯಿತು.
ಈ ವೇಳೆ ಕೇಂದ್ರದ ವೈದ್ಯಾಧಿಕಾರಿ ಮಹಮದ್ ಫಾರೂಖ್ ಮಾತನಾಡಿ, ‘‘ ಹಾವು ಕಚ್ಚಿದಾಗ ಯಾವುದೇ ಕಾರಣಕ್ಕೂ ಆತಂಕ ಅಥವಾ ಗಾಬರಿಗೊಳ್ಳಬೇಡಿ. ಕಚ್ಚಿದ ಜಾಗದ ಮೇಲ್ಭಾಗದಲ್ಲಿರಕ್ತಬಂಧಕ ಪಟ್ಟಿ ಅಥವಾ ಬಿಗಿಯಾದ ಬಟ್ಟೆಯನ್ನು ಕಟ್ಟಬೇಡಿ. ಗಾಯವನ್ನು ಚಾಕುವಿನಿಂದ ಕೊಯ್ಯುವುದು, ಬಾಯಿಯಿಂದ ವಿಷ ಹೀರುವುದು ಮಾಡಬೇಡಿ. ಗಾಯಕ್ಕೆ ಯಾವುದೇ ನಾಟಿ ಮದ್ದು, ಎಲೆ-ಗಿಡಮೂಲಿಕೆ ಅಥವಾ ಇನ್ಯಾವುದೇ ವಸ್ತುಗಳನ್ನು ಹಚ್ಚಬೇಡಿ. ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಹೋಗಿ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಡಿ,’’ ಎಂದರು.

‘‘ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಟ್ , ವಾಚ್ , ಆಭರಣ ಹಾಗೂ ಬಿಗಿಯಾದ ಬಟ್ಟೆಗಳನ್ನು ತಕ್ಷಣ ತೆಗೆಯಿರಿ. ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ, ಕಡಿತಕ್ಕೊಳಗಾದ ಅಂಗವನ್ನು ಅಲುಗಾಡದಂತೆ ನೋಡಿಕೊಳ್ಳಿ. ತಕ್ಷಣವೇ ಹತ್ತಿರದ ಸರಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಿರಿ,’’ ಎಂದು ಸಲಹೆ ನೀಡಿದರು.

ಈ ವೇಳೆ ಹಿರಿಯ ಆರೋಗ್ಯ ನಿರೀಕ್ಷರಾದ ಎಂ.ಬಸವನಗೌಡ, ಪೂಜಾಬಾವಿ, ಕೃಷ್ಣಮೂರ್ತಿ, ಶೇಕ್ಷವಲಿ, ಶಾಲೆಯ ಮುಖ್ಯಶಿಕ್ಷಕ ಉಮೇಶ, ಸಹಶಿಕ್ಷರು, ಆರೋಗ್ಯ ಸಿಬ್ಬಂದಿ, ಮಕ್ಕಳು ಇದ್ದರು.

21 ವೈಎಂಜಿ 4

ಎಮ್ಮಿಗನೂರು ಗ್ರಾಮದ ವೇಣಿ ಕ್ಯಾಂಪಿನ ಸರಕಾರಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಅಂತಾರಾಷ್ಟ್ರೀಯ ಹಾವು ಕಡಿತ ಜಾಗೃತಿ ಕಾರ್ಯಕ್ರಮ ನಡೆಯಿತು.