ಮಕ್ಕಳ ಕಲಿಕೆಗೆ ಒತ್ತು ನೀಡಿ

Contributed by: satalingayyasalimath71@gmail.com|Vijaya Karnataka•
focus on childrens education a step towards excellent education in vijayapura rural area
ಮಕ್ಕಳ ಕಲಿಕೆಗೆ ಒತ್ತು ನೀಡಿ

ವಿಕ ಸುದ್ದಿಲೋಕ ತಿಕೋಟಾ
‘‘ಶಾಲೆಗಳಲ್ಲಿಎಲ್ ಬಿಎ, ಕಾಮ್ಸ್ ಹಾಗೂ ನಿರಂತರ ಹಾಜರಾತಿ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಮಕ್ಕಳ ಕಲಿಕಾ ಪ್ರಗತಿಗೆ ಹೆಚ್ಚಿನ ಒತ್ತು ನೀಡಬೇಕು’’ ಎಂದು ವಿಜಯಪುರ ಗ್ರಾಮೀಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಹೇಳಿದರು.

ಪಟ್ಟಣದ ಎಂಪಿಎಸ್ ಶಾಲೆಯಲ್ಲಿನಡೆದ ಮುಖ್ಯಶಿಕ್ಷಕರ ಸಭೆಯಲ್ಲಿಮಾತನಾಡಿದ ಅವರು, ‘‘ವಿಜಯಪುರ ಗ್ರಾಮೀಣ ವಲಯದ 1ರಿಂದ 10ನೇ ತರಗತಿಯ ಸುಮಾರು 42 ಸಾವಿರ ಮಕ್ಕಳು ನಿರಂತರ ಆ್ಯಪ್ ನಲ್ಲಿದಾಖಲಾಗಬೇಕಿದ್ದು, ಈ ಪೈಕಿ 38,500 ಮಕ್ಕಳ ನೋಂದಣಿ ಪೂರ್ಣಗೊಂಡಿದೆ. ಡುಪ್ಲಿಕೇಟ್ ದಾಖಲೆಗಳಿದ್ದರೆ ಅದನ್ನು ಪರಿಶೀಲಿಸಿ ಡಿಲೀಟ್ ಮಾಡಬೇಕು’’ ಎಂದು ಸೂಚಿಸಿದರು.

‘‘ಶಾಲೆಗಳಲ್ಲಿಪ್ರತಿದಿನ ಶೇ.50ರಷ್ಟು ಹಾಜರಾತಿ ದಾಟದಿರುವುದು ಗಮನಕ್ಕೆ ಬಂದಿದೆ. ತಾಂತ್ರಿಕ ದೋಷದಿಂದ ಹಾಜರಾತಿ ದಾಖಲಿಸಲು ಸಾಧ್ಯವಾಗದಿದ್ದರೆ, ಅದನ್ನು ಪರಿಹರಿಸಲಾಗುವುದು. ಪ್ರತಿಯೊಂದು ಮಗುವಿನ ಹಾಜರಾತಿಯನ್ನು ನಿರಂತರ ಆ್ಯಪ್ ನಲ್ಲಿಕಡ್ಡಾಯವಾಗಿ ದಾಖಲಿಸಬೇಕು. ಮುಖ್ಯಶಿಕ್ಷಕರು ತಾಳ್ಮೆ ಕಳೆದುಕೊಳ್ಳದೆ ವೃತ್ತಿಪರತೆಯಿಂದ ಕರ್ತವ್ಯ ನಿರ್ವಹಿಸಬೇಕು’’ ಎಂದು ಹೇಳಿದರು.

‘‘ಸಿಎಸ್ ಆರ್ ಅನುದಾನದಡಿ ಸಚಿವ ಎಂ.ಬಿ.ಪಾಟೀಲ ಅವರು ಶಾಲೆಗಳಿಗೆ ನೀಡಿರುವ ಆಟಿಕೆ ಸಾಮಗ್ರಿಗಳಿಂದ ಮಕ್ಕಳ ಭಾವನಾತ್ಮಕ ಹಾಗೂ ಸೃಜನಶೀಲ ವಿಕಾಸಕ್ಕೆ ಸಹಕಾರಿಯಾಗುತ್ತಿದೆ’’ ಎಂದು ತಿಳಿಸಿದರು.

ಶಿಕ್ಷಣ ಸಂಯೋಜಕ ಜಿ.ಟಿ.ಕಾಗವಾಡ, ಡಿ.ಜಿ.ಸಜ್ಜನ, ಆರ್ .ಬಿ.ಪಾಟೀಲ, ಎಂ.ಎಸ್ .ಟಕ್ಕಳಕಿ, ಸಾಬು ಗಗನಮಾಲಿ, ಮಹಾಂತೇಶ ರಾಠೋಡ, ಎಂ.ಎಂ.ಮಕಾನದಾರ, ಬಿ.ಸಿ.ನಾವಿ, ಬಿ.ವೈ.ಮೇಡೆಗಾರ ಎಲ್ಲಶಾಲೆಯ ಮುಖ್ಯಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

ಪೋಟೊ

ತಿಕೋಟಾ ಪಟ್ಟಣದಲ್ಲಿನಡೆದ ಮುಖ್ಯಗುರುಗಳ ಸಭೆಯಲ್ಲಿವಿಜಯಪುರ ಗ್ರಾಮೀಣ ವಲಯದ ಬಿಇಒ ಬಸವರಾಜ ತಳವಾರ ಮಾತನಾಡಿದರು.