ಜಿಲ್ಲೆಯಲ್ಲಿಗುರಿ ಮೀರಿ ಯುವಕರ ಸೇರ್ಪಡೆ | ಗ್ರಾಮೀಣ ಪ್ರದೇಶದಲ್ಲಿ179, ನಗರದಲ್ಲಿ93 ಸಂಘ
ಭಾರತ್ ಜೋಡೋಗೆ ಹೆಚ್ಚಿದ ನೋಂದಣಿಸಂತೋಷ ಆನಂಪಲ್ಲಿರಾಯಚೂರು
ಯುವಶಕ್ತಿ ಸಬಲೀಕರಣಕ್ಕಾಗಿ ರಾಜ್ಯ ಸರಕಾರ ಜಾರಿಗೆ ತಂದಿರುವ ‘ಭಾರತ್ ಜೋಡೊ ಯುವ ಸಂಘ’ ಯೋಜನೆಯಡಿ ಜಿಲ್ಲೆಯಲ್ಲಿನಿಗದಿತ ಗುರಿ ಮೀರಿ ನೋಂದಣಿ ಯಶಸ್ವಿಯಾಗಿದೆ.
ಜಿಲ್ಲೆಗೆ ಸರಕಾರ 27,200 ಸದಸ್ಯರ ಗುರಿ ನೀಡಿದ್ದರೆ, ಈವರೆಗೆ 30,400 ಸದಸ್ಯರು ನೋಂದಣಿಯಾಗಿದ್ದಾರೆ. ಆನ್ ಲೈನ್ ನೋಂದಣಿ ಪೂರ್ಣಗೊಂಡಿದ್ದು, ಆಫ್ ಲೈನ್ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿಒಟ್ಟು 272 ಯುವ ಸಂಘ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ.ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ತಲಾ ಒಂದರಂತೆ 179 ಸಂಘ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿಜನಸಂಖ್ಯೆ ಆಧಾರದ ಮೇಲೆ 93 ಸಂಘ ರಚನೆಯಾಗಲಿವೆ.
ಚಟುವಟಿಕೆ ಏನು?:
ಪ್ರತಿ ಸಂಘಕ್ಕೆ ಸರಕಾರ 10 ಲಕ್ಷ ರೂ.ವರೆಗೆ ಅನುದಾನ ನೀಡಲಿದೆ. ಗ್ರಾಮೀಣ ಕ್ರೀಡಾಕೂಟ, ಯೋಗ ಶಿಬಿರ, ಸಾಂಪ್ರದಾಯಿಕ ಆಟ, ಕೆರೆ-ಕಲ್ಯಾಣಿ ಸ್ವಚ್ಛತೆ, ಸ್ವಚ್ಛತಾ ಅಭಿಯಾನ, ಸಸಿ ನೆಡುವುದು, ಹವಾಮಾನ ಜಾಗೃತಿ, ರಕ್ತದಾನ, ಮಾನಸಿಕ ಆರೋಗ್ಯ ಜಾಗೃತಿ, ಸಾಂಸ್ಕೃತಿಕ ಕಾರ್ಯಕ್ರಮ, ಭಾವೈಕ್ಯತೆ, ಜಲ ಸಂರಕ್ಷಣೆ, ತ್ಯಾಜ್ಯ ನಿರ್ವಹಣೆ, ಸೈಬರ್ ಸುರಕ್ಷತೆ, ಸಂಚಾರ ನಿಯಮ ಜಾಗೃತಿ, ಕೃಷಿ ನಾವೀನ್ಯತೆ, ಮಾದಕ ವಸ್ತು ವಿರೋಧಿ ಅಭಿಯಾನ ಸೇರಿ ಸಾಮಾಜಿಕ ಚಟುವಟಿಕೆ ನಡೆಸಬೇಕು.
ಅರ್ಹತೆ:
16ರಿಂದ 35 ವರ್ಷದೊಳಗಿನ ಯುವಕರು ‘ಭಾರತ್ ಜೋಡೊ ಯುವ ಸಂಘ’ ಯೋಜನೆಯಡಿ ನೋಂದಣಿಗೆ ಅರ್ಹರಾಗಿದ್ದಾರೆ. ಆಧಾರ್ ಆಧಾರಿತ ನೋಂದಣಿ ಕಡ್ಡಾಯವಾಗಿದ್ದು, 10 ರೂ. ಶುಲ್ಕ ನಿಗದಿಪಡಿಸಿದ್ದು, ಗ್ರಾಮ ಒನ್ , ಕರ್ನಾಟಕ ಒನ್ , ನಾಗರಿಕ ಸೇವಾ ಕೇಂದ್ರಗಳಲ್ಲಿನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ. ಸಂಘದ ಕಾರ್ಯಕ್ಕೆ ಶಾಲೆ, ಕಾಲೇಜು, ಸಮುದಾಯ ಭವನ ಅಥವಾ ಸರಕಾರಿ ಕಟ್ಟಡದಲ್ಲಿನ ಕೊಠಡಿ ಒದಗಿಸಲಾಗುವುದು. ಪ್ರತಿ ಸಂಘಕ್ಕೂ ತರಬೇತುದಾರ, ಮೇಲ್ವಿಚಾರಕರ ನೇಮಕವಾಗಲಿದ್ದು, 20 ಮಾಸ್ಟರ್ ಟ್ರೈನರ್ ನೇಮಕಕ್ಕೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
---
ಜಿಲ್ಲೆಯಲ್ಲಿಭಾರತ್ ಜೋಡೊ ಯುವ ಸಂಘದ ನೋಂದಣಿ ಕಾರ್ಯ ಉತ್ತಮವಾಗಿದೆ. ಈಗಾಗಲೇ ಜಿಲ್ಲೆಗೆ ನೀಡಲಾಗಿರುವ ಗುರಿ ಪೂರ್ಣಗೊಳಿಸಿದ್ದು, 16ರಿಂದ 35 ವರ್ಷದೊಳಗಿನವರನ್ನು ಸಂಘದ ಸದಸ್ಯರನ್ನಾಗಿ ಮಾಡಲಾಗುತ್ತಿದೆ.
- ವೀರೇಶ ನಾಯಕ ಸಹಾಧಿಯಕ ನಿರ್ದೇಧಿಶಧಿಕರು, ಯುವಜನ ಸಬಧಿಲೀಧಿಕಧಿರಣ ಕ್ರೀಡಾ ಇಲಾಖೆ, ರಾಯಧಿಚೂಧಿರು