ರಾಜ್ಯದಲ್ಲಿಬರಗಾಲ ಎದುರಿಸಲು ನಮ್ಮ ಸರಕಾರದ ಗ್ಯಾರಂಟಿ ಯೋಜನೆಗಳೇ ಜೀವನಕ್ಕೆ ಆಧಾರವಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಆರ್ .ಬಿ.ತಿಮ್ಮಾಪೂರ ಹೇಳಿದ್ದಾರೆ.
ಬೆಂಗಳೂರದಲ್ಲಿನಡೆದ ಬರ ವಿಶೇಷ ಅಧಿವೇಶನದಲ್ಲಿಮಾತನಾಡಿದರು.
ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ರೈತರ ಪರ ಮಾತನಾಡುವ ನೈತಿಕೆ ಉಳಿಸಿಕೊಂಡಿಲ್ಲ. ರಾಜ್ಯದ ಜನ ಸಾಮಾನ್ಯರ, ರೈತರಪರ ಉಪಯೋಗವಾಗುವ ಅನುಷ್ಠಾನದ ಮಾತುಗಳನ್ನಾಡುವ ಬದಲು ಅನಾವಶಕ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ ಎತ್ತರಕ್ಕೆ ಅಧಿಸೂಚನೆ ಹೊರಡಿಸಿದ್ರೆ ಇನ್ನು 100 ಟಿಎಂಸಿ ನೀರು ಸಂಗ್ರಹ ಮಾಡಬಹುದಿತ್ತು. ಬಿಜೆಪಿಯವರು ವಿನಾಕರಣ ಆರೋಪ ಮಾಡುವುದು ಬಿಟ್ಟು ರೈತರ ಪರ ಕೆಲಸ ಮಾಡುವುದು ಆಗಬೇಕೆಂದರು. ಕೇಂದ್ರ ಸರಕಾರ ಬರ ನಿಯಮವಳಿಗಳನ್ನು ಬದಲಾಯಿಸಬೇಕು. ನಮ್ಮ ಸರಕಾರದಿಂದ ಗ್ಯಾರಂಟಿ ಯೋಜನೆಗಳು ಆಸರೆಯಾಗಿವೆ. ಬಡವರಿಗೆ ಅನ್ನಭಾಗ್ಯ ಹೊಟ್ಟೆ ತುಂಬಿಸುತ್ತಿದೆ. ಗೃಹಲಕ್ಷಿತ್ರ್ಮೕ ಆಧಾರ, ಗ್ಯಾರಂಟಿ ಯೋಜಯ ಮೂಲಕ ರೈತರು, ಬಡವರು, ಮಧ್ಯಮ ವರ್ಗದವರ ಪರ ಸರಕಾರದ ಕಾಳಜಿಯಾಗಿದೆ.
ನಮ್ಮ ಸಿಎಂ,ಡಿಸಿಎಂ ಕೇಂದ್ರ ಸರಕಾರಕ್ಕೆ ಬರದ ಸ್ಥಿತಿಗತಿಯನ್ನು ವಿವರಿಸಿದ್ದಾರೆ. ಆದರೇ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿತ್ತ ಸಚಿವರು ಉತ್ತರಿಸದೇ ಮೌನವಾಗಿದ್ದಾರೆ. ಕೇಂದ್ರ ಸರಕಾರದ ಮಂತ್ರಿಗಳಾದರೂ ಯಾರಾದರೂ ಬಾಯಿಬಿಟ್ಟರಾ?3 ದಿನಗಳಿಂದ ಚರ್ಚೆ ನಡೆಯುತ್ತಿದೆ. ಬಿಜೆಪಿ, ಜೆಡಿಎಸ್ ಪಕ್ಷದ ಮುಖಂಡರು ಕೇಂದ್ರ ಸರಕಾರದ ಗಮನಕ್ಕೆ ತರೋಣ ಎಂದು ರಾಜ್ಯದ ಜನರ ಹಿತವನ್ನು ಇಟ್ಟುಕೊಂಡು ಮಾತನಾಡುತ್ತಿದ್ದಾರಾ. ಬರೀ ರಾಜ್ಯದ ಟೀಕೆ ಮಾಡೋಕ ಸೀಮಿತಾ? ಜನರಿಗೆ ಎಲ್ಲವೂ ಅರ್ಥವಾಗುತ್ತಿದೆ.
ಬರಗಾಲ ಅಂದ್ರ ಗುಜರಾಥಗೆ ಸಾವಿರ ಕೋಟ್ರೆ ಕೋಟಿ, ರಾಜ್ಯಕ್ಕೆ ಯಾಕೆ ಅನ್ಯಾಯ, ಎಥೆನಾಲ್ ಹಂಚಿಕೆಯಲ್ಲಿತಾರತಮ್ಯಮ ಎಲ್ಲವನ್ನು ರಾಜಕೀಯವಾಗಿ ನೋಡುವುದು ತಪ್ಪು ಎಂದು ಕಿಡಿಕಾರಿದರು.
ಬೆಳೆವಿಮೆ ಭಯಾನಕ
ಇದು ಏಜೆಂಟಗಳು ಹಣ ಹೊಡೆಯುವಂತಹ ಯೋಜನೆಯಾಗಿದೆ. ನಿಜವಾದ ರೈತರಿಗೆ ಮುಟ್ಟುತ್ತಿಲ್ಲ. ಎಲ್ಲಜಿಲ್ಲೆಗಳಲ್ಲಿದುರುಪಯೋಗವಾಗುತ್ತಿದೆ. ರೈತರಿಂದ ಐಡಿ ಕಾರ್ಡ್ ಪಡೆದು ಏಜೆಂಟಗಳೇ ಹಣ ತುಂಬಿ ಆಕ್ರಮ ನಡೆಸುತ್ತಿದ್ದಾರೆ. ಈರುಳ್ಳಿ ಇದ್ರೆ ಸೆಂಗಾ ಅಂತಾ ಬರೆಸ್ತಾರೆ, ನಮ್ಮ ಮುಧೋಳ ತಾಲೂಕುದಿಂದ ಬೀದರದಿಂದ ಚಾಮರಾಜನಗರದವರಿಗೂ ಅಕ್ರಮ ಆಗಿದೆ. ಈ ಬಗ್ಗೆ ಸಮಗ್ರ ತನಿಖೆಗೆಯಾಗಬೇಕಾಗಿದೆ. ಇದಕ್ಕೆ ಶಾಶ್ವತವಾಗಿ ಕಡಿವಾಣ ಹಾಕಿ ನೈಜ್ಯ ರೈತರಿಗೆ ಬೆಳೆವಿಮೆ ಪರಿಹಾರ ಕೊಡಬೇಕು ಎಂದು ಮನವಿ ಮಾಡಿಕೊಂಡರು.