ವೋಟ್ ಬ್ಯಾಂಕ್ ರಾಜಕಾರಣ

Contributed by: Siddappa.Marabasari@timesgroup.com|Vijaya Karnataka•
vande mataram shri ram senas attack on congresss vote bank politics
ವೋಟ್ ಬ್ಯಾಂಕ್ ರಾಜಕಾರಣ

ಬಾಗಲಕೋಟೆ : ‘‘ವಂದೇ ಮಾತರಂ ಗೀತೆಯ ನಾಲ್ಕು ಚರಣ ಮಾತ್ರ ಹಾಡುತ್ತೇವೆ ಎನ್ನುವ ಕಾಂಗ್ರೆಸ್ ನವರು ಅಲ್ಪಸಂಖ್ಯಾತರ ಓಲೈಕೆಯಲ್ಲಿತೊಡಗಿದ್ದಾರೆ’’ ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿಗುರುವಾರ ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆ ನಿಮಿತ್ತ ಬಸವೇಶ್ವರ ಸರ್ಕಲ್ ನಲ್ಲಿಆಯೋಜಿಸಿದ್ದ ಸಭೆಯಲ್ಲಿಅವರು ಮಾತನಾಡಿದರು.

‘‘ಹಿಂದೂ ದೇವತೆಗಳ ಗುಣಗಾನ ಮಾಡುವ ವಂದೇ ಮಾತರಂ ಗೀತೆಯನ್ನು ರಾಷ್ಟ್ರ ಗೀತೆ ಸರಿಸಮಾನವಾಗಿ ಕೇಂದ್ರ ಸರಕಾರ ಘೋಷಿಸಿದೆ. ಆದರೆ ಸದಾ ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್ ನವರು ವೋಟ್ ಬ್ಯಾಂಕ್ ಗಾಗಿ ವಂದೇ ಮಾತರಂ ಗೀತೆ ಪೂರ್ತಿಯಾಗಿ ಹಾಡುತ್ತಿಲ್ಲ’’ ಎಂದು ಆರೋಪಿಸಿದರು.

‘‘ಗಣೇಶ ಉತ್ಸವದಲ್ಲಿಡಿಜೆಗೆ ಆಕ್ಷೇಪಿಸುವ ರಾಜ್ಯ ಸರಕಾರ ಇತರ ಕೋಮಿನವರು ಪ್ರತಿನಿತ್ಯ ಬಳಸುವ ಸ್ಪೀಕರ್ ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವುದಿಲ್ಲ. ದೇಶದಲ್ಲಿಪ್ರತಿ ನಿತ್ಯ ಹಿಂದೂ ಯುವತಿಯರ ಮತಾಂತರ ನಡೆಯುತ್ತಿದೆ. ಗೋಹತ್ಯೆ ನಿಷೇಧ ಕಾಯಿದೆಯಿದ್ದರೂ ರಾಜ್ಯ ಸರಕಾರ ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿಲ್ಲ. ಹಿಂದೂಗಳು ಜಾತಿ, ಪಕ್ಷ ಭೇದ ಮರೆತು ಒಗ್ಗಟ್ಟಾಗಬೇಕಿದೆ‘‘ ಎಂದರು.

ಫೋಟೊ:

ಬಾಗಲಕೋಟೆಯಲ್ಲಿಗುರುವಾರ ಹಿಂದೂ ಮಹಾ ಗಣಪತಿ ವಿಸರ್ಜನೆ ಮೆರವಣಿಗೆ ನಿಮಿತ್ತ ಬಸವೇಶ್ವರ ಸರ್ಕಲ್ ನಲ್ಲಿಆಯೋಜಿಸಿದ್ದ ಸಭೆಯಲ್ಲಿಪ್ರಮೋದ್ ಮುತಾಲಿಕ್ ಮಾತನಾಡಿದರು.