* ddddddssಛಿsಛಿs

Contributed by: nateshababu.hc@timesgroup.com|Vijaya Karnataka•
importance of cooperatives and income tax regulations in karnataka
- ಕೋ-ಆಪರೇಷನ್ -

ಸಹಕಾರ ಸಂಘಗಳು ಲಾಭವನ್ನೂ ಮಾಡಬೇಕು, ಹಿತವನ್ನೂ ಕಾಯಬೇಕು!
ಕರ್ನಾಟಕದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನಜೀವನದೊಂದಿಗೆ ಬೆಸೆದುಕೊಂಡಿರುವ ಸಹಕಾರ ಕ್ಷೇತ್ರವು ಇಂದು ಕೃಷಿ , ಹಣಕಾಸು ಹಾಗೂ ಹೈನುಗಾರಿಕೆ ಸೇರಿದಂತೆ ಹತ್ತು ಹಲವು ರಂಗಗಳಲ್ಲಿಲಕ್ಷಾಂತರ ಕೋಟಿ ರೂಪಾಯಿಗಳ ವಹಿವಾಟು ನಡೆಸುತ್ತಿದೆ. ಸಮಾಜಸೇವೆಯ ಜತೆಗೆ ವಾಣಿಜ್ಯ ಸಂಸ್ಥೆಯಂತೆ ಲಾಭ ಗಳಿಸಿ ಸದಸ್ಯರ ಹಿತ ಕಾಯಬೇಕಾದ ಜವಾಬ್ದಾರಿ, ಕಟ್ಟುನಿಟ್ಟಾದ ಕಾನೂನು ನಿಯಮಾವಳಿಗಳು ಹಾಗೂ ಆದಾಯ ತೆರಿಗೆಯ ಸಂಕೀರ್ಣ ಸವಾಲುಗಳ ನಡುವೆಯೂ ಈ ಸಂಸ್ಥೆಗಳು ‘ಸಹಕಾರ ಧರ್ಮ’ವನ್ನು ಮುನ್ನಡೆಸುತ್ತಿವೆ.

======

ನಮ್ಮ ರಾಜ್ಯದಲ್ಲಿಸುಮಾರು 50,000 ಸಹಕಾರ ಸಂಘಗಳು ಕೆಲಸ ಮಾಡುತ್ತಿವೆ. ನಗರ, ಪಟ್ಟಣ, ತಾಲೂಕು, ಹೋಬಳಿ, ಹಳ್ಳಿ, ಗ್ರಾಮ ಧಿ- ಎಲ್ಲೆಡೆಗಳಲ್ಲಿಸಹಕಾರ ಸಂಘಗಳು ವ್ಯಾಪಿಸಿವೆ. ಹಣ, ಹಾಲು, ಮೀನು, ಆಹಾರ ಧಾನ್ಯ, ಸಕ್ಕರೆ, ಬಟ್ಟೆ, ವಸತಿ, ಕೃಷಿ, ಕೃಷಿ ಉತ್ಪನ್ನಗಳು, ಗುಡಿ ಕೈಗಾರಿಕೆ, ಎಣ್ಣೆಕಾಳು, ಜಾನುವಾರು, ಹೂವು-ಹಣ್ಣು, ತರಕಾರಿ ಹೀಗೆ ಹಲವಾರು ಜನೋಪಯೋಗಿ ಸಮುದಾಯ ಸೇವೆಯಲ್ಲಿಸಹಕಾರ ಸಂಘಗಳು ತೊಡಗಿವೆ. ಸಹಕಾರ ಸಂಘಗಳ ಕಾರ್ಯವ್ಯಾಪ್ತಿಯು ನಮ್ಮ ದೇಶದಲ್ಲಿಎಷ್ಟು ಅಗಾಧವಾಗಿದೆ ಎಂದರೆ, ಸಹಕಾರ ಸಂಘಗಳ ಉಸ್ತುವಾರಿ ಮತ್ತು ನಿಯಂತ್ರಣಕ್ಕೆ ಕೇಂದ್ರ ಸರಕಾರದಲ್ಲಿಅಮಿತ್ ಶಾ ಅವರಂತಹ ಅತ್ಯಂತ ಹಿರಿಯ ಸಚಿವರಿದ್ದಾರೆ.

ರಾಜ್ಯ ಮಟ್ಟದಲ್ಲಿಸಹಕಾರ ಸಂಘಗಳಿಗೆ ಮೀಸಲಾದ ಪ್ರತ್ಯೇಕ ಸಚಿವಾಲಯವಿದ್ದು, ಈಗಿನ ಹೊಸ ಸರಕಾರದಲ್ಲಿಲಕ್ಷ್ಮಣ ಸವದಿ ಸಹಕಾರ ಸಚಿವರಾಗಿದ್ದಾರೆ. ಹಲವು ಲಕ್ಷ ಕೋಟಿ ರೂಪಾಯಿಗಳ ವಾರ್ಷಿಕ ವಹಿವಾಟು ಸಹಕಾರಿ ಕ್ಷೇತ್ರದಲ್ಲಿನಡೆಯುತ್ತಿದೆ. ಕರ್ನಾಟಕದಲ್ಲಿಎರಡು ಬಗೆಯ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ - ಸಾಂಪ್ರದಾಯಿಕ ಸಹಕಾರ ಸಂಘಗಳು ಮತ್ತು ಸೌಹಾರ್ದ ಸಹಕಾರಿಗಳು. ಜನಸಾಮಾನ್ಯರ ದೃಷ್ಟಿಯಿಂದ ಇವೆರಡರ ಧ್ಯೇಯೋದ್ದೇಶಗಳು ಒಂದೇ.

ಸಹಕಾರ ಕ್ಷೇತ್ರದಲ್ಲಿಅತ್ಯಂತ ಪ್ರಮುಖವಾಗಿ ನಡೆಯುತ್ತಿರುವ ಚಟುವಟಿಕೆಗಳು ಎಂದರೆ ಹಣ, ಹಾಲು ಮತ್ತು ಕೃಷಿ. ಹಣ ಅಂದರೆ ಸಾಲ ವ್ಯವಹಾರ ಮಾಡುವ ಸೊಸೈಟಿಗಳು; ಸಂಘದ ಸದಸ್ಯರಿಂದ ಠೇವಣಿ ಪಡೆದು ಸಂಘದ ಸದಸ್ಯರಿಗೆ ಸಾಲ ಸೌಲಭ್ಯ ನೀಡುವ ಸೊಸೈಟಿಗಳು. ಇಂತಹ ಸುಮಾರು 6,000 ಸಾಲ ಸೊಸೈಟಿಗಳು ಈಗ ಕಾರ್ಯನಿರ್ವಹಿಸುತ್ತಿವೆ.

ಹಾಲು ಅಂದರೆ ಹಳ್ಳಿಯ ಮನೆಮನೆಗಳಲ್ಲಿಚಿಕ್ಕ ಮತ್ತು ದೊಡ್ಡ ಪ್ರಮಾಣದಲ್ಲಿಹೈನುಗಾರಿಕೆ ಮಾಡಿ, ಬಂದ ಹಾಲನ್ನು ಸೊಸೈಟಿ ಮೂಲಕ ಹಾಲು ಒಕ್ಕೂಟಕ್ಕೆ ಕಳುಹಿಸುವ ವ್ಯವಸ್ಥೆ ಇರುವ ಸಹಕಾರ ಸಂಘಗಳು. ಕೃಷಿ ಆಧಾರಿತ ಸೊಸೈಟಿಗಳು ಅಂದರೆ ವ್ಯವಸಾಯ ಸೇವಾ ಸಹಕಾರ ಸಂಘಗಳು. ಇವು ಮೂಲತಃ ರೈತರಿಗೆ ಸೇವಾ ಸೌಲಭ್ಯ ಒದಗಿಸುವ ಸಂಘಗಳು. ಇಂತಹ ಸಹಕಾರ ಸಂಘಗಳಿಗೆ ಸರಕಾರದಿಂದ ಸಹಾಯಧನ ಸಿಗುತ್ತದೆ ಮತ್ತು ಈ ಸಹಕಾರ ಸಂಘಗಳು ನಬಾರ್ಡ್ ನಿಯಂತ್ರಣಕ್ಕೆ ಒಳಪಟ್ಟು ಕೆಲಸ ಮಾಡುತ್ತವೆ.

ನಮ್ಮ ರಾಜ್ಯದಲ್ಲಿಸುಮಾರು 16,000 ಹಾಲಿನ ಸೊಸೈಟಿಗಳಿವೆ. ಈಗ ಪ್ರತಿ ದೊಡ್ಡ ಹಳ್ಳಿಯಲ್ಲೂಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಮನೆಮನೆಗಳಿಂದ ಹಾಲನ್ನು ಸಂಗ್ರಹಿಸಿ, ಅದನ್ನು ನಿರ್ದಿಷ್ಟ ರೀತಿಯಲ್ಲಿಕ್ರೋಡೀಕರಿಸಿ ಜಿಲ್ಲಾಒಕ್ಕೂಟಕ್ಕೆ ಕಳುಹಿಸುವುದು ಹಾಲು ಸೊಸೈಟಿಯ ಜವಾಬ್ದಾರಿ. ಒಕ್ಕೂಟದಿಂದ ಬಂದ ಹಣವನ್ನು ಹಾಲು ಪೂರೈಕೆ ಮಾಡಿದ ಸದಸ್ಯರಿಗೆ ಹಂಚಿಕೆ ಮಾಡಿ, ಈ ಪ್ರಕ್ರಿಯೆಯಲ್ಲಿಸಹಕಾರ ಸಂಘಕ್ಕೆ ಸ್ವಲ್ಪ ಲಾಭ ಉಳಿಸಿಕೊಳ್ಳುವುದು ಈ ವ್ಯವಸ್ಥೆಯ ಉದ್ದೇಶ.

ಸಹಕಾರ ಸಂಘ ಅಂದ ಮಾತ್ರಕ್ಕೆ ಅವೇನು ತೆರಿಗೆ ವ್ಯಾಜ್ಯಗಳಿಂದ ಮುಕ್ತವಾಗಿಲ್ಲ. ಎಲ್ಲಾವಾಣಿಜ್ಯ ಸಂಸ್ಥೆಗಳಂತೆ ಸಹಕಾರ ಸಂಘಗಳೂ ಹಲವು ಕೋಟಿ ಮೊತ್ತದ ಆದಾಯ ತೆರಿಗೆ ವ್ಯಾಜ್ಯಗಳಲ್ಲಿಸಿಲುಕಿಕೊಂಡಿವೆ. ಇದಕ್ಕೆ ಸ್ಪಷ್ಟ ನಿಲುವಿಲ್ಲದ ಸರಕಾರಿ ಕಾನೂನುಗಳೂ ಕಾರಣ. ಶಿರಸಿಯ ತೋಟಗಾರರ ಸಹಕಾರ ಸಂಘದ (ಟಿಎಸ್ ಎಸ್ ) ಆದಾಯ ತೆರಿಗೆ ವ್ಯಾಜ್ಯವು 2010ರಲ್ಲಿಸುಪ್ರೀಂಕೋರ್ಟ್ ಮೆಟ್ಟಿಲೇರಿ ದೇಶಾದ್ಯಂತ ಪ್ರಸಿದ್ಧಿ ಪಡೆದಿತ್ತು. ಸಹಕಾರ ಸಂಘಗಳಿಗೆ ಜಿಎಸ್ ಟಿ ಕೂಡ ಅನ್ವಯವಾಗುತ್ತದೆ.

==========

ಸಹಕಾರ ಸಂಘಗಳು ಲಾಭ ಗಳಿಸಲೇ ಬೇಕು!

ಸಹಕಾರ ಸಂಘಗಳು ಲಾಭದಾಯಕ ಸಂಸ್ಥೆಗಳೇ ಆಗಿರಬೇಕು ಎಂದು ಕಾನೂನಿದೆ. ಸಹಕಾರ ಸಂಘಗಳು ಟ್ರಸ್ಟ್ ಗಳಂತೆ ದಾನ-ಧರ್ಮ ಮಾಡುವ ದತ್ತಿ ಸಂಸ್ಥೆಗಳಲ್ಲ, ಪರೋಪಕಾರಿಗಳಲ್ಲ. ಸಹಕಾರ ಸಂಘಗಳು ವ್ಯಾಪಾರಿ ಸಂಸ್ಥೆಗಳ ಹಾಗೆ ಲಾಭ ಗಳಿಸಲೇಬೇಕು. ಸಹಕಾರ ಸಂಘಗಳು ವರ್ಷದಿಂದ ವರ್ಷಕ್ಕೆ ನಷ್ಟ ಉಂಟುಮಾಡುತ್ತ ಸದಸ್ಯರ ಮೂಲ ಷೇರು ಬಂಡವಾಳವನ್ನು ಕರಗಿಸುತ್ತಿದ್ದರೆ, ಅಂತಹ ಸಹಕಾರ ಸಂಘಗಳನ್ನು ವಿಸರ್ಜಿಸುವ ಅಧಿಕಾರ ಸಹಕಾರ ಇಲಾಖೆಗಿದೆ. ಸಹಕಾರ ಸಂಘಗಳು ಲಾಭ ಗಳಿಸಲೇಬೇಕು, ಆ ಲಾಭಕ್ಕೆ ಸೂಕ್ತವಾದ ತೆರಿಗೆ ವಿನಾಯಿತಿ ಪಡೆಯಬೇಕು ಹಾಗೂ ಸದಸ್ಯರಿಗೆ ಲಾಭಾಂಶ ಹಂಚಿಕೆ ಮಾಡಬೇಕು. ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ - ಇದು ಸಹಕಾರ ಚಳವಳಿಯ ಮೂಲ ಆಶಯ.

==========

ಹಾಲು ಉತ್ಪಾದಕರ ಸಹಕಾರ ಸಂಘಗಳ ಹೆಸರು ಜಾತ್ಯತೀತ, ಪಕ್ಷಾತೀತ!

ಹಳ್ಳಿಗಳಲ್ಲಿಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ದೇವರ ಹೆಸರು ಅಥವಾ ಮಹಾನ್ ವ್ಯಕ್ತಿಗಳ ಹೆಸರು ಇಡುವಂತಿಲ್ಲ. ಆಯಾಯ ಹಳ್ಳಿಯ ಹೆಸರನ್ನು ಮಾತ್ರ ಇಡಬೇಕು. ಉದಾಹರಣೆಗೆ ಸೋಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ, ರಾಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಇತ್ಯಾದಿ. ಏಕೆಂದರೆ ಈ ಬಗ್ಗೆ ಸಹಕಾರ ಇಲಾಖೆಯ ಸ್ಪಷ್ಟ ಸುತ್ತೋಲೆ ಇದೆ. ಇಲ್ಲದಿದ್ದರೆ ಶ್ರೀ ಬಸವೇಶ್ವರ ಹಾಲು ಉತ್ಪಾದಕರ ಸಹಕಾರ ಸಂಘ ಎಂದೋ, ಶ್ರೀ ರಾಮೇಶ್ವರ ಹಾಲು ಉತ್ಪಾದಕರ ಸಹಕಾರ ಸಂಘ ಎಂದೋ ಅಥವಾ ಆ ಹಳ್ಳಿಯ ಗ್ರಾಮ ಪಂಚಾಯಿತಿ ಅಧ್ಯಕ್ಷರ ಹೆಸರೋ ಇಲ್ಲವೇ ರಾಜಕೀಯ ಪಕ್ಷದ ನಾಯಕರ ಹೆಸರೋ ಇಟ್ಟುಬಿಡುತ್ತಿದ್ದರು. ಅಷ್ಟರ ಮಟ್ಟಿಗೆ ಹಾಲು ಉತ್ಪಾದಕರ ಸಹಕಾರ ಸಂಘಗಳು ಜಾತ್ಯತೀತ, ಪಕ್ಷಾತೀತ ಹಾಗೂ ನಾಮಾತೀತ ಆಗಿವೆ.

==================

ಸೆ.30ರೊಳಗೆ ಏನೆಲ್ಲಾಆಗಬೇಕು?

ಸಹಕಾರ ಸಂಘಗಳು ಪ್ರತಿ ವರ್ಷ ಮಾರ್ಚ್ ತಿಂಗಳ ಅಂತ್ಯಕ್ಕೆ ತಮ್ಮ ಲೆಕ್ಕಪತ್ರಗಳನ್ನು ಸಿದ್ಧಪಡಿಸಿ, ಸೆಪ್ಟೆಂಬರ್ 30ರ ಒಳಗಾಗಿ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕರೆದು ಬ್ಯಾಲೆಸ್ಸ್ ಶೀಟ್ ಪ್ರಸ್ತುತಪಡಿಸಬೇಕು. ಸಂಘದ ಲಾಭದ ಪ್ರಮಾಣಕ್ಕನುಗುಣವಾಗಿ ಡಿವಿಡೆಂಡ್ (ಲಾಭಾಂಶ) ಘೋಷಣೆ ಮಾಡಬೇಕು. ಸದಸ್ಯರಿಗೆ ಉತ್ತಮ ಊಟೋಪಚಾರ ವ್ಯವಸ್ಥೆ ಮಾಡಿ, ಸಾಧನೆ ಮಾಡಿದ ಸದಸ್ಯರಿಗೆ ಸನ್ಮಾನಿಸಿ ಗೌರವಿಸಬೇಕು. ಇದು ಸಹಕಾರ ಸಂಘಗಳ ಶಿಷ್ಟಾಚಾರ.

ಸೆಪ್ಟೆಂಬರ್ 30ರೊಳಗೆ ಸದಸ್ಯರನ್ನು ಸಂತೃಪ್ತಿಗೊಳಿಸಿದ ನಂತರ, ಆದಾಯ ತೆರಿಗೆ ಇಲಾಖೆಯನ್ನು ತೃಪ್ತಿಗೊಳಿಸಬೇಕಾಗುತ್ತದೆ. ಪ್ರತಿ ವರ್ಷ ಅಕ್ಟೋಬರ್ 31ರೊಳಗೆ ವಾರ್ಷಿಕ 50,000 ರೂ. ಮೇಲ್ಪಟ್ಟು ಲಾಭ ಗಳಿಸುವ ಎಲ್ಲಾಸಹಕಾರ ಸಂಘಗಳು ಆದಾಯ ತೆರಿಗೆ ರಿಟರ್ನ್ ಸಲ್ಲಿಸಿ, ನಿಯಮಾನುಸಾರ ಸೂಕ್ತ ತೆರಿಗೆ ವಿನಾಯಿತಿಗೆ ಅರ್ಜಿ ಹಾಕಬೇಕು. ಇಲ್ಲವಾದಲ್ಲಿಎಲ್ಲಾವ್ಯಾಪಾರಿ ಸಂಸ್ಥೆಗಳಂತೆ ಸಹಕಾರ ಸಂಘಗಳೂ ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಸಂಪೂರ್ಣ ಆದಾಯ ತೆರಿಗೆಯನ್ನು ಕಟ್ಟಿ ಸಹಕಾರ ಸಂಘಗಳನ್ನು ನಡೆಸುವುದು ಅಸಾಧ್ಯದ ಮಾತು.

ತೆರಿಗೆ ದರ ಎಷ್ಟು?

ಸರಿಯಾದ ಸಮಯಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸದ ಸಹಕಾರ ಸಂಘಗಳಿಗೆ ಅನ್ವಯವಾಗುವ ತೆರಿಗೆ ದರ ಇಲ್ಲಿದೆ. ಇದಲ್ಲದೆ ಸರ್ ಚಾಜ್ ರ್ ಮತ್ತು ಸೆಸ್ ಕೂಡ ಕೆಲವು ಸಂದರ್ಭಗಳಲ್ಲಿಅನ್ವಯವಾಗುತ್ತದೆ.

* ಸಂಘದ ಲಾಭ 1 ರಿಂದ 10,000 ರೂ. ಇದ್ದರೆ: 10%

* 10,000 ದಿಂದ 20,000 ರೂ. ಇದ್ದರೆ: 20%

* 20,000 ರೂ. ಮೇಲ್ಪಟ್ಟು ಇದ್ದರೆ: 30%