ಶ್ರೀಪತಿ ಭಟ್ | ಬೆಂಗಳೂರು(ಮೇಷ, ಸಿಂಹ ಧನು-ಈ ರಾಶಿಯವರಿಗೆ ಧನ ಯೋಗ)
ಧಿ---------------------
ಮೇಷ : ಕೃಷಿ ಕೆಲಸಗಳಿಗೆ ಸಹೋದರರಿಂದ, ಮಕ್ಕಳಿಂದ ಆರ್ಥಿಕ ಸಹಾಯ ಪಡೆಯುವ ಬದಲು ಸಂಘ-ಸಂಸ್ಥೆಯಲ್ಲಿಸಾಲ ತೆಗೆದುಕೊಳ್ಳುವುದು ಉತ್ತಮ. ಸ್ನೇಹಿತರ ಅನಿವಾರ್ಯ ಸಂದರ್ಭಗಳಿಗೆ ಉದಾರ ಮನೋಭಾವ ತೋರುವಿರಿ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಬೂದು)
------------------
ವೃಷಭ : ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸಗಳಿಗೆ ಪೂರಕ ಪರೀಕ್ಷೆಗಳಿಗೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುವುದು ಒಳ್ಳೆಯದು. ಪಾಲುದಾರಿಕೆ ಬಿಟ್ಟು ಸ್ವಂತ ವ್ಯಾಪಾರ ವಹಿವಾಟು ನಡೆಸಲು ನಿರ್ಧರಿಸುವುದು ಉತ್ತಮ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಕಂದು ಕೆಂಪು)
---------------------
ಮಿಥುನ : ಯಾವುದೇ ಕ್ಷೇತ್ರದಲ್ಲಿನೀವು ಅಪೇಕ್ಷಿಸಿದ ಪ್ರಗತಿಯನ್ನು ಸಾಧಿಸುವಲ್ಲಿಯಶಸ್ವಿಯಾಗುವಿರಿ. ಕ್ರಯ-ವಿಕ್ರಯದ ಮಾತುಕತೆಗಳನ್ನು ಚಾಣಾಕ್ಷತನದಿಂದ ಆಡಿದರೆ ವ್ಯವಹಾರ ಕೈಗೂಡುವುದು. ಮರೆಗುಳಿತನವು ನಿಮ್ಮನ್ನು ಕಾಡಲಿದೆ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಬಿಳಿ)
--------------
ಕರ್ಕ : ಅಣ್ಣತಮ್ಮಂದಿರ ಮನೆಯಲ್ಲಿನ ಶುಭ ಕಾರ್ಯಗಳಲ್ಲಿಜವಾಬ್ದಾರಿ ವಹಿಸುವಿರಿ. ಆಭರಣ ಖರೀದಿಯಿಂದ ಸಂತೋಷವಾಗುವುದು. ಮದುವೆಯ ಬಟ್ಟೆ, ಆಭರಣ ಖರೀದಿಗೆ ಪರಸ್ಥಳ ಪ್ರಯಾಣ ಸಂಭವವಿದೆ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಕಪ್ಪು)
-------------
ಸಿಂಹ : ನಿಮ್ಮ ಬಗ್ಗೆ ಅಸೂಯೆಪಡುವ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳ ಜೊತೆ ಜಾಣ್ಮೆಯಿಂದ ವ್ಯವಹರಿಸಿ. ನಿಮ್ಮ ಅನಿಸಿಕೆಗಳಿಗೆ ಸ್ಪಷ್ಟ ರೂಪ ತೋರಿ ಬರಲಿದೆ. ಸಣ್ಣ ಕೈಗಾರಿಕೋದ್ಯಮಿಗಳೀಗೆ ಸರಕಾರದಿಂದ ಸಹಾಯ ದೊರೆಕಲಿದೆ.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಸುವರ್ಣ)
------------
ಕನ್ಯಾ : ಆದಾಯ ತೆರಿಗೆ ಇಲಾಖೆಯವರಿಗೆ ನಿಮ್ಮ ಲೆಕ್ಕಪತ್ರಗಳು ಸಮರ್ಪಕವಾಗಿರುವ ರೀತಿಯಲ್ಲಿವ್ಯವಹಾರವಿರಲಿ. ನಿರುದ್ಯೋಗಿಗಳು ಕೇಂದ್ರ ಸರಕಾರದ ಹುದ್ದೆಯ ನೇಮಕಾತಿಯ ಬಗ್ಗೆ ಮಾಹಿತಿ ಕಲೆ ಹಾಕಿ ಪ್ರಯತ್ನಿಸಿ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕಂದು)
------------
ತುಲಾ : ಆತ್ಮೀಯರೊಂದಿಗಿನ ದೀರ್ಘ ಕಾಲದ ವಿವಾದಗಳು ಸಂಬಂಧವನ್ನು ಹಾಳು ಮಾಡಬಹುದು. ಲೇವಾದೇವಿ ವ್ಯವಹಾರದಲ್ಲಿಭಾಗಶಃ ಅನುಕೂಲವಿದೆ. ಸಾಮಾಜಿಕ ಕಾರ್ಯದಲ್ಲಿಪಾಲ್ಗೊಂಡು ಹೆಸರು ಗಳಿಸುವಿರಿ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ನೇರಳೆ)
-----------
ವೃಶ್ಚಿಕ : ಕೆಲಸವನ್ನು ಸಮರ್ಥವಾಗಿ ನಿಭಾಯಿಸುವಲ್ಲಿಹೆಸರು ಹಾಳು ಮಾಡಿಕೊಳ್ಳುವ ಸಂಭವವಿದೆ, ಜಾಗ್ರತೆ ವಹಿಸಿ. ಮನೆಯಲ್ಲಿಧಾರ್ಮಿಕ ಕಾರ್ಯಕ್ರಮಗಳು ಸರಾಗವಾಗಿ ನೆರವೇರುವುದರಿಂದ ಹಿರಿಯ ಮನಸ್ಸಿಗೆ ಸಂತೃಪ್ತಿ.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಗುಲಾಬಿ)
----------------
ಧನು : ಸಾರ್ವಜನಿಕ ಸಂಘ-ಸಂಸ್ಥೆಗಳ ಸಂಬಂಧಿತ ವ್ಯವಹಾರದಲ್ಲಿನಿಮ್ಮ ಬುದ್ಧಿವಂತಿಕೆಯಿಂದ ಯಶಸ್ಸಿ ಪ್ರಾಪ್ತಿಯಾಗಲಿದೆ. ಕೃಷಿಕರಿಗೆ ಉತ್ತಮ ಫಸಲು ದೊರೆಕುವ ಲಕ್ಷಣವಿದ್ದು, ಮನಸ್ಸಿಗೆ ಹರ್ಷವಾಗುವುದು.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಆಕಾಶ ನೀಲಿ)
----------
ಮಕರ : ನಿಶ್ಚಿತ ಕಾರ್ಯಗಳು ಪ್ರಕೃತಿಯಲ್ಲಿನ ಅನಿಶ್ಚಿತ ಬದಲಾವಣೆಯಿಂದಾಗಿ ಹಿಂದುಮುಂದಾಗಬಹುದು. ಎಲ್ಲಕೆಲಸಗಳಲ್ಲಿಯೂ ಪ್ರಯತ್ನದಿಂದ ಕಾರ್ಯಗಳು ಸಿದ್ಧಿಸುವುವು. ಯೋಗದಿಂದ ಆರೋಗ್ಯ ವೃದ್ದಿಯಾಗುವುದು.
(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ಹಳದಿ)
----------
ಕುಂಭ : ನಿಮ್ಮ ಯೋಜನೆಗಳನ್ನು ಇತರರು ಒಮ್ಮನಸ್ಸಿನಿಂದ ಸ್ವೀಕರಿಸುವಂತೆ ಮಾಡುವ ನಿಮ್ಮ ಸಾಮರ್ಥ್ಯ ಅದ್ಭುತವಾದುದು. ಇತರರ ಭಾವನೆಗಳಿಗೆ ಬೆಲೆ ಕೊಡುವುದು ಮತ್ತು ಸಹನೆಯಿಂದ ಕೇಳುವುದನ್ನು ರೂಢಿಸಿಕೊಳ್ಳುವಿರಿ.
(ಶುಭ ಸಂಖ್ಯೆ :, ಅದೃಷ್ಟ ಬಣ್ಣ : ಹಸಿರು)
------------
ಮೀನ : ನೂತನ ಕೆಲಸ ಕಾರ್ಯಗಳ ಆರಂಭಕ್ಕೆ ಮತ್ತು ಒಡಂಬಡಿಕೆಗಳಿಗೆ ಸೂಕ್ತ ಕಾಲ. ಕೃಷಿಕರು ಪ್ರಯತ್ನಿಸಿದ ಹೊಸ ಕೆಲಸವು ಹೆಚ್ಚಿನ ಯಶಸ್ಸನ್ನು ಕೊಡುವುದು. ಬೇಳೆ ಕಾಳುಗಳ ವ್ಯಾಪಾರದಲ್ಲಿಪ್ರಗತಿ ಕಂಡುಬರುವುದು.