ನಾಪತ್ತೆಯಾದ ಎಂಜಿನಿಯರ್ ತಂದೆಗೆ ಧೈರ್ಯ ಹೇಳಿದ ಖಂಡ್ರೆ

Contributed by: KENCHE GOWDA|Vijaya Karnataka•
government takes firm steps to find missing engineer
ಬೆಂಗಳೂರು: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿರುವ ಕೆಆರ್ ಐಡಿಎಲ್ ಗದಗ ಉಪವಿಭಾಗದ ಎಇಇ ಪರ್ವೇಜ್ ಪತ್ತೆಗೆ ಸರಕಾರ ಅಗತ್ಯ ಕ್ರಮ ಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ. ಪರ್ವೇಜ್ ತಂದೆ ಜಾಫರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಧೈರ್ಯ ಹೇಳಿದ ಸಚಿವರು, ‘‘ಡಿಸಿ, ಎಸ್ಪಿ ಹಾಗೂ ಡಿಜಿಪಿಯವರೊಂದಿಗೆ ಮಾತನಾಡಿದ್ದು, ಪರ್ವೇಜ್ ಹುಡುಕಲು ಎಲ್ಲಕ್ರಮ ಕೈಗೊಳ್ಳಲು ಸೂಚಿಸಲಾಗಿದೆ,’’ ಎಂದು ಹೇಳಿದರು. ‘‘ಸರಕಾರದಲ್ಲಿಹಣದ ಕೊರತೆಯಿಲ್ಲ. ಗುತ್ತಿಗೆದಾರರಿಗೆ ಹಣ ಪಾವತಿ ವಿಚಾರದಲ್ಲಿಪರ್ವೇಜ್ ಆತಂಕಪಡುವ ಅಗತ್ಯವಿಲ್ಲ. ಪರ್ವೇಜ್ ನಿಮ್ಮನ್ನು ಸಂಪರ್ಕಿಸಿದರೆ ಧೈರ್ಯ ಹೇಳಿ. ಈ ಪ್ರಕರಣದ ಬಗ್ಗೆ ತನಿಖೆಗೆ ಸೂಚಿಸಲಾಗಿದ್ದು, ಪರ್ವೇಜ್ ಅವರಿಗೆ ನ್ಯಾಯ ಕೊಡಿಸುತ್ತೇನೆ’’ ಎಂದು ಭರವಸೆ ನೀಡಿದರು.