ಲವಲವಿಕೆ ಸುದ್ದಿಲೋಕಯಾವ ಕೆಲಸ ಮಾಡಲಿಕ್ಕೂ ಮನಸ್ಸಿಲ್ಲ. ದೇಹದ ಶಕ್ತಿಯೆಲ್ಲಉಡುಗಿ ಹೋದ ಭಾವ. ಇದ್ದಕ್ಕಿದ್ದಂತೆ ಶುರುವಾದ ಆತಂಕದೊಂದಿಗೆ ಕೇವಲ ಮಾನಸಿಕ ಏರಿಳಿತವಲ್ಲ, ದೈಹಿಕ ಆರೋಗ್ಯವೂ ಸಂಬಂಧ ಹೊಂದಿದೆ.
ಸಾಮಾನ್ಯವಾಗಿ ಕರುಳು ಎಂದರೆ ಕೇವಲ ಆಹಾರವನ್ನು ಜೀರ್ಣಿಸಿಕೊಳ್ಳುವ ಅಂಗ ಎಂದುಕೊಳ್ಳುತ್ತೇವೆ. ಆದರೆ, ನಮ್ಮ ದೇಹದ ಶೇಕಡಾ 90 ರಷ್ಟು ಹಾರ್ಮೋನ್ ಗಳು ಮತ್ತು ಸೂಕ್ಷ್ಮಜೀವಿಗಳ ಸಮತೋಲನವು ಇಲ್ಲೇ ನಿರ್ಧರಿತವಾಗುತ್ತದೆ. ನಮ್ಮ ಮನಸ್ಥಿತಿ ಮತ್ತು ಶಕ್ತಿ ಉತ್ತಮವಾಗಿರಲು ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕರುಳಿನ ಆರೋಗ್ಯ ಕೆಟ್ಟಾಗ ಅಥವಾ ಅದರ ಚಟುವಟಿಕೆಯಲ್ಲಿಅಸಮತೋಲನ ಉಂಟಾದಾಗ ಕೆಲವು ಲಕ್ಷಣಗಳು ಮನೋದೈಹಿಕವಾಗಿ ಕಾಣಿಸುತ್ತವೆ. ಅವುಗಳ ಬಗ್ಗೆ ವಿವರ ಇಲ್ಲಿದೆ.
ಸದಾ ಆಯಾಸ ಮತ್ತು ನಿದ್ರಾಹೀನತೆ
ಮೂಡ್ ಹಾಗೂ ನಿದ್ರೆಯನ್ನು ನಿಯಂತ್ರಿಸುವ ಸೆರೊಟೋನಿನ್ ಎಂಬ ಹಾರ್ಮೋನ್ ಹೆಚ್ಚಿನ ಪ್ರಮಾಣದಲ್ಲಿಉತ್ಪತ್ತಿಯಾಗುವುದು ಕರುಳಿನಲ್ಲಿ. ಕರುಳಿನ ಬ್ಯಾಕ್ಟೀರಿಯಾಗಳಲ್ಲಿಸಮತೋಲನ ತಪ್ಪಿದಾಗ ಸೆರೊಟೋನಿನ್ ಉತ್ಪಾದನೆ ಕಡಿಮೆಯಾಗಿ, ನಿದ್ರಾಹೀನತೆ ಮತ್ತು ದಿನವಿಡೀ ಆಯಾಸ ಆವರಿಸುತ್ತದೆ.
ಹಠಾತ್ ಮನಸ್ಥಿತಿಯ ಬದಲಾವಣೆ
ಸಂತೋಷ ಮತ್ತು ಶಕ್ತಿಯನ್ನು ನೀಡುವ ಡೋಪಮೈನ್ ಹಾಗೂ ಸೆರೊಟೋನಿನ್ ನಂತಹ ಕೆಮಿಕಲ್ ಗಳನ್ನು ಕರುಳಿನ ಬ್ಯಾಕ್ಟೀರಿಯಾಗಳು ನಿಯಂತ್ರಿಸುತ್ತವೆ. ಕರುಳಿನ ಆರೋಗ್ಯ ಸರಿ ಇಲ್ಲದಿದ್ದರೆ ಮಾನಸಿಕ ಆತಂಕ, ಖಿನ್ನತೆ ಮತ್ತು ಹಠಾತ್ ಕೋಪ ಅಥವಾ ಬೇಸರ ಉಂಟಾಗಬಹುದು.
ಹೊಟ್ಟೆ ಉಬ್ಬರ
ಆಗಾಗ ಹೊಟ್ಟೆ ಉಬ್ಬರಿಸುವುದು ಸಾಮಾನ್ಯ. ಆದರೆ ಪ್ರತಿದಿನ ಹೊಟ್ಟೆಯಲ್ಲಿಕಿರಿಕಿರಿ, ಗ್ಯಾಸ್ ಮತ್ತು ಅಜೀರ್ಣವಾಗುತ್ತಿದ್ದರೆ ನಿಮ್ಮ ಜೀರ್ಣಾಂಗವ್ಯೂಹವು ಒತ್ತಡದಲ್ಲಿದೆ ಎಂದರ್ಥ. ಇದು ಕರುಳಿನಲ್ಲಿಕೆಟ್ಟ ಬ್ಯಾಕ್ಟೀರಿಯಾಗಳು ಹೆಚ್ಚಾಗಿರುವುದರ ಸ್ಪಷ್ಟ ಸೂಚನೆ.
ಬಾಕ್ಸ್
ಕರುಳಿನ ಆರೋಗ್ಯ ಸುಧಾರಣೆ ಸೂತ್ರ
ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಸಸ್ಯಾಧಾರಿತ ಆಹಾರ ಗಳನ್ನು ಹೆಚ್ಚಾಗಿ ಸೇವಿಸಿ. ಇವು ಕರುಳಿನ ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಸೂಕ್ತ ಆಹಾರ. ಅತಿಯಾದ ಸಕ್ಕರೆ, ಜಂಕ್ ಫುಡ್ ಹಾಗೂ ಸಂಸ್ಕರಿಸಿದ ಆಹಾರಗಳು ಕರುಳಿನ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ನಾಶಪಡಿಸುತ್ತವೆ.ದಿನಕ್ಕೆ ಕನಿಷ್ಠ 2-3 ಲೀಟರ್ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸುಗಮವಾಗುತ್ತದೆ. ಪ್ರತಿದಿನ 7-8 ಗಂಟೆಗಳ ನಿದ್ರೆ ಹಾಗೂ ಯೋಗ, ವಾಕಿಂಗ್ ನಂತಹ ಲಘು ವ್ಯಾಯಾಮಗಳು ಮನಸ್ಸಿನ ಒತ್ತಡವನ್ನು ತಗ್ಗಿಸಿ ಕರುಳಿನ ಚಟುವಟಿಕೆಯನ್ನು ಚುರುಕುಗೊಳಿಸುತ್ತವೆ.