ಹೈಕೋರ್ಟ್ ಪೀಠ ಪರಿಶೀಲನೆಗೆ ಸಮಿತಿ

Contributed by: srikanth.g@timesgroup.com|Vijaya Karnataka•
new high court bench formation in coastal karnataka committee constituted
ಬೆಂಗಳೂರು: ಕರಾವಳಿ ಕರ್ನಾಟಕ ಭಾಗದಲ್ಲಿಹೈಕೋರ್ಟ್ ನ ಸಂಚಾರಿ ಪೀಠ, ಇಲ್ಲವೇ ಕಾಯಂ ಪೀಠ ಸ್ಥಾಪನೆ ಮಾಡುವು ದಕ್ಕೆ ಸಂಬಂಧಿಸಿದ ಪ್ರಸ್ತಾವನೆ ಪರಿಶೀಲಿಸಲು ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಗಳ ಆದೇಶದಂತೆ ಮೂವರು ನ್ಯಾಯ ಮೂರ್ತಿಗಳ ಸಮಿತಿ ರಚನೆ ಮಾಡಿ ರಿಜಿಸ್ಟ್ರಾರ್ ಜನರಲ್ ಆದೇಶ ಹೊರಡಿಸಿ ದ್ದಾರೆ. ಸಮಿತಿಯಲ್ಲಿಹಿರಿಯ ನ್ಯಾಯ ಮೂರ್ತಿ ಗಳಾದ ನ್ಯಾ.ಅನು ಸಿವರಾಮನ್ , ನ್ಯಾ.ಎಸ್ .ಜಿ. ಪಂಡಿತ್ ಹಾಗೂ ನ್ಯಾ. ಮೊಹಮ್ಮದ್ ನವಾಜ್ ಅವರನ್ನು ಸದಸ್ಯ ರನ್ನಾಗಿ ನೇಮಿಸಲಾಗಿದೆ. ಈ ಸಮಿತಿ ಮಂಗಳೂರು/ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು- ಮಡಿಕೇರಿ, ಹಾಸನ, ದಾವಣಗೆರೆ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿವಕೀಲರ ಸಂಘಗಳು, ಅಧಿಕಾರಿಗಳು ಮತ್ತು ಸ್ಥಳೀಯರೊಂದಿಗೆ ಸಮಾ ಲೋಚನೆ ನಡೆಸಿ, ಆ ಭಾಗದಲ್ಲಿಹೈಕೋರ್ಟ್ ಪೀಠ ಸ್ಥಾಪನೆಯ ಕಾರ್ಯಸಾಧ್ಯತೆ ಕುರಿತು ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.