ತೋಟಗಾರಿಕೆ ಇಲಾಖೆ ಪರೀಕ್ಷೆ ಸುಸೂತ್ರ

Contributed by: djtrupti@gmail.com|Vijaya Karnataka•
susthira examination for horticulture department applications in kannada
ಬೆಂಗಳೂರು: ಸಹಾಯಕ ತೋಟಗಾರಿಕೆ ನಿರ್ದೇಶಕರು ಹಾಗೂ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ

ನೇಮಕಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಂಗಳವಾರ ಸುಸೂತ್ರವಾಗಿ ಪರೀಕ್ಷೆ ನಡೆಸಲಾಯಿತು. ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ನಿರ್ದೇಶಕರು ಮತ್ತು ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ಸಾಮಾನ್ಯ ಜ್ಞಾನ ಪತ್ರಿಕೆ- 1ರ ಪರೀಕ್ಷೆಗೆ ಒಟ್ಟು 4,487 ಅಭ್ಯರ್ಥಿಗಳ ಪೈಕಿ 3,679 (ಶೇ.82) ಮಂದಿ ಹಾಜರಾಗಿದ್ದರು. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್ .ಪ್ರಸನ್ನ ಹಾಗೂ ಪರೀಕ್ಷಾ ನಿಯಂತ್ರಕಿ ಅರ್ಚನಾ ಕಮಾಂಡ್ ಸೆಂಟರ್ ನಲ್ಲಿವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷೆ ಮೇಲ್ವಿಚಾರಣೆ ನಡೆಸಿದರು. ಸೆ.30ರಂದು ಉಳಿಕೆ ಮೂಲ ವೃಂದದ ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗಳ ನಿರ್ದಿಷ್ಟ ಪತ್ರಿಕೆ- 2ರ ಪರೀಕ್ಷೆ ನಡೆಯಲಿದೆ.