ವಿದ್ಯುತ್ ಮಾರ್ಗ ಚಾಲನೆ : ಸಾರ್ವಜನಿಕರಿಗೆ ಮುನ್ನೆಚ್ಚರಿಕೆ
ಮೈಸೂರು: ಕೆ.ಆರ್ .ನಗರ ತಾಲೂಕಿನಲ್ಲಿರುವ ವಿದ್ಯುತ್ ಉಪಕೇಂದ್ರದಿಂದ ನೂತನವಾಗಿ ನಿರ್ಮಿಸಲಾಗಿರುವ ಸಕ್ರ್ಯೂಟ್ ವಿದ್ಯುತ್ ಮಾರ್ಗವನ್ನು ಸೆ.15ರ ನಂತರ ಯಾವುದೇ ದಿನದಂದು ವಿದ್ಯುತ್ ಚಾಲನೆಗೊಳಿಸಲಾಗುವುದು.ಸುಮಾರು 6.21 ಕಿ.ಮೀ ವಿಸ್ತೀರ್ಣ ಹೊಂದಿರುವ ಈ ದ್ವಿಮುಖ ವಿದ್ಯುತ್ ಮಾರ್ಗವು ಕುಶಾಲನಗರ-ಕೆ.ಆರ್ .ನಗರ ಮಾರ್ಗದಿಂದ ಸಂಪರ್ಕಗೊಡು ಹಲಿಯೂರು, ಚುಂಚನಕಟ್ಟೆ, ಶ್ರೀರಾಮಪುರ ಹಾಗೂ ಮಿರ್ಲೆ ಗ್ರಾಮಗಳ ಮೂಲಕ ಹಾದುಹೋಗುತ್ತದೆ. ವಿದ್ಯುತ್ ಪ್ರವಹಿಸುವುದರಿಂದ ಸಾರ್ವಜನಿಕರು ವಿದ್ಯುತ್ ಗೋಪುರಗಳಿಗೆ ದನಕರುಗಳನ್ನು ಕಟ್ಟುವುದು, ಟವರ್ ಹತ್ತುವುದು, ತಂತಿ ಮುಟ್ಟುವುದು, ಗೋಪುರಗಳ ಬಳಿ ಗಾಳಿಪಟ ಹಾರಿಸುವುದು ಅಥವಾ ಹಗ್ಗ-ಬಳ್ಳಿಗಳನ್ನು ಎಸೆಯುವುದನ್ನು ಅಪಾಯಕಾರಿ ಮತು ಪ್ರಾಣ ಹಾನಿಯಾಗುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿ ಅಪಘಾತ ಅಥವಾ ಪ್ರಾಣಹಾನಿ ಸಂಭವಿಸಿದಲ್ಲಿಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜವಾಬ್ದಾರಿಯಾಗುವುದಿಲ್ಲಎಂದು ಕೆವಿಪ್ರನಿನಿ ಯೋಜನೆಗಳ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.