ಬಲ್ಲಂಗುಡೇಲು ಸಾರ್ವಜನಿಕ ಮೊಸರು ಕುಡಿಕೆ ಸಂಭ್ರಮ: ನಳಿನ್ ಕುಮಾರ್ ಕಟೀಲ್ ಭಾಗಿ

Contributed byyajjupnagar@gmail.com|Vijaya Karnataka
ballangudelu famous afternoon curd drinking festival
ಮಂಜೇಶ್ವರ : ಬಲ್ಲಂಗುಡೇಲು ಗೆಳೆಯರ ಬಳಗ ವತಿಯಿಂದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವವು ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತಿ ಕ್ಷೇತ್ರದ ವಠಾರದಲ್ಲಿಬಹಳ ವಿಜೃಂಭಣೆಯಿಂದ ನಡೆಯಿತು. ಬೆಳಗ್ಗೆಯಿಂದ ಸಂಜೆವರೆಗೆ ನಡೆದ ನಾನಾ ಆಟೋಟ ಸ್ಪರ್ಧೆಗಳಲ್ಲಿನೂರಾರು ಸ್ಪರ್ಧಿಗಳು ಭಾಗವಹಿಸಿದ್ದರು.

ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿಭಗವತಿ ಮಾತೆಗೆ ವಿಶೇಷ ಪ್ರಾರ್ಥನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆಟೋಟ ಸ್ಪರ್ಧೆಗಳ ಉದ್ಘಾಟನೆಯನ್ನು ಪಟ್ಟತ್ತಮೊಗರು ಮನೆತನದ ಹಿರಿಯವರಲ್ಲಿಕಿರಿಯರಾದ ಕಿರಣ್ ಕುಮಾರ್ ಆಳ್ವ ಪಟ್ಟತ್ತಮೋಗರು ಉದ್ಘಾಟಿಸಿದರು. ಶ್ರೀ ಕ್ಷೇತ್ರದ ಹಿರಿಯ ಅನುವಂಶಿಕ ಅರ್ಚಕ ವಿಶ್ವನಾಥ ಬೆಳ್ಚಪಾಡರವರನ್ನು ಸನ್ಮಾನ ಮಾಡುವ ಮೂಲಕ ಗೌರವಿಸಲಾಯಿತು.
ನಂತರ ಮಕ್ಕಳಿಗೆ, ಮಹಿಳೆಯರಿಗೆ ಮತ್ತು ಪುರುಷರಿಗೆ ನಾನಾ ಆಟೋಟ ಸ್ಪರ್ಧೆಗಳು ನಡೆದವು. ಆಟೋಟ ಸ್ಪರ್ಧೆಯ ನಿರೂಪಣೆಯನ್ನು ಲೀಲಾ ಚಂದ್ರಹಾಸ ಅಜ್ಜಿಹಿತ್ತಿಲು ನೆರವೇರಿಸಿದರು. ಬಳಿಕ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿಮುಖ್ಯ ಅತಿಥಿಯಾಗಿ ಕರ್ನಾಟಕ ಸರಕಾರದ ಮಾಜಿ ಲೋಕಸಭಾ ಸದಸ್ಯರಾದ ನಳೀನ್ ಕುಮಾರ್ ಕಟೀಲ್ ರವರು ಆಗಮಿಸಿ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ನೀಡಿದರು. ನಾರಾಯಣ ನಾಯ್ ್ಕ ನಡುಹಿತ್ತಿಲು, ಜಯರಾಜ್ ಶೆಟ್ಟಿ ಚಾರ್ಲ, ನ್ಯಾಯವಾದಿ ಎಂ. ದಾಮೋದರ ಶೆಟ್ಟಿ ಮಜಿಬೈಲು, ಜಗದೀಶ್ ಮೂಡಂಬೈಲು, ರಮೇಶ್ ಸುವರ್ಣ ಮಜ್ಜೆಲ್ , ಮೂಸಾ ಹಾಜಿ ಬೆಳಿಬಳಪು, ಸಂಘದ ಪದಾಧಿಕಾರಿಗಳಾದ ಬಶೀರ್ ಮೂಡಂಬೈಲು, ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಮಾದವ ಉಳಿಯ ಮತ್ತು ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು. ನಳಿನ್ ಕುಮಾರ್ ಕಟೀಲ್ ರವರನ್ನು ಬಳಗದ ವತಿಯಿಂದ ಸನ್ಮಾನಿಸಲಾಯಿತು. ಬಳಗದ ಅಧ್ಯಕ್ಷರಾದ ಕಾರ್ತಿಕ್ ಶೆಟ್ಟಿಯವರು ಸ್ವಾಗತಿಸಿದರು. ಕಾರ್ಯದರ್ಶಿ ಪ್ರದೀಪ್ ಶೆಟ್ಟಿಯವರು ವಂದಿಸಿದರು. ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಯಿತು.

7ಎಂಜೆಬಲ್ಲಂಗುಡೇಲು