ಕಾಸರಗೋಡು : ಇತಿಹಾಸ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಜರುಗಲಿರುವ 71ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಕಬಡ್ಡಿ ಪಂದ್ಯಾಟವನ್ನು ಹಿರಿಯ ಕ್ರೀಡಾಪಟುಗಳಾದ ಕಮಲಾಕ್ಷ ಹಾಗೂ ಕೃಷ್ಣ ನಾಯರ್ ಬೀರಂತಬೈಲು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.
ಈ ಸಂದರ್ಭ ಸಮಿತಿ ಅಧ್ಯಕ್ಷ ಸತೀಶ್ ಕಾಮತ್ , ಪ್ರಧಾನ ಕಾರ್ಯದರ್ಶಿ ಆಕಾಶ ಪ್ರಮೋದ್ , ಉಪಾಧ್ಯಕ್ಷ ರವಿ ಕೇಳುಗುಡ್ಡೆ, ಕೋಶಾಧಿಕಾರಿ ಉಪೇಂದ್ರ ಆಚಾರ್ಯ, ಕಾರ್ಯದರ್ಶಿ ರವಿ ಕೇಸರಿ, ಗಣೇಶೋತ್ಸವ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ, ಕಮಲಾಕ್ಷ ಕೆ.ಎನ್ ., ಉಮೇಶ್ ನೆಲ್ಲಿಕುಂಜೆ, ಹಿರಿಯ ಸದಸ್ಯರಾದ ಕೆ.ಎನ್ . ವೆಂಕಟ್ರಮಣ ಹೊಳ್ಳ, ಅರುಣ್ ಕುಮಾರ್ ಶೆಟ್ಟಿ, ಕಬಡ್ಡಿ ತೀರ್ಪುಗಾರ ಗಣೇಶ್ ರೆಫ್ರಿ, ಗಣೇಶ್ ಕುಂಬಳೆ ಹಾಗೂ ಕ್ರೀಡಾಪಟುಗಳು ಉಪಸ್ಥಿತರಿದ್ದರು.ಚಿತ್ರ:7ಕೆಎಸ್ ಕ್ರಿಡೆ