ಪ್ರಿಯದರ್ಶಿನಿ ಸೊಸೈಟಿ ವಾರ್ಷಿಕೋತ್ಸವ, ವೈದ್ಯಕೀಯ ಶಿಬಿರ

Contributed byvkbedra@gmail.com|Vijaya Karnataka
priyadarshini society annual celebration and medical camp held
(ಜಾಹಿರಾತು ಪಾರ್ಟಿ)

ವಿಕ ಸುದ್ದಿಲೋಕ ಮೂಡುಬಿದಿರೆ
ಹಳೆಯಂಗಡಿ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಮೂಡುಬಿದಿರೆ ಶಾಖೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ವೈದ್ಯಕೀಯ ಉಚಿತ ಶಿಬಿರ ನಾನಾ ಸಂಘ ಸಂಸ್ಥೆಗಳ ಆಶ್ರಯದಲ್ಲಿಕೊಡಂಗಲ್ಲುರಾಣೆಯಾರ್ ಸಭಾಭವನದಲ್ಲಿನಡೆಯಿತು.

ಮಾಜಿ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿ ಮಾತನಾಡಿ, ಜನಸ್ನೇಹಿ ಸೇವೆ ನೀಡಿ ಅಲ್ಪಾವಧಿಯಲ್ಲೆಪ್ರಗತಿ ಸಾಧಿಸಿದ ಪ್ರಿಯದರ್ಶಿನಿ ಸೊಸೈಟಿ ಸಾಮಾಜಿಕ ಸೇವೆಗಳಲ್ಲೂತೊಡಗಿಸಿಕೊಂಡಿರುವುದು ಶ್ಲಾಘನಾರ್ಹ ಕಾರ್ಯ. ಜನರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದರು.

ಅಧ್ಯಕ್ಷತೆ ವಹಿಸಿದ್ದ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡು ಮಾತನಾಡಿ, ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ತನ್ನ ಲಾಭಾಂಶದಲ್ಲಿಜನಪರ ಸೇವೆಯನ್ನು ಮಾಡುತ್ತಾ ಬಂದಿದೆ. ಮೂಡುಬಿದಿರೆ ಶಾಖೆಯು ಉತ್ತಮ ಅಭಿವೃದ್ಧಿ ಕಾಣುತ್ತಿದ್ದು, ಸೊಸೈಟಿಯ 5ನೇ ಶಾಖೆ ಶೀಘ್ರದಲ್ಲಿಉಡುಪಿಯಲ್ಲಿಆರಂಭವಾಗಲಿದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ಡಾ.ಆಶೀರ್ವಾದ್ , ದೇವಾಡಿಗರ ಸುಧಾರಕರ ಸಂಘದ ಅಧ್ಯಕ್ಷ ಪುರಂದರ ದೇವಾಡಿಗ, ಪುರಸಭೆ ಮಾಜಿ ಸದಸ್ಯರಾದ ಕೊರಗಪ್ಪ, ರೂಪಾ ಸಂತೋಷ್ ಶೆಟ್ಟಿ, ಯುವವಾಹಿನಿ ಅಧ್ಯಕ್ಷ ಗಿರೀಶ್ ಕೋಟ್ಯಾನ್ , ಸೊಸೈಟಿ ನಿರ್ದೇಶಕ ಧನಂಜಯ ಮಟ್ಟು, ಹೀಲಿಂಗ್ ಹ್ಯಾಂಡ್ಸ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಪ್ರಜ್ವಲ್ ಕುಲಾಲ್ , ರಾಣಿಯಾರ್ ಸಮಾಜ ಸೇವಾ ಸಂಘದ ಅಧ್ಯಕ್ಷ ರಮೇಶ್ ಕೆ.ಎಸ್ , ರೈತ ಸಂಘ ಮಾರ್ಪಾಡಿ ಘಟಕದ ಅಧ್ಯಕ್ಷ ಸುರೇಂದ್ರ ಶೆಟ್ಟಿ ಉಪಸ್ಥಿತರಿದ್ದರು.

ಸೊಸೈಟಿ ಮ್ಯಾನೇಜರ್ ಅಭಿಷ್ಠಾ ಜೈನ್ ನಿರೂಪಿಸಿದರು. ಸಿಇಒ ಸುದರ್ಶನ್ ವಂದಿಸಿದರು. ಕಟೀಲು ದುರ್ಗಾ ಸಂಜೀವಿನಿ ಮಣಿಪಾಲ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಶಿವಾನಂದ ಪ್ರಭು ನೇತೃತ್ವದ ತಂಡ ಆರೋಗ್ಯ ಶಿಬಿರ ನಡೆಸಿಕೊಟ್ಟಿತು.

ಚಿತ್ರ:9ಎಂಡಿಬಿ ಪ್ರಿಯದರ್ಶಿನಿ