ಪೆರ್ಲ: ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ ನಿವೃತ್ತ ಪ್ರಿನ್ಸಿಪಾಲ್ ಸುನೀತ್ ಕುಮಾರ್ ಡಿ.ದಂಪತಿ ಹಾಗೂ ವಾಣಿನಗರದ ಪಡ್ರೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ನಿವೃತ್ತ ಶಿಕ್ಷಕಿ ನೀಲಮ್ಮ ಅವರ ನಿವಾಸಕ್ಕೆ ತೆರಳಿ ಫಲಪುಷ್ಪಗಳನ್ನು ನೀಡಿ ಸನ್ಮಾನಿಸಲಾಯಿತು.
ಸುನಿತ್ ಕುಮಾರ್ ಡಿ. ಸನ್ಮಾನ ಸ್ವೀಕರಿಸಿ ಮಾತನಾಡಿ, ತಮ್ಮ ಔದ್ಯೋಗಿಕ ಜೀವನದ ಅನುಭವಗಳನ್ನು ಹಂಚಿಕೊಂಡರು. ಮುಖ್ಯ ಶಿಕ್ಷಕಿ ಗೀತಾಕುಮಾರಿ ಬಿ., ಹಿರಿಯ ಶಿಕ್ಷಕ ಸಚ್ಚಿದಾನಂದ, ಶಿಕ್ಷಕರಾದ ಪದ್ಮನಾಭ ಆರ್ ., ಮಿಥುನ್ ವಿ.ಆರ್ , ಮಂಜುನಾಥ್ , ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಜೇಂದ್ರ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳಾದ ತನ್ವಿತ್ , ರಕ್ಷಿತಾ ರೈ,ಹನ್ವಿತಾ ಎಂ.ಪಿ., ಕೃತಿಕಾ ಉಪಸ್ಥಿತರಿದ್ದರು.ನೀಲಮ್ಮ ಅವರ ಮನೆಯಲ್ಲಿನಡೆದ ಕಾರ ್ಯಕ್ರಮದಲ್ಲಿಮುಖ್ಯ ಶಿಕ್ಷಕಿ ಗೀತಾಕುಮಾರಿ ಬಿ., ಹಿರಿಯ ಶಿಕ್ಷಕ ವೆಂಕಟ ವಿದ್ಯಾ ಸಾಗರ್ , ಶಿಕ್ಷಕರಾದ ಗೀತಾಂಜಲಿ, ಮಂಜುನಾಥ್ , ಮಕ್ಕಳ ತಾಯಂದಿರಾದ ಪೂರ್ಣಿಮಾ , ಚಿತ್ರಾವತಿ, ಏಳನೇ ತರಗತಿ ವಿದ್ಯಾರ್ಥಿಗಳಾದ ಸಾನ್ವಿಕಾ, ಸಾತ್ವಿಕ್ , ವಿನೀಶ, ಶ್ರೀಲಕ್ಷ್ಮೀ ಭಾಗವಹಿಸಿದ್ದರು.
.................
( 7 ಪಿಎಲ್ ಸುನಿತ್ : ನಿವೃತ್ತ ಪ್ರಿನ್ಸಿಪಾಲ್ ಸುನೀತ್ ಕುಮಾರ್ ಡಿ. ಅವರನ್ನು ಸನ್ಮಾನಿಸಲಾಯಿತು.
7 ಪಿಎಲ್ ನೀಲಮ್ಮ: ನಿವೃತ್ತ ಶಿಕ್ಷಕಿ ನೀಲಮ್ಮ ಅವರನ್ನು ಸನ್ಮಾನಿಸಲಾಯಿತು. )