ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ
ಕೆಎಫ್ ಡಿ ಲಸಿಕೆ ಪರೀಕ್ಷೆ ಆರಂಭ
ವಿಕ ಸುದ್ದಿಲೋಕ ಶಿವಮೊಗ್ಗ
ಕ್ಯಾಸನೂರು ಅರಣ್ಯ ಕಾಯಿಲೆ (ಕೆಎಫ್ ಡಿ) ಲಸಿಕೆಯ ಮೊದಲನೇ ಹಂತದ ಪರೀಕ್ಷೆ ಆರಂಭವಾಗಿದ್ದು, ಒಂದು ಅಥವಾ ಎರಡು ವರ್ಷದಲ್ಲಿಸಾರ್ವಜನಿಕರಿಗೆ ಲಭ್ಯವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈದರಾಬಾದ್ ಸಂಸ್ಥೆಯು ಲಸಿಕೆಯನ್ನು ಸಿದ್ಧಪಡಿಸಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲಎಂಬುದು ಸಾಬೀತಾದ ನಂತರವಷ್ಟೇ ಜನರಿಗೆ ನೀಡಲು ಸಾಧ್ಯವಾಗಲಿದೆ. ಈ ಕುರಿತು ಐಸಿಎಂಆರ್ ನ ಮುಖ್ಯ ವೈಜ್ಞಾನಿಕ ಅಧಿಕಾರಿಯೊಂದಿಗೆ ಮಾತನಾಡಿದ್ದೇನೆ. ಲಸಿಕೆಯ ಗುಣಮಟ್ಟ, ದಕ್ಷತೆಯನ್ನು ಪ್ರಯೋಗಾಲಯದಲ್ಲಿಪರೀಕ್ಷಿಸಲಾಗಿದೆ. ಅದೆಲ್ಲವೂ ಸಾಬೀತಾಗಿರುವುದರಿಂದ ಮೊದಲ ಹಂತದ ಪರೀಕ್ಷೆಗೆ ಒಳಪಡಿಸಲಾಗಿದೆ. ಒಟ್ಟು ಎರಡು ಹಂತದ ಪರೀಕ್ಷೆ ನಂತರ ಮಾನವ ಬಳಕೆಗೆ ಲಭ್ಯವಾಗಲಿದೆ ಎಂದರು.
ಕೆಎಫ್ ಡಿ ಪರೀಕ್ಷೆಗೆ ಶಿರಸಿಯಲ್ಲಿಪ್ರಯೋಗಾಲಯ
ನಂತರ ಡಿಎಚ್ ಒ ಕಚೇರಿಯಲ್ಲಿನಡೆದ ಸಭೆಯಲ್ಲಿವಿಡಿಎಲ್ ನ ಡಿಸಿಎಂಒ ಡಾ.ಹರ್ಷವರ್ದನ್ ಮಾತನಾಡಿ, ‘ಕೆಎಫ್ ಡಿ ಬಗ್ಗೆ ಸಕಲ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 2025ರ ಜನವರಿಯಿಂದ ಇಲ್ಲಿಯವರೆಗೆ 7,155 ಜನರ ರಕ್ತದ ಮಾದರಿ ಪರೀಕ್ಷಿಸಿದ್ದು, 72 ಪಾಸಿಟಿವ್ ಪ್ರಕರಣಗಳು ಬಂದಿದೆ. ಫೆಬ್ರವರಿ ಮತ್ತು ಏಪ್ರಿಲ್ ನಲ್ಲಿಎರಡು ಸಾವು ಸಂಭವಿಸಿವೆ. 450 ಉಣ್ಣೆ ಸಂಗ್ರಹ, 229 ಮಂಗಗಳ ಸಾವು ಸಂಭವಿಸಿದೆ’ ಎಂದು ಮಾಹಿತಿ ನೀಡಿದರು.
ಮಂಗನ ಸಾವು ಕುರಿತು ಕೂಡಲೇ ವರದಿ ಮಾಡಬೇಕು. ಕೆಎಫ್ ಡಿ ನಿಯಂತ್ರಣಕ್ಕೆ ಅಗತ್ಯ ಎಲ್ಲಕ್ರಮವಹಿಸಬೇಕು. ಈ ವರ್ಷ ಬಹಳ ಜಾಗ್ರತೆಯಿಂದ ಇದ್ದು ಸೂಕ್ತ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಕೆಎಫ್ ಡಿ ಪರೀಕ್ಷೆಗೆ ಶಿರಸಿಯಲ್ಲಿಪ್ರಯೋಗಾಲಯ ಆರಂಭಿಸಲು ಅನುಮತಿ ದೊರೆತಿದ್ದು, ಇನ್ನೂ 15 ದಿನಗಳಲ್ಲಿಪ್ರಾರಂಭಿಸಲಾಗುವುದು. ಸಾಗರದ್ದು ಪ್ರಸ್ತುತ ಅಗತ್ಯವಿಲ್ಲ. ಸರ್ವೇಕ್ಷಣೆಗೆ ವಾಹನದ ಅಗತ್ಯವಿದ್ದು, ಅದನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.
ಡಾ.ಪುನೀತ್ ಹೃದಯ ಜ್ಯೋತಿ ಕಾರ್ಯಕ್ರಮದಡಿ ಎಐ ಮೂಲಕ ಹೃದಯ ಕಾಯಿಲೆ ಪತ್ತೆ ಮಾಡಿ, ಗಂಭೀರವಾಗಿದ್ದರೆ ವೈದ್ಯರಿಗೆ ರೆಫರ್ ಮಾಡಿ ಚಿಕಿತ್ಸೆ ನೀಡಲಾಗುವುದು. ಈ ಕಾರ್ಯಕ್ರಮದಡಿ ಹಲವರ ಜೀವ ಉಳಿಸಲಾಗಿದ್ದು ಈ ಬಾರಿ ಎಲ್ಲತಾಲೂಕು ಆಸ್ಪತ್ರೆಗಳಿಗೂ ಈ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದರು.
ಡಾ. ರಘುನಂದನ್ , ಡಿಎಚ್ ಒ ಡಾ.ನಟರಾಜ್ , ಎನ್ ವಿಬಿಡಿಸಿಪಿ ಅಧಿಕಾರಿ ಡಾ.ಗುಡುದಪ್ಪ ಕಸಬಿ, ಡಿಎಸ್ ಒ ಡಾ.ನಾಗರಾಜ ನಾಯ್ ್ಕ , ಆರ್ ಸಿಎಚ್ ಒ ಡಾ.ಮಲ್ಲಪ್ಪ, ಡಿಎಲ್ ಒ ಡಾ.ಕಿರಣ್ ಇತರರಿದ್ದರು.
===
ಬಿಚ್ತಿನಿ, ತೋರಸ್ತಿನಿ ಅಂತಾರಷ್ಟೆ
‘ಕೇಂದ್ರ ಸಚಿವ ಎಚ್ .ಡಿ. ಕುಮಾರಸ್ವಾಮಿ ಅವರು ತಮ್ಮ ಬಳಿ ದಾಖಲೆ ಇದೆ ಎಂದು ಹೇಳುತ್ತಾರೆಯೇ ವಿನಾ ಒಮ್ಮೆಯೂ ಅವುಗಳನ್ನು ಬಿಚ್ಚಿಲ್ಲ, ನೀಡಿಲ್ಲ. ಹೀಗಾಗಿ, ಅವರ ಆರೋಪಗಳನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಲಾಖೆವಾರು ಅನುದಾನ ಹಂಚಿಕೆ ಮಾಡುತ್ತಿಲ್ಲಎಂಬ ಕುಮಾರಸ್ವಾಮಿ ಆರೋಪದ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ ಅವರು ಪ್ರತಿಕ್ರಿಯಿಸಿದರು.
ಕುಮಾರಸ್ವಾಮಿ ಅವರು ಪೂರ್ತಿ ಮಾಹಿತಿ ಇಟ್ಟುಕೊಳ್ಳುವುದಿಲ್ಲ, ದಾಖಲೆ ತೋರಸ್ತಿನಿ ಅಂತಾರಷ್ಟೆ ಎಂದರು.
ಸರಕಾರ ಸುಭದ್ರವಾಗಿದೆ. ಯಾವುದೇ ತೊಂದರೆಗಳಿಲ್ಲ. ಇದುವರೆಗೆ ಉತ್ತಮ ಆಡಳಿತ ನೀಡಿದ್ದು, ಮುಂದೆಯೂ ಅದನ್ನೇ ಮಾಡುವೆವು. ಯಾರು ಸಿಎಂ ಆಗಬೇಕೆಂಬ ವಿಚಾರ ಹೈಕಮಾಂಡ್ ಗೆ ಬಿಟ್ಟದ್ದು. ಈ ವಿಚಾರವಾಗಿ ಬಿಜೆಪಿಯವರಂತೆ ಕಾಂಗ್ರೆಸ್ ನ ಯಾವುದೇ ಶಾಸಕರು ಶಿಸ್ತು ಮೀರಿ ಮಾತನಾಡುವುದಿಲ್ಲ, ಮಾಧ್ಯಮದವರೇ ಗೊಂದಲದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಕೇಂದ್ರ ಸರಕಾರ ತನ್ನ ವೈಫಲ್ಯವನ್ನು ಹೇಳಿಕೊಳ್ಳದೇ ರಾಜ್ಯ ಸರಕಾರದ ಮೇಲೆ ಆರೋಪ ಮಾಡುತ್ತಿದೆ. ರಾಜ್ಯದ ಸಂಸದರೇಕೆ ಇವುಗಳ ಬಗ್ಗೆ ಪ್ರಶ್ನಿಸುವುದಿಲ್ಲಎಂದರು.
===
(ಕೋಟ್ )
ಬಾಣಂತಿಯರ ಸಾವಿನ ಪ್ರಮಾಣವನ್ನು ರಾಜ್ಯದಲ್ಲಿಶೇ.24ರಷ್ಟು ಕಡಿಮೆ ಮಾಡಲಾಗಿದೆ. ಪ್ರಸ್ತುತ ಬಾಣಂತಿಯರ ಸಾವಿನ ಪ್ರಮಾಣದಲ್ಲಿಶೇ.58ರಷ್ಟಿದ್ದು, 2028ರ ಹೊತ್ತಿಗೆ ಶೇ.40ಕ್ಕೆ ಹಾಗೂ 2030ಕ್ಕೆ ಶೇ.20ಕ್ಕೆ ಇಳಿಸುವ ಗುರಿ ಇದೆ. ಈ ನಿಟ್ಟಿನಲ್ಲಿಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವ ಪಿಎಚ್ ಸಿನಲ್ಲಿಹೆರಿಗೆ ಸಂಖ್ಯೆ ಕಡಿಮೆ ಇದೆಯೋ ಆ ವೈದ್ಯರನ್ನು ತಾಲೂಕು ಆಸ್ಪತ್ರೆಗೆ ವರ್ಗಾಯಿಸಿ, ದಿನದ 24 ಗಂಟೆ ಸೇವೆ ನೀಡುವ ಯೋಜನೆ ಇದೆ. ತಾಲೂಕು ಆಸ್ಪತ್ರೆಗಳಲ್ಲಿಪ್ರಸ್ತುತ ಒಬ್ಬರು ಪ್ರಸೂತಿ ತಜ್ಞರು ಮತ್ತು ಅರಿವಳಿಕೆ ತಜ್ಞರಿದ್ದಾರೆ. ಅದರ ಪ್ರಮಾಣವನ್ನು ಎರಡಕ್ಕೇರಿಸಲಾಗುವುದು. ಈ ಮೂಲಕ ಬಾಣಂತಿಯರ ಸಾವಿನ ಪ್ರಮಾಣ ಕಡಿಮೆಯಾಗಲಿದೆ.
- ದಿನೇಶ್ ಗುಂಡೂರಾವ್ , ಆರೋಗ್ಯ ಸಚಿವ
(ಫೋಟೊ: ದಿನೇಶ್ ಗುಂಡೂರಾವ್ )
===

