ಕೂಸಿನ ಮನೆಗೆ ಭೇಟಿ, ಪರಿಶೀಲನೆ

Contributed bytotad.eranna@gmail.com|Vijaya Karnataka

ಯಲಬುರ್ಗಾ ತಾಲೂಕಿನ ಮುರಡಿ ಗ್ರಾಮದ ಕೂಸಿನ ಮನೆಗೆ ತಾಪಂ ಇಒ ನೀಲಗಂಗಾ ಬಬಲಾದ ಭೇಟಿ ನೀಡಿದರು. ಕೇಂದ್ರವು ಸಕಲ ಸೌಲಭ್ಯಗಳೊಂದಿಗೆ ತಾಲೂಕಿಗೆ ಮಾದರಿಯಾಗಿದೆ ಎಂದು ಅವರು ತಿಳಿಸಿದರು. ನರಸಾಪುರ ಬಳಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಪೂರ್ಣಗೊಂಡಿದ್ದು, ಅಲ್ಲಿ ಕಸ ವಿಲೇವಾರಿ ಹಾಗೂ ಸ್ವಸಹಾಯ ಸಂಘದ ಮಹಿಳೆಯರಿಗೆ ಕೆಲಸ ನೀಡಲು ಸೂಚಿಸಿದರು.

model of cow shelter supervisory visit to the village

ಕೂಸಿನ ಮನೆಗೆ ಭೇಟಿ, ಪರಿಶೀಲನೆ

ವಿಕ ಸುದ್ದಿಲೋಕ ಯಲಬುರ್ಗಾ

‘‘ತಾಲೂಕಿನ ಮುರಡಿ ಗ್ರಾಮದಲ್ಲಿರುವ ಕೂಸಿನ ಮನೆ ಸಕಲ ಸೌಲಭ್ಯ ಹೊಂದುವ ಮೂಲಕ ತಾಲೂಕಿಗೆ ಮಾದರಿಯಾಗಿದೆ,’’ ಎಂದು ತಾಪಂ ಇಒ ನೀಲಗಂಗಾ ಬಬಲಾದ ಹೇಳಿದರು.

ತಾಲೂಕಿನ ಮುರಡಿ ಗ್ರಾಪಂನಿಂದ ಆರಂಭಿಸಿರುವ ಕೂಸಿನ ಮನೆ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

‘‘ನರಸಾಪುರ ಗ್ರಾಮದ ಬಳಿ ಕೈಗೊಂಡಿದ್ದ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಆ ಸ್ಥಳದಲ್ಲಿಕಸ ವಿಲೇವಾರಿ ಮಾಡಬೇಕು. ಸ್ವ ಸಹಾಯ ಸಂಘದ ಮಹಿಳೆಯರಿಗೆ ಅಲ್ಲಿಕೆಲಸ ಕೊಡಬೇಕು,’’ ಎಂದರು.

ತಾಪಂ ಸಹಾಯಕ ನಿರ್ದೇಶಕ ಫಕೀರಪ್ಪ ಕಟ್ಟಿಮನಿ, ಅಕೌಂಟ್ ಆಫೀಸರ್ ಹಜರತ್ ಅಲಿ, ಐಇಸಿ ಸಂಯೋಜಕ ಶರಣಪ್ಪ ಹಾಳಕೇರಿ, ಪಿಡಿಒ ಪುಷ್ಪಲತಾ ಪಾಟೀಲ್ , ಡಿಇಒ ರಮೇಶ ಹಳ್ಳಿ, ತಾಪಂ ಸಿಬ್ಬಂದಿ ಇದ್ದರು.

ಫೋಟೋ ಕ್ಯಾಪ್ಷನ್ : 30 ವೈಎಲ್ ಬಿ02

ಮುರಡಿ ಗ್ರಾಪಂನಿಂದ ಆರಂಭಿಸಿರುವ ಕೂಸಿನ ಮನೆ ಕೇಂದ್ರಕ್ಕೆ ತಾಪಂ ಇಒ ನೀಲಗಂಗಾ ಭೇಟಿ ನೀಡಿ ಪರಿಶೀಲಿಸಿದರು.