ವಿಕ ಸುದ್ದಿಲೋಕ ಮದ್ದೂರು
ಕನ್ನಡ ಚಲನಚಿತ್ರ ರಂಗದ ಹಿರಿಯ ಹಾಸ್ಯನಟ ಉಮೇಶ್ ರಂಗಭೂಮಿ ಹಾಗೂ ಚಿತ್ರರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದು, ಅವರ ಹಾದಿಯಲ್ಲೇ ಇಂದಿನ ಯುವನಟರು ಸಾಗಬೇಕೆಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾ ಶಂಕರ್ ತಿಳಿಸಿದರು.
ಪಟ್ಟಣದ ಸಂಘಟನೆಯ ಕಚೇರಿ ಆವರಣದಲ್ಲಿಆಯೋಜಿಸಿದ್ದ ಹಿರಿಯ ಚಿತ್ರನಟ ಉಮೇಶ್ ರವರ ಶ್ರದ್ಧಾಂಜಲಿ ಕಾರ್ಯಕ್ರಮದ ವೇಳೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
‘‘ಕನ್ನಡಿಗರ ಹೃದಯದಲ್ಲಿಶಾಶ್ವತವಾಗಿ ಉಮೇಶ್ ಬೇರೂರಿದ್ದು ಅವರು ಚಿತ್ರರಂಗ ಮತ್ತು ರಂಗಭೂಮಿಯಲ್ಲಿಸಾಮಾಜಿಕ ಕ್ಷೇತ್ರದ ಕಳಕಳಿಯುಳ್ಳ ನಟನೆಯಲ್ಲಿಪಾಲ್ಗೊಂಡು ತಮ್ಮದೇ ಆದ ಛಾಪು ಮೂಡಿಸಿದ್ದು ಕಲಾವಿದ ನಮ್ಮಿಂದ ದೂರವಾಗಿದ್ದರೂ ಅವರ ಕೊಡುಗೆ ಜೀವಂತವಾಗಿವೆ ,’’ಎಂದರು.
‘‘ಸುಮಾರು 350ಕ್ಕೂ ಹೆಚ್ಚು ಸಿನಿಮಾಗಳಲ್ಲಿನಟಿಸಿ ಜತೆಗೆ ಹಾಸ್ಯ ಪ್ರದರ್ಶನಗಳನ್ನು ಕೈಗೊಂಡು ಪ್ರೇಕ್ಷಕರ ಮನಗೆದ್ದಿದ್ದು ಹಲವಾರು ದಿಗ್ಗಜ ನಟರೊಂದಿಗೆ ನಟಿಸಿದ ಕೀರ್ತಿ ಉಮೇಶ್ ಅವರಿಗೆ ಸಲ್ಲುತ್ತದೆ,’’ ಎಂದರು.
ನಾಗರಹೊಳೆ, ಕಾಮನಬಿಲ್ಲು, ಶೃತಿ ಸೇರಿದಾಗ ಹಲವಾರು ಸಿನಿಮಾಗಳಿಗೆ ರಾಜ್ಯ ಮತ್ತು ಕೇಂದ್ರ ಪ್ರಶಸ್ತಿಗಳು ಲಭಿಸಿದ್ದು, ಇವರ ಪರಿಶ್ರಮ ಸಾರ್ಥಕವಾಗಿದ್ದು ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನನ್ನು ಪ್ರಾರ್ಥಿಸಿದರು.
ನಿರ್ದೇಶಕ ಬೋರಪ್ಪ, ಸಂಘಟನೆಯ ಪದಾಧಿಕಾರಿಗಳಾದ ಎಂ.ಸಿ.ಲಿಂಗರಾಜು, ಉಮೇಶ್ , ಚೇತನ್ , ವಿ.ಡಿ.ಶ್ರೀನಿವಾಸ್ , ಚನ್ನಪ್ಪ, ಶಿವಲಿಂಗಯ್ಯ, ಸತೀಶ್ , ಕರಿಗೌಡ, ಗೂಳೇಶ್ , ರಾಮಣ್ಣ ಇದ್ದರು.
------------------
ಪೋಟೋ ಶೀರ್ಷಿಕೆಗಳು
ಎಂಡಿವೈ30ಎಂಡಿಆರ್ 4ಸಿ
ಚಿತ್ರರಂಗದ ಹಿರಿಯ ನಟ, ಹಾಸ್ಯ ಕಲಾವಿದ ಉಮೇಶ್ ಅವರ ಭಾವಚಿತ್ರಕ್ಕೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಪದಾಧಿಕಾರಿಗಳು ಪುಷ್ಪನಮನ ಸಲ್ಲಿಸಿದರು.

