ಮೈಸೂರಿನ ವ್ಯಕ್ತಿ ಬಳಿ 6.45 ಕೆ.ಜಿ ಗಾಂಜಾ ವಶಕ್ಕೆ

Contributed bybhrahmanand.arali@timesgroup.com|Vijaya Karnataka

ವಿವಿ ಠಾಣೆ ಪೊಲೀಸರು 6.45 ಕೆ.ಜಿ ಗಾಂಜಾ ಸಾಗಿಸುತ್ತಿದ್ದ ಮೈಸೂರಿನ ದೇವರಾಜ ನಾಯಕ ಭೀಮಾನಾಯಕ ಎಂಬಾತನನ್ನು ಬಂಧಿಸಿದ್ದಾರೆ. ಕೋಟನೂರ (ಡಿ) ಸಮೀಪದ ವಾಜಪೇಯಿ ಬಡಾವಣೆ ಬಳಿ ಬ್ಯಾಗ್‌ಗಳಲ್ಲಿ ಗಾಂಜಾ ಇಟ್ಟುಕೊಂಡು ಸಾಗಿಸಲು ಯತ್ನಿಸುತ್ತಿದ್ದಾಗ ದಾಳಿ ನಡೆಸಲಾಗಿದೆ. ಸುಮಾರು 6,43,300 ರೂ. ಮೌಲ್ಯದ ಗಾಂಜಾ, 1,200 ರೂ. ನಗದು ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

645 kg of ganja seized in mysore police arrest individual

ಚಿತ್ರ: ಪೊಲೀಸ್

ಬ್ಯಾಗ್ ನಲ್ಲಿಟ್ಟುಕೊಂಡು ಗಾಂಜಾ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬುಧವಾರ ಬಂಧಿಸಿರುವ ವಿವಿ ಠಾಣೆ ಪೊಲೀಸರು ಬಂಧಿಸಿರುವುದು.

***

ಮೈಸೂರಿನ ವ್ಯಕ್ತಿ ಬಳಿ 6.45 ಕೆ.ಜಿ ಗಾಂಜಾ ವಶಕ್ಕೆ

ವಿಕ ಸುದ್ದಿಲೋಕ ಕಲಬುರಗಿ

ಬ್ಯಾಗ್ ನಲ್ಲಿಟ್ಟುಕೊಂಡು ಗಾಂಜಾ ಸಾಗಣೆ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬುಧವಾರ ಬಂಧಿಸಿರುವ ವಿವಿ ಠಾಣೆ ಪೊಲೀಸರು, ಆತನಿಂದ 6.45 ಕೆ.ಜಿ ಗಾಂಜಾವನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಮೈಸೂರು ಜಿಲ್ಲೆಯ ಎಚ್ .ಡಿ.ಕೋಟೆ ತಾಲೂಕಿನ ಸೋಳೆಪುರ ಗ್ರಾಮದ ದೇವರಾಜ ನಾಯಕ ಭೀಮಾನಾಯಕ (38) ಬಂಧಿತ ಆರೋಪಿ. ನಗರದ ಕೋಟನೂರ (ಡಿ) ಸಮೀಪದ ವಾಜಪೇಯಿ ಬಡಾವಣೆ ರಸ್ತೆ ಬದಿಯಲ್ಲಿಬ್ಯಾಗ್ ಗಳಲ್ಲಿಗಾಂಜಾ ಇಟ್ಟುಕೊಂಡು, ಅದನ್ನು ಬೇರೆಡೆಗೆ ಸಾಗಿಸಲು ಯತ್ನಿಸುತ್ತಿದ್ದ. ಈ ವೇಳೆ ಖಚಿತ ಮಾಹಿತಿ ಪಡೆದ ಪಿಐ ಚಂದ್ರಶೇಖರ ತಿಗಡಿ ಮತ್ತು ತಂಡ ದಾಳಿ ನಡೆಸಿದ್ದಾರೆ. ಸುಮಾರು 6,43,300 ರೂ. ಮೌಲ್ಯದ 6 ಕೆ.ಜಿ. 450ಗ್ರಾಂ. ಗಾಂಜಾ, 1,200 ರೂ. ನಗದು, ಮೊಬೈಲ್ ಜಪ್ತಿ ಮಾಡಲಾಗಿದೆ.

ಪೊಲೀಸ್ ಕಮಿಷನರ್ ಶರಣಪ್ಪ ಎಸ್ .ಡಿ.ಅವರ ಮಾರ್ಗದರ್ಶನದಲ್ಲಿಡಿಸಿಪಿ ಪ್ರವೀಣ ನಾಯಕ್ , ಪಿಐ ಚಂದ್ರಶೇಖರ ತಿಗಡಿ, ಪಿಎಸ್ ಐ ಸಿದ್ದಪ್ಪ ಸೈದಾಪುರ, ಸಿಬ್ಬಂದಿ ಈರಣ್ಣ, ಸಂಜಯಕುಮಾರ, ವಿಠಲ…, ಪ್ರಕಾಶ, ರಾಜಕುಮಾರ ಪವಾರ, ನಾಗೇಂದ್ರ, ಶಿವಶರಣ, ಸಿದ್ದಣ್ಣ, ಮಹೇಶ, ಯಶ್ವಂತರಾವ, ಶಿವಶರಣಪ್ಪ ಅವರ ತಂಡ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.