ರಜತ್ ಸಿಡಿಲಬ್ಬರದ ಅರ್ಧ ಶತಕ

Contributed bymanjunath.gowda@timesgroup.com|Vijaya Karnataka

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ರಾಜಸ್ಥಾನ ರಾಯಲ್ಸ್‌ ವಿರುದ್ಧ 201 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ. ನಾಯಕ ರಜತ್‌ ಪಾಟೀದಾರ್‌ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ವೆಂಕಟೇಶ್‌ ಅಯ್ಯರ್‌ ಡೆತ್‌ ಓವರ್‌ಗಳಲ್ಲಿ ಮಿಂಚಿನ ಬ್ಯಾಟಿಂಗ್‌ ನಡೆಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದ ನಡುವೆಯೂ ತಂಡ ಉತ್ತಮ ಮೊತ್ತ ಗಳಿಸಿತು. ಆರ್‌ಸಿಬಿ 8 ವಿಕೆಟ್‌ ನಷ್ಟಕ್ಕೆ 201 ರನ್‌ ಗಳಿಸಿತು.

rajat patidars impactful half century leads rcb to victory in ipl

ಡೆತ್ ಓವರ್ ಗಳಲ್ಲಿಮಿಂಚಿನ ಬ್ಯಾಟಿಂಗ್ ನಡೆಸಿದ ವೆಂಕಟೇಶ್ ಅಯ್ಯರ್

ಗುವಾಹಟಿ: ಅಗ್ರ ಕ್ರಮಾಂಕದ ಬ್ಯಾಟರ್ ಗಳ ವೈಫಲ್ಯದ ನಡುವೆಯೂ ನಾಯಕ ರಜತ್ ಪಾಟೀದಾರ್ ಅವರ ಸಮಯೋಚಿತ ಅರ್ಧಶತಕ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 16ನೇ ಪಂದ್ಯದಲ್ಲಿರಾಜಸ್ಥಾನ ರಾಯಲ್ಸ್ ವಿರುದ್ಧ ಬೃಹತ್ ಮೊತ್ತ ಕಲೆಹಾಕಿತು.

ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿಶುಕ್ರವಾರ ಮಳೆಯಿಂದಾಗಿ ತಂಡವಾಗಿ ಆರಂಭವಾದ ಪಂದ್ಯದಲ್ಲಿಟಾಸ್ ಸೋತು ಬ್ಯಾಟಿಂಗ್ ಗೆ ಅವಕಾಶ ಗಿಟ್ಟಿಸಿದ ಕಳೆದ ಬಾರಿಯ ಚಾಂಪಿಯನ್ ಬೆಂಗಳೂರು ತಂಡ, 20 ಓವರ್ ಗಳಲ್ಲಿ8 ವಿಕೆಟ್ ನಷ್ಟಕ್ಕೆ 201 ರನ್ ಸಿಡಿಸಿತು. ತವರಿನಲ್ಲಿಆಡಿದ ಹಿಂದಿನ ಎರಡು ಪಂದ್ಯಗಳಲ್ಲಿಗೆದ್ದು ಬೀಗಿದ್ದ ಆರ್ ಸಿಬಿ, ಅದೇ ಹುಮ್ಮಸ್ಸಿನಲ್ಲಿಕಣಕ್ಕಿಳಿಯಿತು. ಆದರೆ ಹಿಂದಿನಂತೆ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ವಿರಾಟ್ ಕೊಹ್ಲಿಯೊಂದಿಗೆ ಇನಿಂಗ್ಸ್ ಆರಂಭಿಸಿದ ಫಿಲಿಪ್ ಸಾಲ್ಟ್ ಖಾತೆ ತೆರೆಯದೆ ವೇಗಿ ಜೋಫ್ರಾ ಆರ್ಚರ್ ಗೆ ಶರಣಾದರು. ನಂತರ ಕೊಹ್ಲಿಮತ್ತು ದೇವದತ್ ಪಡಿಕ್ಕಲ್ ಬಿರುಸಿನ ಬ್ಯಾಟಿಂಗ್ ಮೂಲಕ ತಂಡದ ರನ್ ಗತಿಯನ್ನು ಹೆಚ್ಚಿಸುವ ಪ್ರಯತ್ನ ಮಾಡಿದರು. ಆದಾಗ್ಯೂ ಹಿಂದಿನ ಪಂದ್ಯಗಳಲ್ಲಿಸತತ ಎರಡು ಅರ್ಧ ಶತಕ ಗಳಿಸಿದ್ದ ಪಡಿಕ್ಕಲ್ ಹೋರಾಟ 14 ರನ್ ದಾಟಲಿಲ್ಲ.

16 ಎಸೆತಗಳಲ್ಲಿ7 ಫೋರ್ ಸಹಿತ 32 ರನ್ ಪೇರಿಸಿದ ವಿರಾಟ್ ಕೊಹ್ಲಿ ಕೂಡ ಪವರ್ ಪ್ಲೇ ಅವಧಿಗೂ ಮುನ್ನವೇ ಔಟಾದರು. ಇದು ಆರ್ ಸಿಬಿ ಅಭಿಮಾನಿಗಳ ನಿರಾಸೆಗೆ ಕಾರಣವಾಯಿತು. ಮಧ್ಯಮ ಕ್ರಮಾಂಕದಲ್ಲಿತಂಡಕ್ಕೆ ಆಸರೆಯಾಗಬೇಕಿದ್ದ ಕೃಣಾಲ್ ಪಾಂಡ್ಯ ಬಂದಷ್ಟೇ ವೇಗದಲ್ಲಿಹಿಂತಿರುಗಿದರು. 6.2 ಓವರ್ ಗಳಲ್ಲಿ62ಕ್ಕೆ 4 ವಿಕೆಟ್ ಕಳೆದುಕೊಂಡ ಬೆಂಗಳೂರು ತಂಡ, ಸಾಧಾರಣ ಮೊತ್ತಕ್ಕೆ ಕುಸಿಯುವ ಭೀತಿ ಎದುರಿಸಿತು. ಈ ಹಂತದಲ್ಲಿನಾಯಕ ರಜತ್ ಪಾಟೀದಾರ್ ತಂಡಕ್ಕೆ ಆಸರೆಯಾದರು. ಒಂದೆಡೆ ರಜತ್ ಅಬ್ಬರದ ಬ್ಯಾಟಿಂಗ್ ಮಾಡಿದರೆ, ಮತ್ತೊಂದು ತುದಿಯಲ್ಲಿಆತಿಥೇಯರ ದಾಳಿಗೆ ನಿಯಮಿತ ವಿಕೆಟ್ ಉರುಳಿದವು. ಜಿತೇಶ್ ಶರ್ಮ, ಟಿಮ್ ಡೇವಿಡ್ ಸಣ್ಣ ಸಣ್ಣ ಮೊತ್ತಕ್ಕೆ ಔಟಾದರು. ಇದರ ನಡುವೆಯೂ ರಜತ್ ಮತ್ತು ರೊಮಾರಿಯೋ 31 ರನ್ ಗಳ ಜತೆಯಾಟ ನಿರ್ವಹಿಸಿದರು.

ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗಿದ್ದ ವೆಂಕಟೇಶ್ ಅಯ್ಯರ್ ಜತೆ 41 ರನ್ ಪಾಲುದಾರಿಕೆ ಆಟ ನಿರ್ವಹಿಸಿದ ಪಾಟೀದಾರ್ , 63 ರನ್ ಗಳ ಕೊಡುಗೆ ನೀಡಿ ಔಟಾದರು. ಮುರಿಯದ 9ನೇ ವಿಕೆಟ್ ಗೆ ಭುವನೇಶ್ವರ್ ಜತೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಅಯ್ಯರ್ , ಕೇವಲ 15 ಎಸೆತಗಳಲ್ಲಿ29 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿಯಶಸ್ವಿಯಾದರು. ರಾಯಲ್ಸ್ ಪರ ಆರ್ಚರ್ , ಬಿಷ್ಣೋಯಿ ಮತ್ತು ಬ್ರಿಜೇಶ್ ತಲಾ 2 ವಿಕೆಟ್ ಕಬಳಿಸಿದರು.

201ಕ್ಕೆ 8, ಇದು ತಂಡವೊಂದು ಐಪಿಎಲ್ ಪಂದ್ಯವೊಂದರಲ್ಲಿ100 ರನ್ ಗೆ ಮುನ್ನ 6 ವಿಕೆಟ್ ಕಳೆದುಕೊಂಡರೂ ಗಳಿಸಿದ ಗರಿಷ್ಠ ರನ್ . ರಾಜಸ್ಥಾನ ವಿರುದ್ಧ ಆರ್ ಸಿಬಿ ಶುಕ್ರವಾರ ಈ ಸಾಧನೆ ಮಾಡಿತು. 2024ರಲ್ಲಿ ಮುಂಬಯಿ ವಿರುದ್ಧ ಪಂಜಾಬ್ ತಂಡ 77ಕ್ಕೆ 6 ವಿಕೆಟ್ ಕಳೆದುಕೊಂಡರೂ ನಂತರ 183 ರನ್ ಗಳಿಸಿದ್ದು, ಹಿಂದಿನ ದಾಖಲೆ.