ಅಭ್ಯುದಯ ಕಾಲೇಜ್ ಸಾಧನೆ

Contributed bygskmblvk@gmail.com|Vijaya Karnataka

ಮುದ್ದೇಬಿಹಾಳದ ಅಭ್ಯುದಯ ಕಾಲೇಜು 2025-26ನೇ ಸಾಲಿನ ಪಿಯುಸಿ ಫಲಿತಾಂಶದಲ್ಲಿ ಶೇ.100 ಸಾಧನೆ ಮಾಡಿದೆ. ಆಸಿಫಾ ಕಾಸಿಂ ಖತಿಬ್‌ 588 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಲಕ್ಷ್ಮೇ ಬಸವರಾಜ ಮತ್ತು ಸುಶ್ಮಿತಾ ಧನ್ನೂರ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದ್ದಾರೆ. ಒಟ್ಟು 229 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 142 ಮಂದಿ ಡಿಸ್ಟಿಂಕ್ಷನ್‌ ಪಡೆದಿದ್ದಾರೆ. ಹಲವು ವಿಷಯಗಳಲ್ಲಿ ವಿದ್ಯಾರ್ಥಿಗಳು 100ಕ್ಕೆ 100 ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

abhyudaya college achieves 100 results

ಅಭ್ಯುದಯ ಕಾಲೇಜ್ ಸಾಧನೆ

ವಿಕ ಸುದ್ದಿಲೋಕ ಮುದ್ದೇಬಿಹಾಳ

ನಗರದ ಅಭ್ಯುದಯ ವಿಜ್ಞಾನ ಹಾಗೂ ವಾಣಿಜ್ಶ ಪದವಿ ಪೂರ್ವ ಕಾಲೇಜಿಗೆ 2025-26ನೇ ಸಾಲಿನ ಪಿಯು ಫಲಿತಾಂಶ ಶೇ.100ರಷ್ಟಾಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಎಮ್ .ಎನ್ .ಮದರಿ ಹೇಳಿದರು.

ಆಸಿಫಾ ಕಾಸಿಂ ಖತಿಬ್ 588 ಅಂಕಗಳೊಂದಿಗೆ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಲಕ್ಷ್ಮೇ ಬಸವರಾಜ (587) ದ್ವಿತೀಯ, ಸುಶ್ಮಿತಾ ಧನ್ನೂರ (584) ತೃತೀಯ ಸ್ಥಾನ ಪಡೆದಿದ್ದಾರೆ.

ಪರೀಕ್ಷೆ ಬರೆದ ಎಲ್ಲ229 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 142 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ , 76 ಪ್ರಥಮ, 11 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಪಾಸಾಗಿದ್ದಾರೆ. ಗಣಿತ ವಿಷಯದಲ್ಲಿ54, ಜೀವಶಾಸ್ತ್ರದಲ್ಲಿ48, ಭೌತಶಾಸ್ತ್ರದಲ್ಲಿ32 ಹಾಗೂ ರಾಸಾಯನ ಶಾಸ್ತ್ರದಲ್ಲಿ6 ವಿದ್ಯಾರ್ಥಿಗಳು 100ರಷ್ಟು ಅಂಕ ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಫೋಟೋ: 9 ಎಮ್ ಡಿಬಿಎಲ್ 2

ದ್ವಿತೀಯ ಪಿಯು ಪರೀಕ್ಷೆಯಲ್ಲಿಉತ್ತಮ ಸಾಧನೆ ಮಾಡಿದ ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಕಾಲೇಜ್ ವಿದ್ಯಾರ್ಥಿನಿಯರಿಗೆ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.