ದೋಣಿ ಮಗುಚಿ 10 ಮಂದಿ ಸಾವು

Contributed byBeeralinge gowda|Vijaya Karnataka

ಮಥುರಾದಲ್ಲಿ ದುರಂತ ಸಂಭವಿಸಿದೆ. ಬೃಂದಾವನ ಬಳಿ ಯಮುನಾ ನದಿಯಲ್ಲಿ ದೋಣಿ ಮಗುಚಿ ಬಿದ್ದು ಪಂಜಾಬ್‌ನ 10 ಮಂದಿ ಭಕ್ತರು ಮೃತಪಟ್ಟಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಲೂಧಿಯಾನದಿಂದ ಬಂದಿದ್ದ ಭಕ್ತರ ಗುಂಪು ದೋಣಿ ವಿಹಾರದಲ್ಲಿದ್ದಾಗ ಈ ಘಟನೆ ನಡೆದಿದೆ. 15 ಮಂದಿಯನ್ನು ರಕ್ಷಿಸಲಾಗಿದೆ. ಕಾಣೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

boat accident 10 people die in mathura

ಉತ್ತರ ಪ್ರದೇಶದ ಮಥುರಾದಲ್ಲಿದುರಂತ

ಮಥುರಾ : ಉತ್ತರ ಪ್ರದೇಶದ ಮಥುರಾದಲ್ಲಿರುವ ಬೃಂದಾವನ ಬಳಿ ಯಮುನಾ ನದಿಯಲ್ಲಿದೋಣಿ ಮಗುಚಿ ಬಿದ್ದು ಪಂಜಾಬ್ ಮೂಲದ 10 ಮಂದಿ ದುರ್ಮರಣ ಹೊಂದಿದ್ದಾರೆ. ಹತ್ತಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.

ಪಂಜಾಬ್ ನ ಲೂಧಿಯಾನದಿಂದ ಮಥುರಾಗೆ ಆಗಮಿಸಿದ್ದ ಭಕ್ತರ ಗುಂಪು ಬೃಂದಾವನ ಬಳಿಯ ಕೇಶಿ ಘಾಟ್ ನಲ್ಲಿದೋಣಿ ವಿಹಾರ ನಡೆಸುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ತಕ್ಷಣ ಕಾರ್ಯಾಪ್ರವೃತ್ತವಾದ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ, 15 ಮಂದಿಯನ್ನು ರಕ್ಷಿಸಿದ್ದಾರೆ. ಸಾವಿಗೀಡಾದ 10 ಮಂದಿಯ ಮೃತದೇಹ ಹೊರ ತೆಗೆಯಲಾಗಿದೆ. ಕಾಣೆಯಾದ ಭಕ್ತರಿಗೆ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘‘ಲೂಧಿಯಾನದಿಂದ 30 ಜನ ಮಥುರಾದ ಶ್ರೀಕೃಷ್ಣನ ದರ್ಶನಕ್ಕೆ ಆಗಮಿಸಿದ್ದರು. ದೇವರ ದರ್ಶನದ ಬಳಿಕ ಎರಡು ದೋಣಿ ಬಾಡಿಗೆ ಪಡೆದುಕೊಂಡು ಕೇಶಿ ಘಾಟಿಯಲ್ಲಿವಿಹಾರಕ್ಕೆ ತೆರಳಿದರು. ಈ ವೇಳೆ ಒಂದು ದೋಣಿ ಯಮುನಾ ನದಿಯಲ್ಲಿದ್ದ ತೂಗು ಸೇತುವೆಗೆ ಡಿಕ್ಕಿ ಹೊಡೆದು ಸಮತೋಲನ ತಪ್ಪಿ, ಮಗುಚಿ ಬಿದ್ದಿದೆ,’’ ಎಂದು ಡಿಐಜಿ ಶೈಲೇಶ್ ಪಾಂಡೆ ತಿಳಿಸಿದ್ದಾರೆ.

ಕಾಣೆಯಾದ ಭಕ್ತರಿಗೆ ಪೊಲೀಸರು ಮತ್ತು ಸ್ಥಳೀಯ ಆಡಳಿತ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ನುರಿತ ಈಜುಗಾರರು ನದಿಯ ಆಳವಾದ ಭಾಗಗಳಲ್ಲಿನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಜಿಲ್ಲಾಮ್ಯಾಜಿಸ್ಪ್ರೇಟ್ , ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ.