ಪಕ್ಷಿ ಸಂಕುಲಕ್ಕೆ ನೀರು, ಆಹಾರ

Contributed byblokesh71@yahoo.com|Vijaya Karnataka

ಚಳ್ಳಕೆರೆಯಲ್ಲಿ ತೀವ್ರ ಬಿಸಿಲಿನಿಂದಾಗಿ ಪಕ್ಷಿಗಳು ನೀರಿಲ್ಲದೆ ಪರದಾಡುತ್ತಿವೆ. ಇದನ್ನು ಅರಿತು ಕೋಟೆನಾಡು ಈಜುಪಟು ಸ್ನೇಹ ಬಳಗ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಪಕ್ಷಿಗಳಿಗೆ ನೀರು ಮತ್ತು ಕಾಳು ನೀಡುವ ಕಾರ್ಯ ಕೈಗೊಂಡಿದೆ. ಖಾಲಿ ಬಾಟಲ್‌, ಮಣ್ಣಿನ ಮಡಿಕೆ, ತೆಂಗಿನ ಚಿಪ್ಪುಗಳಲ್ಲಿ ನೀರು ಸಂಗ್ರಹಿಸಿ ಮರಗಳಿಗೆ ಕಟ್ಟಲಾಗಿದೆ. ಅಕ್ಕಿ, ರಾಗಿ, ಜೋಳ ಮುಂತಾದ ಕಾಳುಗಳನ್ನು ಆಹಾರಕ್ಕಾಗಿ ಇಡಲಾಗಿದೆ. ಮಳೆ ಬರುವವರೆಗೆ ಈ ಕಾರ್ಯ ಮುಂದುವರೆಯಲಿದೆ.

arrangement of water and food for birds appreciation for the kota nado swimming friends group

ಕೋಟೆನಾಡು ಈಜುಪಟು ಸ್ನೇಹ ಬಳಗದ ಕಾರ್ಯಕ್ಕೆ ಮೆಚ್ಚುಗೆ | ಖಾಲಿ ಬಾಟಲ್ , ಮಣ್ಣಿನ ಮಡಿಕೆ, ಪ್ಲಾಸ್ಟಿಕ್ ತಟ್ಟೆ, ತೆಂಗಿನ ಚಿಪ್ಪಿನಲ್ಲಿನೀರು ಸಂಗ್ರಹ(ಕಿಕ್ಕರ್ )

ಪಕ್ಷಿ ಸಂಕುಲಕ್ಕೆ ನೀರು, ಆಹಾರ

---

ವಿಕ ಸುದ್ದಿಲೋಕ ಚಳ್ಳಕೆರೆ

ಬೆಂಕಿಯಂತ ಬಿಸಿಲಿನ ಧಗೆ ತಾಳಲಾರದೆ ಪಕ್ಷಿಸಂಕುಲ ಗುಟುಕು ನೀರಿಗೂ ನಿತ್ಯ ಪರದಾಡುತ್ತಿರುವುದನ್ನು ಅರಿತು ಕೋಟೆನಾಡು ಈಜುಪಟು ಸ್ನೇಹ ಬಳಗ ಶುಕ್ರವಾರ ನಗರದ ಹೊರವಲಯದಲ್ಲಿರುವ ಸಾಲು ಮರದ ತಿಮ್ಮಕ್ಕ ಉದ್ಯಾನವನ ಒಳಗೆ ಅರಣ್ಯ ಪ್ರದೇಶದಲ್ಲಿಪಕ್ಷಿ ಸಂಕುಲಕ್ಕೆ ನೀರು ಮತ್ತು ಆಹಾರ ಒದಗಿಸುವ ಕೆಲಸ ಮಾಡಿದ್ದಾರೆ.

ಬಿಸಿಲು ಬೇಗೆಯಿಂದ ನೀರು ಸಿಗದೇ ಅನೇಕ ಪಕ್ಷಿಗಳು ಮೃತಪಡುತ್ತಿದ್ದು, ಪಕ್ಷಿಗಳ ಸಂತತಿ ಕ್ಷೀಣಿಸುತ್ತಿರುವುದರಿಂದ ಪರಿಸರದಲ್ಲಿಸಮತೋಲನ ಕಾಪಾಡಲು ಇಂತಹ ಪಕ್ಷಿ ಸಂಕುಲ ಉಳಿಸಲು ಪ್ರತಿಯೊಬ್ಬರೂ ಮನೆ ಮೇಲೆ, ಅಕ್ಕಪಕ್ಕ ಗಿಡ, ಮರದ ಟೊಂಗೆ, ಕಾಂಪೌಂಡ್ ಮೇಲೆ ಪ್ಲಾಸ್ಟಿಕ್ ಡಬ್ಬಿ, ತೆಂಗಿನ ಚಿಪ್ಪು, ಮಣ್ಣಿನ ಮಡಿಕೆ, ಮುಚ್ಚಳ ಮುಂತಾದವುಗಳಲ್ಲಿನೀರು, ಕಾಳು ಇಟ್ಟರೆ ಪಕ್ಷಿ ಸಂಕಲ ಉಳಿಸಿದಂತಾಗುತ್ತದೆ ಎನ್ನುತ್ತಾರೆ ಪಕ್ಷಿ ಪ್ರಿಯರು.

ಸಾಲುಮರದ ತಿಮ್ಮಕ್ಕ ಉದ್ಯಾನವನದ ಅರಣ್ಯ ಪ್ರದೇಶದಲ್ಲಿಅರಣ್ಯ ಅಧಿಕಾರಿಗಳ ಸಹಕಾರದಿಂದ ಪಕ್ಷಿಗಳಿಗೆ ಕುಡಿಯುವ ನೀರು, ಕಾಳು ಪೂರೈಸಲು ಖಾಲಿ ಬಾಟಲ್ , ಮಣ್ಣಿನ ಮಡಿಕೆ, ಪ್ಲಾಸ್ಟಿಕ್ ತಟ್ಟೆ, ತೆಂಗಿನ ಚಿಪ್ಪು ಮುಂತಾದವುಗಳಲ್ಲಿನೀರು ತುಂಬಿಸಿ ಮರದ ಟೊಂಗೆಗಳಿಗೆ ಕಟ್ಟಲಾಗಿದ್ದು, ಆಹಾರಕ್ಕಾಗಿ ಅಕ್ಕಿ, ರಾಗಿ, ಜೋಳ, ಗೋದಿ ಮುಂತಾದ ಕಾಳುಗಳನ್ನು ಇಡಲಾಗಿದೆ. ಮಳೆ ಬರುವವರೆಗೆ ನೀರು ಮತ್ತು ಕಾಳು ಹಾಕುವ ಸಂಕಲ್ಪ ಮಾಡಿದ್ದೇವೆ ಎನ್ನುತ್ತಾರೆ ಕೋಟೆನಾಡು ಈಜುಪಟು ಸ್ನೇಹ ಬಳಗದ ಕಾಲುವೇಹಳ್ಳಿ ರಾಘವೇಂದ್ರ.

ಕೋಟೆ ನಾಡು ಈಜುಪಟು ಸ್ನೇಹ ಬಳಗದ ರಾಘವೇಂದ್ರ, ಆರ್ . ಶಿವಮೂರ್ತಿ ಜಿ.ಕೆ.ಪ್ರವೀಣ್ ,ಸೂರ್ಯ ಎಂ.ಪ್ರಶಾಂತ ಅರುಣಕುಮಾರ್ ,ಮಂಜುನಾಥ್ ,ನವೀನ್ , ವಿಜೀತ್ , ಅರಣ್ಯ ಅಧಿಕಾರಿಗಳಾದ ಡಿಅರ್ ಎಫ್ ಒಗಳಾದ ದರ್ಶನ್ , ಗುರುಲಿಂಗಪ್ಪ, ಸಿಬ್ಬಂದಿಗಳಾದ ಇಮಾಮ್ ಹುಸೇನ್ ,ಜಗನ್ನಾಥ. ಶಿವು,ಮುರುಡಿಸ್ವಾಮಿ ಇತರರಿದ್ದರು.

---

ಕೋಟ್ //

ನಗರದ ಸಾಲು ಮರದ ತಿಮ್ಮಕ್ಕ ಉದ್ಯಾನವನ ಸುತ್ತಲೂ ಅರಣ್ಯ ಪ್ರದೇಶವಿದ್ದು, ಅರಣ್ಯ ಪ್ರದೇಶದಲ್ಲಿಹಲವು ಗಿಡಗಳು ಇರುವುದರಿಂದ ನೆರಳು ಹುಡುಕಿಕೊಂಡು ಗುಬ್ಬಿಗಳು, ಹಕ್ಕಿಗಳು, ಅಳಿಲು, ಕಾಗೆ, ಗೊರವಂಕ ಸೇರಿದಂತೆ ಹತ್ತಾರು ರೀತಿಯ ಪಕ್ಷಿಗಳು ಬರುತ್ತಿವೆ. ನೀರಿನ ಮೂಲ ಬತ್ತಿ ಹೋದ ಹಿನ್ನೆಲೆಯಲ್ಲಿಪಕ್ಷಿಗಳು ನೀರಿಲ್ಲದೇ ಪರದಾಡುವಂತಾಗಿದೆ. ಇದನ್ನು ಕಂಡು ಈ ಸಂಕಲ್ಪ ಮಾಡಲಾಗಿದೆ.

-ಮಲ್ಲೇಶ್ , ಶಿಕ್ಷಕ, ಪಕ್ಷಿ ಪ್ರಿಯರು

-----

ಪಕ್ಷಿ ಸಂಕುಲ ಉಳಿಸಲು ಎಲ್ಲರೂ ಪ್ರಯತ್ನಿಸಬೇಕು. ತಮ್ಮ ಮನೆಗಳ ಮಲೆ ಕಾಂಪೌಂಡ್ ಮೇಲೆ, ಮನೆ ಕ್ಕ ಪಕ್ಕದಲ್ಲಿನೀರು ಹಾಗೂ ಸ್ವಲ್ಪ ಕಾಳು ಇಡುವ ಮೂಲಕ ಪಕ್ಷಿ ಉಳಿವಿಗೆ ಸಹಕಾರ ಮಾಡಬೇಕಿದೆ.

-ಎನ್ .ರಾಜೇಶ್ , ಅರಣ್ಯ ಅಧಿಕಾರಿ, ಚಳ್ಳಕೆರೆ

----

10ಸಿಎಲ್ ಕೆ 2,3,4

ಚಳ್ಳಕೆರೆ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿಶುಕ್ರವಾರ ಕೋಟೆನಾಡು ಈಜುಪಟು ಸ್ನೇಹ ಬಳಗ ಪಕ್ಷಿಗಳಿಗೆ ನೀರು ಮತ್ತು ಕಾಳಿನ ವ್ಯವಸ್ಥೆ ಮಾಡುತ್ತಿರುವುದು.