ಎಫ್ ಆರ್ ಆರ್ ಒ ಆದೇಶ ಎತ್ತಿ ಹಿಡಿದ ಹೈಕೋರ್ಟ್

Contributed bysrikanth.g@timesgroup.com|Vijaya Karnataka

ಭಾರತಕ್ಕೆ ಪ್ರವಾಸಿ ವೀಸಾದಲ್ಲಿ ಬಂದು ವ್ಯಾಪಾರ ಮಾಡುತ್ತಿದ್ದ ಅಮೆರಿಕ ಪ್ರಜೆಯೊಬ್ಬರ ವಿರುದ್ಧದ ವಿದೇಶಿ ಪ್ರಾದೇಶಿಕ ನೋಂದಣಾಧಿಕಾರಿಗಳ (ಎಫ್‌ಆರ್‌ಆರ್‌ಒ) ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ವೀಸಾ ನಿಯಮಗಳನ್ನು ಉಲ್ಲಂಘಿಸಿ ವ್ಯಾಪಾರ ನಡೆಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ದೇಶ ತೊರೆಯುವಂತೆ ನೀಡಿದ್ದ ನೋಟಿಸ್‌ ಕಾನೂನುಬದ್ಧವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಈ ಪ್ರಕರಣದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

high court issues limited order to american citizen conducting business in india

* ಅಮೆರಿಕ ಪ್ರಜೆ ಅರ್ಜಿ ವಿಚಾರಣೆ

* ಪ್ರವಾಸಿ ವೀಸಾದಲ್ಲಿಬಂದು ವಾಣಿಜ್ಯ ವ್ಯವಹಾರ

ವಿಕ ಸುದ್ದಿಲೋಕ ಬೆಂಗಳೂರು

ಪ್ರವಾಸಿ ವೀಸಾದಲ್ಲಿಭಾರತಕ್ಕೆ ಬಂದು ವಾಣಿಜ್ಯ ವ್ಯವಹಾರ ನಡೆಸುತ್ತಿದ್ದ ಆರೋಪದ ಮೇಧಿರೆಧಿಗೆ ವಲಸೆ ಮತ್ತು ವಿದೇಶಿಯರ ಕಾಯಿದೆಯಡಿ ದೇಶ ತೊರೆಯುವಂತೆ ಅಮೆರಿಕ ಪ್ರಜೆಗೆ ನೋಟಿಸ್ ಜಾರಿ ಮಾಡಿದ್ದ ವಿದೇಶಿ ಪ್ರಾದೇಶಿಕ ನೋಂದಣಾಧಿಕಾರಿಗಳ (ಎಫ್ ಆರ್ ಆರ್ ಒ) ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಅಮೆರಿಕ ನಿವಾಸಿ ಜೋಸೆಫ್ ಇಗ್ನಾಜಿಯೊ ಜಾಂಬುಟೋ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

‘‘ಅರ್ಜಿದಾರರು ಇ- ಪ್ರವಾಸಿ ವೀಸಾದಲ್ಲಿಭಾರತಕ್ಕೆ ಆಗಮಿಸಿದ್ದು, ಭಾರತದಲ್ಲಿವಾಣಿಜ್ಯ ವ್ಯವಹಾರ ನಡೆಸುತ್ತಿದ್ದಾರೆ. ತನ್ನ ವ್ಯವಹಾರಕ್ಕಾಗಿ ಸಿಬ್ಬಂದಿ ನೇಮಿಸಿಕೊಂಡು ವೇತನ ಪಾವತಿಸಿದ್ದಾರೆ. ಹಲವು ಒಪ್ಪಂದಗಳನ್ನು ಮಾಡಿಕೊಂಡು ವ್ಯವಹಾರ ಕಾರ್ಯಚರಣೆಗಳನ್ನು ನಡೆಸುವುದಕ್ಕಾಗಿ ಜಾಗ ಗುತ್ತಿಗೆಗೆ ಪಡೆದುಕೊಂಡಿದ್ದಾರೆ. ಈ ರೀತಿಯ ವ್ಯವಹಾರ ನಡೆಸಲು ಇ-ಪ್ರವಾಸಿ ವೀಸಾ ಪಡೆದವರಿಗೆ ಅನುಮತಿ ಇರುವುದಲ್ಲ. ಇದು ವೀಸಾ ಷರತ್ತುಗಳ ಉಲ್ಲಂಘನೆಯಾಗಿದೆ,’’ ಎಂದು ನ್ಯಾಯಪೀಠ ಹೇಳಿದೆ.

‘ಧಿ‘ವಲಸೆ ಮತ್ತು ವಿದೇಶಿಯರು ಕಾಯಿದೆಯ ಸೆಕ್ಷನ್ 7(2)ರ ಪ್ರಕಾರ ವಿದೇಶಿಯರು ಭಾರತದಲ್ಲಿನೆಲೆಸವುದನ್ನು ನಿಯಂತ್ರಿಸುವುದಕ್ಕೆ ಅವಕಾಶವಿದೆ. ಜತೆಗೆ, ವೀಸಾ ಷರತ್ತುಗಳನ್ನು ಉಲ್ಲಂಘಿಘಿಸುವವರು, ಕಾನೂನು ಬಾಹಿರವಾಗಿ ಭಾರತದಲ್ಲಿನೆಲೆಸುವವರನ್ನು ದೇಶ ತೊರೆಯುವಂತೆ ಒತ್ತಾಯಿಸುವುದಕ್ಕೆ ಎಫ್ ಆರ್ ಆರ್ ಒಗೆ ಅಧಿಕಾರವಿದೆ. ‘‘ದೇಶ ತೊರೆಯಲು ನೋಟಿಸ್ ಜಾರಿ ಮಾಡಿರುವುದು ಕಾನೂನು ಬದ್ಧವಾಗಿದೆ. ಈ ಪ್ರಕ್ರಿಯೆಯಲ್ಲಿನ್ಯಾಯಾಲಯ ಹಸ್ತಕ್ಷೇಪ ಮಾಡಲಾಗುವುದಿಲ್ಲ,’’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:

ಅಮೆರಿಕ ಪ್ರಜೆಯಾಗಿರುವ ಅರ್ಜಿದಾರರು, 2025ರ ಆ.1ರಂದು ಪ್ರವಾಸಿ ವೀಸಾದಡಿ ಭಾರತಕ್ಕೆ ಆಗಮಿಸಿದ್ದರು. 2026ರ ಜ.15ರಂದು ತಮ್ಮ ದೇಶಕ್ಕೆ ಹಿಂದಿರುಗಿದ್ದರು. ಭಾರತದಲ್ಲಿನೆಲೆಸಿದ್ದಾಗ ಮಾರಿಷಸ್ ದೇಶದ ಮಹಿಳೆಯನ್ನು ವಿವಾಹವಾಗಿದ್ದರು. ಬಳಿಕ ಭಾರತದಲ್ಲಿನೆಲೆಸಬಹುದಾದಂತಹ ವೀಸಾ ಪಡೆದು 2026ರ ಜ.26ರಂದು ಭಾರತಕ್ಕೆ ಮರು ಪ್ರವೇಶ ಮಾಡಿದ್ದರು. ಅಲ್ಲದೆ, ಬೆಂಗಳೂರಿನಲ್ಲಿಗ್ರಾಹಕ ಸೇವಾ ಕೇಂದ್ರ ಆರಂಭಿಸುವುದಕ್ಕೆ ಪಾಲುದಾರರೊಂದಿಗೆ ಸಭೆಗಳನ್ನು ನಡೆಸಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದರು.

ಈ ನಡುವೆ, ಎಫ್ ಆರ್ ಆರ್ ಒ ಕಚೇರಿಯಿಂದ 2026ರ ಫೆ.19ರಂದು ವಲಸೆ ಮತ್ತು ವಿದೇಶಿಯರ ಕಾಯಿದೆ ಸೆಕ್ಷನ್ 7(2)ರ ಪ್ರಕಾರ ದೇಶ ತೊರೆಯುವಂತೆ ಇ-ಮೇಲ್ ಮೂಲಕ ನೋಟಿಸ್ ಜಾರಿ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಅವರು, ತಾನು ವಾಣಿಜ್ಯ ವ್ಯವಹಾರ ವೀಸಾ ಪಡೆದಿದ್ದು, ಅಧಿಕಾರಿಗಳು ತಪ್ಪಾಗಿ ಪ್ರವಾಸಿ ವೀಸಾ ಎಂಬುದಾಗಿ ಮುದ್ರೆ ಹಾಕಿದ್ದಾರೆ. ಆದ್ದರಿಂದ ವಾಣಿಜ್ಯ ವೀಸಾದಡಿ ಭಾರತದಲ್ಲಿನೆಲೆಸುವುದಕ್ಕೆ ಅನುಮತಿ ನೀಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.